Sunday, April 20, 2025
Google search engine

Homeಸ್ಥಳೀಯನಮ್ಮ ವೃತ್ತಿಯಲ್ಲೇ ಭಗವಂತನನ್ನು ಕಾಣಬೇಕು

ನಮ್ಮ ವೃತ್ತಿಯಲ್ಲೇ ಭಗವಂತನನ್ನು ಕಾಣಬೇಕು


: ಬದುಕಿಗಾಗಿ ಯಾವುದಾದರೂ ವೃತ್ತಿಯನ್ನು ಮಾಡುತ್ತೇವೆ. ಆ ವೃತ್ತಿಯಲ್ಲೇ ಭಗವಂತನ ಆರಾಧನೆ ಆಗಬೇಕಿದೆ ಎಂದು ಉಡುಪಿ ಪೇಜಾವರ ಮಠಾಧೀಶ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ತಿಳಿಸಿದರು.
ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘ ಮೈಸೂರಿನ ಹೋಟೆಲ್ ಪೈವಿಸ್ತಾದ ಸಮ್ಮಿಲನ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಹೋಟೆಲ್ ಸಹಕಾರ ಮಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ನೂತನ ಚಿಹ್ನೆ ಅನಾವರಣ ಸಮಾರಂಭದಲ್ಲಿ
ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ಅವರಿಗೆ ಹೋಟೆಲ್ ಸಹಕಾರ ಮಿತ್ರ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಶ್ರೀಗಳು, ಯಾರಾದರೂ ಸರಿ ಪ್ರತಿಯೊಂದು ವ್ಯವಹಾರ ಮಾಡುವಾಗ ಮೋಸ, ವಂಚನೆ, ಅವ್ಯವಹಾರ ಇಲ್ಲದೆ ಮಾಡಿದಾಗ ಕೃಷ್ಣನ ಅನುಗ್ರಹ ಸಿಗುತ್ತದೆ. ಅವರ ವೃತ್ತಿ ಬದುಕು ಹಸನಾಗುತ್ತದೆ ಎಂದು ತಿಳಿಸಿದರು.
ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಆಗುತ್ತಿದೆ. ರಾಮ ರಾಜ್ಯದ ಕನಸು ನನಸಾಗಬೇಕಿದೆ. ಅಂದು ರಾಮ ರಾಜ್ಯವಾಳಿದ್ದ. ಈಗಲೂ ರಾಮರಾಜ್ಯ ಆಗಬೇಕಾದರೆ ಪ್ರಜೆಗಳೆಲ್ಲ ರಾಮರಾಗಬೇಕು ಎಂದು ಸಲಹೆ ನೀಡಿದರು.
ರಾಮ ಭಕ್ತಿ ದೇಶಭಕ್ತಿ ಬೇರೆ ಬೇರೆ ಅಲ. ರಾಮನ ಸೇವೆ ದೇಶ ಸೇವೆ ಎರಡೂ ಒಂದೇ. ಯಾರ ಸೇವೆ ಮಾಡಿದರು ಅದು ರಾಮನ ಸೇವೆ ಮಾಡಿದಂತೆಯೇ ಆಗುತ್ತದೆ ಎಂದು ನುಡಿದರು. ಜೀವನವಿಡೀ ದುಡಿದು ಸಂಪಾದನೆ ಮಾಡಿದ ಹಣದಲ್ಲಿ ಒಂದು ಭಾಗವನ್ನು ಸಮಾಜ ಸೇವೆಗೆ ಮೀಸಲಿಡಬೇಕು. ಕಡುಬಡವರಿಗೆ ಚಿಕ್ಕ ಮನೆ ಕಟ್ಟಿಸಿಕೊಡಿ. ಅದು ಸಾಧ್ಯವಾಗದಿದ್ದರೆ ಐದಾರು ಜನರು ಸೇರಿ ಸಹಾಯ ಮಾಡಿ. ಶಿಕ್ಷಕರು, ವೈದ್ಯರು ಸೇರಿದಂತೆ ವಿವಿಧ ವೃತ್ತಿಯಲ್ಲಿ ಇರುವವರು ದುರ್ಬಲರಿಗೆ ನೆರವಾಗಬೇಕು. ಫಲಾನುಭವಿಗಳನ್ನು ನೀವೇ ಗುರುತಿಸಿ, ನೀವೇ ಅವರಿಗೆ ಸೌಲಭ್ಯ ತಲುಪಿಸಬೇಕು. ಇದರಿಂದ ರಾಮರಾಜ್ಯದ ಕನಸು ನನಸಾಗುತ್ತದೆ ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಿ.ನಾರಾಯಣಗೌಡ, ಉದ್ಯಮ ಅನ್ನೋದು ಹಲವರ ಕನಸು. ಆದರೆ ಉದ್ಯಮ ಎಂದರೆ ಕೇವಲ ಕನಸುಗಳ ಬೆನ್ನತ್ತಿ ಹೊರಡುವುದಲ್ಲ. ಉದ್ಯಮಿಯೊಬ್ಬನಿಗೆ ಉದ್ಯಮಶೀಲತೆ ಇರಬೇಕಾದುದು ಅತೀ ಅಗತ್ಯ ಪ್ರತಿ ಬಾರಿಯೂ ಎದುರಾಗುವ ಸವಾಲುಗಳನ್ನು ಧೈರ್ಯದಿಂದ ಎದುರಿಸಲು ಉದ್ಯಮಿ ಸಿದ್ಧವಾಗಿರಬೇಕು. ಎಲ್ಲಾ ಅಡೆತಡೆಗಳನ್ನು ನಿವಾರಿಸಿ ಗೆದ್ದೇ ಗೆಲ್ಲುತ್ತೇನೆಂಬ ಅಚಲ ಭರವಸೆಯಿರಬೇಕು. ಮೈಸೂರು ಜಿಲ್ಲೆಯಲ್ಲೂ ಸಾಕಷ್ಟು ಹಿರಿಯ ಧುರೀಣರು ಸಹಕಾರಿ ಕ್ಷೇತ್ರವನ್ನು ಬಲಿಷ್ಠವಾಗಿ ಬೆಳೆಸಿದ್ದಾರೆ. ಅಂತಹ ಮಹಾನ್ ಸಾಧಕರ ಮಾರ್ಗದರ್ಶನದಲ್ಲಿ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ಬೆಳೆಯುತ್ತಿದೆ. ಸಹಕಾರಿ ಕ್ಷೇತ್ರಕ್ಕೆ ಮೈಸೂರು ಜಿಲ್ಲೆ ನೀಡಿರುವ ಕೊಡುಗೆ ಅಪಾರವಾದದ್ದು. ಇತ್ತೀಚೆಗೆ ಕೇಂದ್ರ ಸರ್ಕಾರ ದೇಶದ ಸಹಕಾರಿ ವಲಯವನ್ನು ಮತ್ತಷ್ಟು ಬೆಳೆಸುವ ನಿಟ್ಟಿನಲ್ಲಿ ಪ್ರತ್ಯೇಕ ಸಚಿವಾಲಯ ಆರಂಭಿಸಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ ಎಂದರು.
ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುಬ್ರಮಣ್ಯ ಆತಂತ್ರಿ, ಹೋಟೆಲ್ ಮಾಲೀಕರ ಪತಿನ ಸಹಕಾರ ಸಂಘದ ಉಪಾಧ್ಯಕ್ಷ ಪಿ.ಎನ್.ಕುಂದರ್, ಕರ್ನಾಟಕ ರಾಜ್ಯ ಹೋಟೆಲ್ ಸಂಘದ ಉಪಾಧ್ಯಕ್ಷ ರವಿಶಾಸ್ತ್ರಿ ನಿರ್ದೇಶಕರುಗಳಾದ ನಾರಾಯಣ ವಿ.ಹೆಗಡೆ, ಎಂ.ಆರ್.ಪುರಾಣಿಕ್, ಕೆ.ಸಿ.ವಿಶ್ವಾನಂದ ಭಟ್, ಬಿ.ಸಿದ್ದರಾಜು, ಎಂ.ಎಸ್.ಜಯಪ್ರಕಾಶ್, ಹೇಮಂತ್ ಕುಮಾರ್, ಸಿ.ಸುಲೋಚನಾ, ಸುಮಿತ್ರ ಎ.ತಂತ್ರಿ, ಆನಂದ ಎಂ.ಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.

RELATED ARTICLES
- Advertisment -
Google search engine

Most Popular