Tuesday, August 26, 2025
Google search engine

Homeರಾಜ್ಯಕರ್ನಾಟಕದಲ್ಲಿ ಜಿಎಸ್‌ಟಿ ನೋಂದಣಿಯ ಪ್ರಮಾಣದಲ್ಲಿ ಭಾರೀ ಏರಿಕೆ

ಕರ್ನಾಟಕದಲ್ಲಿ ಜಿಎಸ್‌ಟಿ ನೋಂದಣಿಯ ಪ್ರಮಾಣದಲ್ಲಿ ಭಾರೀ ಏರಿಕೆ

ಬೆಂಗಳೂರು: ರಾಜ್ಯದಲ್ಲಿ ಕಳೆದ ಒಂದು ವರ್ಷದಿಂದ ಜಿಎಸ್‌‍ಟಿ ನೋಂದಣಿ (GST Registration) ಪ್ರಮಾಣ ಏರಿಕೆಯಾಗಿದೆ ಎನ್ನುವ ಮಾಹಿತಿ ಹೊರಬಿದ್ದಿದೆ. ಅದರಲ್ಲೂ 2024ರ ನವೆಂಬರ್‌ ತಿಂಗಳಿನಿಂದ ಪ್ರತಿ ತಿಂಗಳು ಜಿಎಸ್‌‍ಟಿ ನೋಂದಣಿ ಮಾಡಿಕೊಳ್ಳುತ್ತಿರುವರ ಸಂಖ್ಯೆ ಹೆಚ್ಚುತ್ತಿದೆ ಎನ್ನಲಾಗುತ್ತಿದೆ.

96,590ರಷ್ಟು ಜಿಎಸ್‌‍ಟಿ ನೋಂದಣಿ: ಈ ವಿಚಾರವಾಗಿ ವಾಣಿಜ್ಯ ತೆರಿಗೆ ಇಲಾಖೆ ಮಾಹಿತಿ ನೀಡಿದ್ದು, 2024-25ನೇ ಆರ್ಥಿಕ ವರ್ಷದಲ್ಲಿ ಸುಮಾರು 96,590ರಷ್ಟು ಜನರು ಜಿಎಸ್‌‍ಟಿ ನೋಂದಣಿ ಮಾಡಿಕೊಂಡಿದ್ದಾರೆ. ಇನ್ನು ಈ ವರ್ಷ ಅಂದರೆ 2025ರ ಏಪ್ರಿಲ್‌ನಿಂದ ಜುಲೈ ಕೊನೆಯವರೆಗೆ 34,811ರಷ್ಟು ಜಿಎಸ್‌‍ಟಿ ನೋಂದಣಿ ಮಾಡಲಾಗಿದೆ.

ಶೇ.91ರಷ್ಟು ಜಿಎಸ್‌‍ಟಿ ಪಾವತಿ: ಇನ್ನು ಸದ್ಯಕ್ಕೆ ಜನರು ಸಾಮಾನ್ಯ ತೆರಿಗೆ ಪದ್ದತಿ ಅಡಿಯಲ್ಲಿ ಜಿಎಸ್‌ಟಿ ಪಾವತಿ ಮಾಡುತ್ತಿದ್ದು, ಶೇ.91ರಷ್ಟು ಜಿಎಸ್‌‍ಟಿ ಪಾವತಿ ಆಗುತ್ತಿದೆ ಎಂದು ಇಲಾಖೆ ಮಾಹಿತಿ ನೀಡಿದೆ. ಇದರ ಪ್ರಕಾರ 9,41,164 ಜನರು ತೆರಿಗೆ ಸಂದಾಯ ಮಾಡಿದ್ದಾರೆ ಎನ್ನುವ ಮಾಹಿತಿ ಇದೆ. ಇನ್ನು ರಾಜಿ ತೆರಿಗೆ ಪದ್ದತಿ ಅಡಿಯಲ್ಲಿ ಶೇ.9ರಷ್ಟು ತೆರಿಗೆ ಪಾವತಿ ಆಗುತ್ತಿದ್ದು, 98,663ರಷ್ಟು ತೆರಿಗೆ ಪಾವತಿ ಆಗಿದೆ. ಇನ್ನು ಕಳೆದ ವರ್ಷ ಅಂದರೆ 2024ರ ಏಪ್ರಿಲ್‌ನಲ್ಲಿ 2204ರಷ್ಟಿದ್ದ ಜಿಎಸ್‌‍ಟಿ ನೋಂದಣಿಯು ಈ ವರ್ಷದ ಏಪ್ರಿಲ್‌ ತಿಂಗಳಿನಲ್ಲಿ 13,386ಕ್ಕೆ ಹೆಚ್ಚಾಗಿದೆ ಎಂದು ಇಲಾಖೆ ಮಾಹಿತಿ ನೀಡಿದ್ದು, ಪ್ರತಿ ತಿಂಗಳು ಜಿಎಸ್‌‍ಟಿ ನೋಂದಣಿಯಲ್ಲಿ ಏರಿಕೆಯಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಎನ್ನಲಾಗಿದೆ.

ಇದಲ್ಲದೇ, 2024ರ ಅಕ್ಟೋಬರ್‌ ತಿಂಗಳಲ್ಲಿ ಜಿಎಸ್‌‍ಟಿ ನೋಂದಣಿ 7,569ರಷ್ಟಿತ್ತು, ಅದೇ, ನವೆಂಬರ್‌ನಲ್ಲಿ 10,707ಕ್ಕೆ ಏರಿಕೆಯಾಗಿತ್ತು. ಅದೇ ವರ್ಷದ ಡಿಸೆಂಬರ್‌ನಲ್ಲಿ 10420 ರಷ್ಟಿದ್ದ ಈ ಜಿಎಸ್‌ಟಿ ನೋಂದಾಣಿ 2025ರ ಜನವರಿಯಲ್ಲಿ 11571ಕ್ಕೆ ಏರಿಕೆ ಆಗಿತ್ತು. ಇದರ ನಂತರ ಫೆಬ್ರವರಿ ತಿಂಗಳಲ್ಲಿ 10664, ಮಾರ್ಚ್‌ ತಿಂಗಳಲ್ಲಿ 11466, ಏಪ್ರಿಲ್‌ ತಿಂಗಳಲ್ಲಿ 10785, ಮೇ ತಿಂಗಳಿನಲ್ಲಿ 11105, ಜೂನ್‌ ತಿಂಗಳಿನಲ್ಲಿ 10921 ಹಾಗೂ ಜುಲೈ ತಿಂಗಳಿನಲ್ಲಿ 13386ರಷ್ಟು ಜಿಎಸ್‌‍ಟಿ ನೋಂದಣಿ ಆಗಿದೆ ಎಂದು ವಾಣಿಜ್ಯ ತೆರಿಗೆಗಳ ಇಲಾಖೆ ನೀಡಿರುವ ಮಾಹಿತಿಯಲ್ಲಿದೆ.

ದೇಶಾದ್ಯಂತ ಹೊಸ ಜಿಎಸ್‌ಟಿ ದರಗಳನ್ನು ಜಾರಿ ಮಾಡಲು ಮುಂದಾಗಿರುವ ಹಣಕಾಸು ಸಚಿವಾಲಯ  ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ 5% ಮತ್ತು 18% ರ ಸರಳೀಕೃತ ಜಿಎಸ್‌ಟಿ ದರ ರಚನೆ ಕುರಿತು ಮಹತ್ವ ನಿರ್ಣಯ ಕೈಗೊಳ್ಳಲಿದೆ.

ಈ ಕುರಿತು ಜಿಎಸ್‌ಟಿ ಮಂಡಳಿ ಸಭೆ ಸೇರಲಿದ್ದು, ಸಭೆಯ ನಿರ್ಧಾರದ ನಂತರ ಐದು ರಿಂದ ಏಳು ದಿನಗಳ ಒಳಗಾಗಿ ಹೊಸ ಜಿಎಸ್‌ಟಿ ದರಗಳ ಕುರಿತು ಅಧಿಸೂಚನೆಗಳನ್ನು ಹೊರಡಿಸಲಾಗುವುದು ಎನ್ನಲಾಗುತ್ತಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯು ದೇಶದಲ್ಲಿ ಸೆಪ್ಟೆಂಬರ್ 22 ರ ಸುಮಾರಿಗೆ ಹೊಸ ಜಿಎಸ್‌ಟಿ ದರ ಸ್ಲ್ಯಾಬ್‌ಗಳನ್ನು ಘೋಷಿಸುವ ಸಾಧ್ಯತೆಯಿದೆ ಎಂದು ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ಪ್ರಾಫಿಟ್ ವರದಿ ಮಾಡಿದೆ. ನವರಾತ್ರಿ ವೇಳೆಗೆ ದೇಶದಲ್ಲಿ ಹೊಸ ಜಿಎಸ್‌ಟಿ ನಿಯಮಗಳು ಜಾರಿಗೆ ಬರುವ ನಿರೀಕ್ಷೆ ಇದೆ.

RELATED ARTICLES
- Advertisment -
Google search engine

Most Popular