Friday, August 22, 2025
Google search engine

Homeರಾಜ್ಯಸುದ್ದಿಜಾಲಗಣೇಶ ಪ್ರತಿಷ್ಠಾಪನೆ ನಿಯಮ ಪಾಲಿಸಿ: ಮುಖ್ಯಾಧಿಕಾರಿ

ಗಣೇಶ ಪ್ರತಿಷ್ಠಾಪನೆ ನಿಯಮ ಪಾಲಿಸಿ: ಮುಖ್ಯಾಧಿಕಾರಿ

ಯಳಂದೂರು: ಸರ್ಕಾರ ನಿಗಧಿಗೊಳಿಸಿರುವ ಮಾರ್ಗಸೂಚಿಗಳನ್ನು ಅನುಸರಿಸಿ ಗಣೇಶನನ್ನು ಪ್ರತಿಷ್ಠಾಪಿಸಬೇಕು ಎಂದು ಮುಖ್ಯಾಧಿಕಾರಿ ಎಂ.ಪಿ. ಮಹೇಶ್‌ಕುಮಾರ್ ಎಚ್ಚರಿಕೆ ನೀಡಿದರು.

ಅವರು ಗುರುವಾರ ಪಟ್ಟಣದಲ್ಲಿ ಗಣೇಶ ಮೂರ್ತಿಗಳನ್ನು ಮಾರಾಟ ಮಾಡುತ್ತಿರುವ ಅಂಗಡಿಗಳಿಗೆ ತೆರಳಿ ಇಲ್ಲಿರುವ ಮೂರ್ತಿಗಳನ್ನು ಪರಿಶೀಲಿಸಿ ಮಾತನಾಡಿದರು. ಅಂಗಡಿಯವರು ಯಾವುದೇ ಕಾರಣಕ್ಕೂ ಪಿಒಪಿ ಗಣೇಶ ಹಾಗೂ ಕೃತಕ ಬಣ್ಣವನ್ನು ಬಳಿದ ಗಣೇಶ, ಗೌರಿ ವಿಗ್ರಹಗಳನ್ನು ಮಾರಾಟ ಮಾಡಬಾರದು. ನೈಸರ್ಗಿಕ ಬಣ್ಣ ಬಳಸಿದ ಮಣ್ಣಿನ ಗಣಪವನ್ನೇ ಬಳಸಬೇಕು, ಇದೇನಾದರು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ವಹಿಸಲಾಗುವುದು. ಅಲ್ಲದೆ ಗಣೇಶ ವಿಗ್ರಹ ಪ್ರತಿಷ್ಠಾಪನೆಗೂ ಮುಂಚೆ ಕಂದಾಯ ಇಲಾಖೆಯ ಕಚೇರಿಯಲ್ಲಿ ಏಕ ಗವಾಕ್ಷಿ ತಂಡವನ್ನು ರಚನೆ ಮಾಡಲಾಗಿದೆ. ಇಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವವರು ಅರ್ಜಿಯನ್ನು ಸಲ್ಲಿಸಬೇಕು. ನಂತರ ಇವರಿಂದ ಎನ್‌ಒಸಿ ಪಡೆದುಕೊಂಡು ತಹಸೀಲ್ದಾರ್‌ರಿಂದ ಅನುಮತಿ ಪಡೆದುಕೊಳ್ಳಬೇಕು. ಸಾರ್ವಜನಿಕ ರಸ್ತೆಗಳಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಬಾರದು. ಈ ಸ್ಥಳದ ಸುತ್ತಮುತ್ತಲೂ ಸ್ವಚ್ಚತೆಯನ್ನು ಮಾಡಿಕೊಳ್ಳಬೇಕು.

ಮೈಕ್ ಬಳಸಬೇಕಾದರೆ ಇದಕ್ಕೆ ಪೊಲೀಸ್ ಇಲಾಖೆಯಲ್ಲಿ ಅನುಮತಿಯನ್ನು ಪಡೆದುಕೊಳ್ಳಬೇಕು. ಅಲ್ಲದೆ ಗಣೇಶ ವಿಸರ್ಜನೆಯ ಸಂದರ್ಭದಲ್ಲಿ ಡಿಜೆ ಬಳಸಲು ಅವಕಾಶವಿಲ್ಲ. ಗಣೇಶನ ಮೂರ್ತಿಯನ್ನು ವಿಸರ್ಜನೆ ಮಾಡಲು ಪಟ್ಟಣ ಪಂಚಾಯಿತಿಯ ವತಿಯಿಂದ ಕೃತಕ ಹೊಂಡ ನಿರ್ಮಾಣ ಮಾಡಲಾಗುವುದು ಅಲ್ಲೇ ಮೂರ್ತಿಯನ್ನು ವಿಸರ್ಜನೆ ಮಾಡಬೇಕು. ಸರ್ಕಾರದ ಮಾರ್ಗಸೂಚಿಗಳನ್ನು ದಿಕ್ಕರಿಸಿದ್ದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಸಾರ್ವಜನಿಕರು ಇಲಾಖೆಗಳೊಂದಿಗೆ ಸಹಕರಿಸಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಪರಸರ ಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ನಮ್ಮೊಂದಿಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪಟ್ಟಣದ ದೊಡ್ಡ ಅಂಗಡಿಬೀದಿ, ಬಸ್ ನಿಲ್ದಾಣ, ಕೆ.ಕೆ. ರಸ್ತೆ, ಹಳೇ ಅಂಚೆಕಚೇರಿ ರಸ್ತೆಯಲ್ಲಿರುವ ಗಣೇಶನ ಮೂರ್ತಿ ಮಾರಾಟ ಮಾಡುವ ಅಂಗಡಿಗಳಿಗೆ ಪಪಂನ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಪಂ ಸದಸ್ಯ ಮಹೇಶ್ ಪಪಂ ಸಿಬ್ಬಂಧಿಗಳಾದ ಮದನ್, ಮಲ್ಲಿಕಾರ್ಜುನಸ್ವಾಮಿ ಸೇರಿದಂತೆ ಅನೇಕರು ಇದ್ದರು.


೨೧ವೈಎಲ್‌ಡಿ ಚಿತ್ರ೦೧ ಯಳಂದೂರು ಪಟ್ಟಣದಲ್ಲಿ ಗುರುವಾರ ಪಟ್ಟಣ ಪಂಚಾಯಿತಿ ಅಧಿಕಾರಿಗಳ ತಂಡ ಗಣೇಶನಮೂರ್ತಿಗಳನ್ನು ಮಾರಾಟ ಮಾಡುವ ಅಂಗಡಿ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಮುಖ್ಯಾಧಿಕಾರಿ ಎಂ.ಪಿ. ಮಹೇಶ್‌ಕುಮಾರ್ ಸದಸ್ಯ ಮಹೇಶ್ ಸೇರಿದಂತೆ ಇತರರು ಇದ್ದರು.

RELATED ARTICLES
- Advertisment -
Google search engine

Most Popular