ಬೆಂಗಳೂರು : ನಗರದಲ್ಲಿರುವ ಪದ್ಮನಾಭನಗರ ವಲಯ-36 ರ ವ್ಯಾಪ್ತಿಯಲ್ಲಿ ಅಪರಿಚಿತರು ನೀಡಿದ ಸುಳಿವಿನ ಮೇರೆಗೆ ಅಬಕಾರಿ ನಿರೀಕ್ಷಕರು ನೈಸ್ ರಸ್ತೆಯ ಟೋಲ್ ಬಳಿ ದಾಳಿ ನಡೆಸಿದಾಗ ಪಾಂಡಿಚೇರಿಯಿಂದ ಬೆಂಗಳೂರಿಗೆ BHARATH BENZ ನಂದಿನಿ ಹಾಲಿನ ಟ್ಯಾಂಕರ್ (ವಾಹನ ಸಂಖ್ಯೆ KA-13 D-1827) ನಲ್ಲಿ ಆಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 05 ಲೀಟರ್ ನಕಲಿ ಮದ್ಯವನ್ನು ಜಪ್ತಿ ಮಾಡಿ, ವಾಹನ ಮತ್ತು ಚಾಲಕ ಗಣೇಶ್ ಸೇರಿದಂತೆ, ರೂ. 22,04,170/- ಮೌಲ್ಯದ ನಕಲಿ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಬೆಂಗಳೂರು ನಗರ ಜಿಲ್ಲೆ-06, ಅಬಕಾರಿ ಉಪ ಆಯುಕ್ತರಾದ ಎಂ,ರಂಗಪ್ಪ, ಅಬಕಾರಿ ನಿರೀಕ್ಷಕರಾದ ಮಮತ ಮತ್ತು ಮೀನ, ಅಬಕಾರಿ ಉಪ ಅಧೀಕ್ಷಕರಾದ ರವಿ ಕುಮಾರ್ ಮತ್ತು ಹಿದಾಯತ್ ಖಲೀಲ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.