ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸ್ವಯಂ ಸೇವಾ ಸಂಸ್ಥೆಗಳಿಗೆ ಉಳ್ಳವರು ನೆರವು ನೀಡುವ ಮೂಲಕ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೆರವಾಗಬೇಕು ಎಂದು ಲಯನ್ಸ್ ಸಂಸ್ಥೆಯ ಅಧ್ಯಕ್ಷ ಜಯರಾಮ್ ಹೇಳಿದರು.
ಸಾಲಿಗ್ರಾಮ ತಾಲೂಕಿನ ಹೊಸೂರು ಸಮೀಪದ ಏಮ್ ಫಾರ್ ಸೇವಾ ಸಂಸ್ಥೆಯ ಬಾಲಕರ ವಸತಿ ನಿಲಯದ ವಿಧ್ಯಾರ್ಥಿಗಳಿಗೆ ಲಯನ್ಸ್ ಕಬ್ಲ್ ಅಪ್ ಮೈಸೂರು ಚಂದನ ಸಂಸ್ಥೆಯ ವತಿಯಿಂದ ಉಚಿತ ದಿನಸಿ ಸಾಮಗ್ರಿಗಳನ್ನು ವಿತರಿಸಿ ಅವರು ಮಾತಾನಾಡಿದರು.
ಸಮಾಜದಲ್ಲಿ ಇಂದಿಗೂ ಮೂಲಭೂತ ಸೌಲಭ್ಯಗಳನ್ನೇ ಅನುಭವಿಸದ ವರ್ಗದ ಮಕ್ಕಳು ಸಾಕಷ್ಟು ಪ್ರಮಾಣದಲ್ಲಿ ಇದ್ದು ಅಂತಹ ಮಕ್ಕಳನ್ನೇ ಗುರುತಿಸಿ ಈ ಸಂಸ್ಥೆಯ ಮೂಲಕ ಅವರಿಗೆ ಉಚಿತ ಊಟ,ಶಿಕ್ಷಣ ವಸತಿ ಒದಗಿಸುತ್ತಿರುವುದು ಸಂತಸದ ಸಂಗತಿಯಾಗಿದ್ದು ಈ ಕಾರ್ಯಕ್ರಮದ ಮೂಲಕ ಸಂಸ್ಥೆಯ ಕಾರ್ಯಕ್ಕೆ ನಾವು ಕೈಜೋಡಿಸಿರುವುದು ಹೆಮ್ಮೆ ತಂದಿದೆ ಎಂದರು.

ನಮ್ಮ ಸಂಸ್ಥೆಯು ಇಂತಹ ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡು ಬಡವಿದ್ಯಾರ್ಥಿಗಳಿಗೆ ಸದಾ ಕಾಲ ನೆರವು ನೀಡುವ ಮೂಲಕ ಅವರ ಭವಿಷ್ಯದ ಶಿಕ್ಷಣಕ್ಕೆ ತಮ್ಮದೇ ಅದ ಕೊಡುಗೆ ನೀಡುತ್ತಿದ್ದು ಇಂತಹ ಸಮಾಜ ಮುಖಿ ಕಾರ್ಯಕ್ರಮಗಳಿಗೆ ಸಂಘ ಸಂಸ್ಥೆಗಳು ಮುಂದಾಗುವ ಮೂಲಕ ಸಂಸ್ಥೆ ಸ್ಥಾಪನೆ ಉದ್ದೇಶವನ್ನು ಈಡೇರಿಸ ಬೇಕೆಂದರು.
ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರಾದ ಎಚ್.ಎಸ್. ಸುರೇಶ್ ಬಾಬು, ಬಿ.ಎಸ್.ಸ್ವಾಮಿ, ಜಯಂತ್ ಚಿಕ್ಕಸಿದ್ದೇಗೌಡ, ರವಿಲಿಂಗಪ್ಪ,ಮಾದೇಶ, ಹೇಮಂತ್ ಕುಮಾರ್,, ಕಾರ್ಯದರ್ಶಿ ಎಚ್.ಎ.ರಾಘವೇಂದ್ರ, ಖಜಾಂಚಿ ಸಂಪತ್ ಕುಮಾರ್, ಸೇವಾ ಕಾರ್ಯ ಸಂಚಾಲಯ ಮಿರ್ಲೆ ಗಣೇಶ್, ಸದಸ್ಯರಾದ ಪುನೀತ್, ಲೋಹಿತ್, ಕೆ.ಅರ್.ನಗರ ಚೆಸ್ಕಾಂ ಇಂಜಿನಿಯರ್ ಸಿರಿಯೂರು ಪ್ರಶನ್ನ, ಎಲ್.ಐ.ಸಿ.ಸಲಹೆಗಾರ ದೊಡ್ಡಕೊಪ್ಪಲು ರಮೇಶ್ ಮುಖಂಡ ಹೊಸೂರು ರಾಘವೇಂದ್ರ, ,ಸಂಸ್ಥೆಯ ಮೇಲ್ವಿಚಾರಕ ಆನಂದ್ ಹೊಸೂರ್ ಮುಂತಾದವರು ಹಾಜರಿದ್ದರು.