ಕೊಪ್ಪಳ : ಗಂಗಾವತಿಯಿಂದ ಅಕ್ರಮವಾಗಿ ವಿದೇಶಕ್ಕೆ ಅಕ್ಕಿ ಮಾರಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ನಗರ ಠಾಣೆಯಲ್ಲಿ ರೈಸ್ ಮಿಲ್ ಮಾಲೀಕ ಸೇರಿದಂತೆ ಒಟ್ಟು ನಾಲ್ವರ ವಿರುದ್ಧ ಎಫ್‌ಐಆರ್ದಾಖಲಾಗಿದೆ.
ಆದರೆ ಎಫ್‌ಐಆರ್ ನಲ್ಲಿ ರೈಸ್ ಮೇಲ್ ಮಾಲೀಕನ ಹೆಸರನ್ನು ದೂರಿನಲ್ಲಿ ಅಧಿಕಾರಿಗಳು ಉಲ್ಲೇಖಿಸಿಲ್ಲ. ಉಮಾಶಂಕರ್ ರೈಸ್ ಮಿಲ್ ಮಾಲೀಕ ಉಮೇಶ ಸಿಂಗನಾಳ ಹೆಸರನ್ನು ಉಲ್ಲೇಖಿಸದೆ ದೂರಿನಲ್ಲಿ ಕೇವಲ ಉಮಾಶಂಕರ ರೈಸ್ ಮಿಲ್ ಮಾಲೀಕ ಎಂದು ಉಲ್ಲೇಖಿಸಲಾಗಿದೆ. ಗೋದಾಮು ಮ್ಯಾನೇಜರ್ ಸೋಮಶೇಖರ್ ರೈಸ್ ಮಿಲ್ ಮಾಲೀಕ, ಲಾರಿ ಚಾಲಕ ಹಾಗೂ ಕ್ಲಿನರ್ ವಿರುದ್ಧ ಇದೀಗ ಎಫ್‌ಐಆರ್ ದಾಖಲಾಗಿದೆ
ಇನ್ನು ಇದೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಕರಣದಲ್ಲಿ ಅಧಿಕಾರಿಗಳು ಭಾಗಿಯಾಗಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಿಗೆ ಹೇಳಿಕೆ ನೀಡಿದರು. ಅಕ್ರಮ ನಡೆದಿರುವುದು ನನ್ನ ಗಮನಕ್ಕೆ ಬಂದಿದೆ ಸರ್ಕಾರಿ ಗೋದಾಮಿನಲ್ಲಿ ತಪ್ಪು ಮಾಡಿರುವ ಮಾಹಿತಿ ಇದೆ ಗೋದಾಮಿನ ಅಧಿಕಾರಿಗಳು ತಪ್ಪು ಮಾಡಿರುವ ಮಾಹಿತಿ ಇದೆ ಅಕ್ರಮವಾಗಿ ಅಕ್ಕಿ ಮಾರಾಟ ಮಾಡಲಾಗುತ್ತಿದೆ ಅನ್ನುವ ಮಾಹಿತಿ ಸಿಕ್ಕಿದ್ದು ಕೊಪ್ಪಳ ತಾಲೂಕಿನ ಹೊಲಗೆಯಲ್ಲಿ ಶಿವರಾಜ್ ತಂಗಡಗಿ ಹೇಳಿಕೆ ನೀಡಿದ್ದಾರೆ.