ಹುಣಸೂರು: ಪರಿಸರ ಉಳಿಯಬೇಕಾದರೆ ಸಸಿಗಳನ್ನು ನೆಟ್ಟರೆ ಸಾಲದು ಅದನ್ನು ಪೋಷಿಸಿಸುವ ಕೆಲಸವಾಗಬೇಕೆಂದು ರೋಟರಿ ಅಧ್ಯಕ್ಷ ಹೆಚ್.ಆರ್.ಕೃಷ್ಣಕುಮಾರ್ ಮಕ್ಕಳಿಗೆ ಕಿವಿಮಾತು ಹೇಳಿದರು.
ಹುಣಸೂರು ರೋಟರಿ ಕ್ಲಬ್ ಮತ್ತು ನಂಜುಂಡೇಶ್ವರ ನರ್ಸರಿ ಸಹಯೋಗದಲ್ಲಿ ವನಸಿರಿ ಯೋಜನೆಯಲ್ಲಿ ನಗರದ ಸರಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯ ಆವರಣದಲ್ಲಿ 25 ಹೊಂಗೆ, ನೇರಳೆ, ನಲ್ಲಿ ಸಸಿಗಳನ್ನು ನೀಡಿ, ಮಾತನಾಡಿದ ಅವರು, ಪ್ರಕೃತಿಗೆ ಆದಾರ ಸ್ತಂಭವಾಗಿರುವ ಗಿಡ ಮರಗಳನ್ನು ಬೆಳಸುವುದರಿಂದ, ಬರಿ ಫಲವನ್ನು ನೀಡುವುದಿಲ್ಲ. ಜತೆಗೆ ಉತ್ತಮ ಗಾಳಿ, ತಂಪಿನ ನೆರಳು ನೀಡಲಿದೆ. ಆದ್ದರಿಂದ ಗಿಡ,ಮರಗಳಿಗೆ ನೀರೆರೆದು ಪೋಷಣೆ ಮಾಡಿ ಎಂದರು.
ಪ್ರತಿವರ್ಷವೂ ಪರಿಸರ ಸಮತೋಲನದ ವನಸಿರಿ ಜಿಲ್ಲಾ ಯೋಜನೆಯಲ್ಲಿ ರೋಟರಿ ಕ್ಲಬ್ ವತಿಯಿಂದ ಶಾಲಾ ಆವರಣ, ಅರಣ್ಯ ಪ್ರದೇಶ, ರಸ್ತೆ ಬದಿಯಲ್ಲಿ ಹಸಿರು ಪರಿಸರ ನಿರ್ಮಿಸುವಲ್ಲಿ ಪ್ರಮುಖ ಪಾತ್ರವಹಿಸಿ ಮುಂಚೂಣಿಯಲ್ಲಿದೆ ಎಂದರು.
ಕಾರ್ಯಕ್ರಮದಲ್ಲಿ ರೊ.ರವೀಶ್ ಗುಪ್ತ, ರೊ.ಚಿಲ್ಕುಂದ ಮಹೇಶ್, ಹಾಗೂ ನಂಜುಂಡೇಶ್ವರ ನರ್ಸರಿ ಮಾಲಿಕ ಅರುಣ್ ಕುಮಾರ್, ಎಸ್.ಡಿ.ಎಂ.ಸಿ .ಸದಸ್ಯ ಹರೀಶ್, ಶಿಕ್ಷಕ ಶ್ಯಾಮ್ ಸುಂದರ್, ಇದ್ದರು.