Tuesday, August 26, 2025
Google search engine

Homeರಾಜ್ಯಸುದ್ದಿಜಾಲಧರ್ಮಸ್ಥಳ ಪ್ರಕರಣ ಖಂಡಸಿ ಕಾರ್ ರ‍್ಯಾಲಿ: ಸಾ.ರಾ. ಮಹೇಶ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

ಧರ್ಮಸ್ಥಳ ಪ್ರಕರಣ ಖಂಡಸಿ ಕಾರ್ ರ‍್ಯಾಲಿ: ಸಾ.ರಾ. ಮಹೇಶ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್ ನಗರ : ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಅಪಪ್ರಚಾರ ಹಿಂದುಗಳ ಆರಾಧ್ಯ ದೈವ ಶ್ರೀ ಮಂಜುನಾಥನ ಅಪಾರ ಭಕ್ತರೊಂದಕ್ಕೆ ಮಾಡಿರುವ ಅಪಮಾನವಾಗಿದೆ ಇದನ್ನು ಖಂಡಿಸಿ ಕೆ ಆರ್ ನಗರ ವಿಧಾನಸಭಾ ಕ್ಷೇತ್ರ ಮೈಸೂರು ಸೇರಿದಂತೆ ಈ ಭಾಗದ ಜನಪ್ರತಿನಿಧಿಗಳ ಒಳಗೊಂಡು ಧರ್ಮಸ್ಥಳ ಉಳಿಸಿ ಆರೋಪಿಗಳ ಬಂಧಿಸಿ ಎಂಬ ಘೋಷದ ಮೂಲಕ ಕಾರ್ ರ್‍ಯಾಲಿಯನ್ನು ಮಾಜಿ ಸಚಿವ ರಾಜ್ಯ ಜೆಡಿಎಸ್ ಕಾರ್ಯಾಧ್ಯಕ್ಷ ಸಾ ರಾ ಮಹೇಶ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು
ಮೈಸೂರಿನಿಂದ ಕೆ ಆರ್ ನಗರ ಮತ್ತು ಸಾಲಿಗ್ರಾಮದ ಯೋಗ ನರಸಿಂಹಸ್ವಾಮಿಯ ದೇವಾಲಯದ ಮುಂಭಾಗ ದೇವರಿಗೆ ಪೂಜೆ ಸಲ್ಲಿಸಿ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು ಮಜಿ ಸಚಿವ ಸಿಎಸ್ ಪುಟ್ಟರಾಜು ವಿಧಾನಪರಿಷತ್ ಸದಸ್ಯರಾದ ಸಿಎನ್ ಮಂಜೇಗೌಡ ಬಿ ವಿವೇಕಾನಂದ್ ಮಾಜಿ ಶಾಸಕರಾದ ಕೆ ಮಹದೇವ್ ಸೇರಿದಂತೆ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಮಹಾನಗರ ಪಾಲಿಕೆಯ ಮಾಜಿ ಮಹಾಪೌರರು ಸೇರಿದಂತೆ ವಿವಿಧ ಮುಂಚೂಣಿಯ ಘಟಕದ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಜೆಡಿಎಸ್ ಪಕ್ಷದ ಕಾರ್ಯಕರ್ತರು ಮುಖಂಡರು ಈ ರ‍್ಯಾಲಿಯಲ್ಲಿ ಪಾಲ್ಗೊಂಡರು.

ದಾರಿ ಯುದ್ಧಕ್ಕೂ ಹಾರಪಟಾಕಿ ಸಿಡಿಸಿ ಜಯ ಘೋಷಗಳೊಂದಿಗೆ ಹರದನಹಳ್ಳಿ ಕೇರಳಾಪುರ ಕೊಣ್ಣನೂರ್ ಶನಿವಾರ ಸಂತೆ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಮಾಜಿ ಸಚಿವ ಸಾರಾ ಮಹೇಶ್ ಮತ್ತು ಅವರ ತಂಡವನ್ನು ಅತ್ಯಂತ ವಿಜ್ರಮಣೆಯಿಂದ ಆ ಭಾಗದ ಹಿಂದೂ ಅಭಿಮಾನಿಗಳು ಬಿಜೆಪಿ ಕಾರ್ಯಕರ್ತರು ಜೆಡಿಎಸ್ ಮುಖಂಡರು ಅಭಿಮಾನದಿಂದ ಸ್ವಾಗತಿಸಿದರು.


ನಂತರ ಧರ್ಮಸ್ಥಳ ಪ್ರವೇಶಿಸುತ್ತಿದ್ದಂತೆ ಪರಮಪೂಜ್ಯ ಧರ್ಮಾಧಿಕಾರಿಗಳಾದ ಡಾ ಶ್ರೀ ವೀರೇಂದ್ರ ಹೆಗ್ಗಡೆಯವರನ್ನು ತಮ್ಮ ಮುಖಂಡರು ಕಾರ್ಯಕರ್ತರು ಒಡಗೂಡಿ ಭೇಟಿ ಮಾಡಿ ಅಭಿನಂದಿಸಿ ಅಭಿಮಾನದ ಮಾತುಗಳನ್ನಾಡಿದ ಮಾಜಿ ಸಚಿವ ಸಾರಾ ಮಹೇಶ್ ನಿಮ್ಮ ಜೊತೆ ನಾವಿದ್ದೇವೆ ಧೈರ್ಯವಾಗಿರಿ ಹೆದರುವ ಅವಶ್ಯಕತೆ ಇಲ್ಲ ನೀವು ಪೂಜಿಸುವ ಶ್ರೀ ಮಂಜುನಾಥ ನಿಮ್ಮನ್ನು ಕಾಯುತ್ತಿದ್ದಾನೆ ಎಂದು ತಿಳಿಸಿದರು.

ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗಡೆಯವರು ಅನ್ನ ಅಕ್ಷರ ಉದ್ಯೋಗ ಆಶ್ರಯ ರಾಜ್ಯದ ಅಭಿವೃದ್ಧಿಗೆ ಪೂರಕವಾದ ಎಲ್ಲಾ ಕೆಲಸಗಳಲ್ಲಿಯೂ ಕೈಗುಜೋಡಿಸಿರುವ ಧರ್ಮಸ್ಥಳದ ಧರ್ಮಾಧಿಕಾರಿಗಳ ವಿರುದ್ಧ ಮಾಡಿರುವ ಷಡ್ಯಂತರ ಖಂಡನೀಯ ಇದನ್ನು ಪ್ರತಿಯೊಬ್ಬ ಕನ್ನಡಿಗನು ಖಂಡಿಸಬೇಕೆಂದು ತಿಳಿಸಿದರು.

ಮಾಜಿ ಸಚಿವ ಸಿ ಎಸ್ ಪುಟ್ಟರಾಜು ಮಾತನಾಡಿ ಸತ್ಯ ಸತ್ಯಂಸಗಳನ್ನು ತಿಳಿಯದೆ ಏಕಾಏಕಿ ಒಂದು ಧರ್ಮ ಕ್ಷೇತ್ರದ ಮೇಲೆ ಆರೋಪ ಮಾಡುವುದೇ ತಪ್ಪು ಆದರೆ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿರುವುದು ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳಿಗೆ ಮಾಡಿದ ಅಪಮಾನವಲ್ಲ ಇಡೀ ರಾಜ್ಯದ ಹಿಂದುಗಳಿಗೆ ಮಾಡಿರುವ ಅಪಮಾನವಾಗಿದೆ ತಕ್ಷಣ ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಂಡು ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆ ಅವರಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ ಶ್ರೀ ವೀರೇಂದ್ರ ಹೆಗ್ಗಡೆ ನನ್ನ ಪರವಾಗಿ ನಿಂತು ನನಗೆ ಧೈರ್ಯ ತುಂಬುವ ಜೊತೆಗೆ ನನ್ನ ಪರ ಅಂದರೆ ನ್ಯಾಯದ ಪರ ಹೋರಾಟ ಮಾಡಲು ಸಿದ್ದರಿರುವ ಎಲ್ಲ ಕನ್ನಡಿಗರಿಗೂ ಹಾಗೂ ಹಿಂದುಗಳಿಗೂ ಮತ್ತು ಶ್ರೀ ಕ್ಷೇತ್ರದ ಪರವಾಗಿ ಜನಾಂದಲವನ್ನು ಆರಂಭಿಸಲು ಸಹಕಾರ ನೀಡಿದ ಎಲ್ಲಾ ಮುಖಂಡರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಧರ್ಮಸ್ಥಳದಲ್ಲಿರುವ ನಮ್ಮ ಕುಟುಂಬಸ್ಥರಾಗಲಿ ಅಥವಾ ಇಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳಾಗಲಿ ಯಾವುದೇ ರೀತಿಯ ಅನಾಚಾರ ಸೇರಿದಂತೆ ಅಹಿತಕರ ಘಟನೆಗಳು ನಡೆಸಿಲ್ಲ ಆದರೂ ನಮ್ಮ ವಿರುದ್ಧ ಮಾಡಿದ ಷಡ್ಯಂತರ ಅತ್ಯಂತ ಖಂಡನೀಯ ಇದರ ಹಿಂದೆ ಒಂದು ದೊಡ್ಡ ಜಾಲವಿದ್ದು ಅದನ್ನು ಪತ್ತೆ ಹಚ್ಚಿ ಇನ್ನು ಮುಂದೆ ಯಾವುದೇ ದೇವಾಲಯ ಸೇರಿದಂತೆ ಪವಿತ್ರ ಸ್ಥಳಗಳ ವಿರುದ್ಧ ಅಪಪ್ರಚಾರ ಮಾಡದಂತೆ ಕಠಿಣ ಶಿಕ್ಷೆಯನ್ನು ನೀಡಬೇಕೆಂದು ತಿಳಿಸಿದರು.

ನಮ್ಮ ಕ್ಷೇತ್ರದ ದೇಹ ಒಂದೇ ಮಂಜುನಾಥನ ಸೇವೆ ಮಾಡುವುದು ಇಲ್ಲಿಗೆ ಬರುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವ ಜೊತೆಗೆ ಸಕಲ ಸೌಕರ್ಯಗಳನ್ನು ನೀಡುವ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದು ತಿಳಿಸಿದರು ಈಗ ಆಗಮಿಸಿರುವ ಎಲ್ಲಾ ರಾಜಕೀಯ ಮುಖಂಡರು ಶ್ರೀ ಮಂಜುನಾಥನ ಭಕ್ತರಿಗೆ ದೇವರು ಆರೋಗ್ಯ ಆಯಸ್ಸು ಕೊಡಲಿ ಎಂದು ಪ್ರಾರ್ಥಿಸುತ್ತೇನೆ ನಿಮ್ಮ ಬೆಂಬಲ ಸದಾ ನಮಗೆ ಹೀಗೆ ಇರಲಿ ಎಲ್ಲರೂ ಪ್ರಸಾದ ಸ್ವೀಕರಿಸಿ ಹೋಗುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಸಿಎನ್ ಮಂಜೇಗೌಡ ವಿವೇಕಾನಂದ್ ಮಾಜಿ ಶಾಸಕರಾದ ಕೆ ಮಹದೇವ್ ಜೆಡಿಎಸ್ ಮಾಜಿ ಅಧ್ಯಕ್ಷರಾದ ಚಂದ್ರಶೇಖರ್, ಹೆಬ್ಬಾಳು ಸುಜಯ್, ಅಧ್ಯಕ್ಷರುಗಳಾದ ಹೆಚ್ ಸಿ ಕುಮಾರ್, ಮೆಡಿಕಲ್ ರಾಜಣ್ಣ, ಯುವ ಜೆಡಿಎಸ್ ಅಧ್ಯಕ್ಷ ಕರ್ತಾಳ್ ಮಧು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರುಗಳಾದ ಸಿಜಿ ದ್ವಾರಕೀಶ್,ಎಂ‌. ಟಿ.ಕುಮಾರ್, ಮಾಜಿ ಮಹಾಪೌರರಾದ ಚಿನ್ನಿ ರವಿ, ಲಿಂಗಪ್ಪ, ಮುಖಂಡರುಗಳಾದ ಹಳಿಯೂರು ಮಧುಚಂದ್ರ, ಬಂಡಳ್ಳಿ ಕುಚೇಲ, ಹರದನಹಳ್ಳಿ ರಮೇಶ್, ಕಗ್ಗೆರೆ ಕುಚೇಲ, ಸಾಗರ್ ಎಸ್.ಅರ್. ಪ್ರಕಾಶ್ ,ಗುರು ,ಮಹೇಶ್ ಚಂದಗಾಲ್, ಡಿಂಡಿಮಶಂಕರ್ ಲಾಲು ಸಾಹೇಬ್ , ಎಚ್.ಕೆ.ಕೀರ್ತಿ, ವಕೀಲ ಡಿ.ಅರ್‌.ರಮೇಶ್,ಕುಪ್ಪೆ ನವೀನ್ ,ಲಾಲನಹಳ್ಳಿ ಮಹೇಶ್, ಇಂಜಿನಿಯರ್ ಪ್ರಕಾಶ್, ಘನತೆಕುಮಾರ್,ಬಸವೇಶ್ವರ ಬ್ಲಾಕ್ ಹರೀಶ್, ಸರಗೂರು ಶಿವು,ಪಶುಪತಿ ಜಗದೀಶ್, ಸೇರಿದಂತೆ ಮಹಿಳೆಯರು ಯುವಕರು ಪಾಲ್ಗೊಂಡಿದ್ದರು.

RELATED ARTICLES
- Advertisment -
Google search engine

Most Popular