Friday, August 29, 2025
Google search engine

Homeರಾಜ್ಯಸುದ್ದಿಜಾಲಅನನ್ಯಾ ಭಟ್ ನನ್ನ ಮಗಳು ಅಲ್ಲ: ಸುಜಾತಾ ಭಟ್ ಸ್ಫೋಟಕ ಹೇಳಿಕೆ : ಮತ್ತೊಬ್ಬ...

ಅನನ್ಯಾ ಭಟ್ ನನ್ನ ಮಗಳು ಅಲ್ಲ: ಸುಜಾತಾ ಭಟ್ ಸ್ಫೋಟಕ ಹೇಳಿಕೆ : ಮತ್ತೊಬ್ಬ ಯೂಟ್ಯೂಬರ್ ಸಂಕಷ್ಟದಲ್ಲಿ

ಮಂಗಳೂರು: ಅನನ್ಯಾ ಭಟ್ ನನ್ನ ಮಗಳು ಎಂದು ಸತ್ಯದ ತಲೆ ಮೇಲೆ ಹೊಡೆದಂಗೆ ಸುಳ್ಳು ಹೇಳಿದ್ದ ಮ್ಯಾಜಿಕ್ ಅಜ್ಜಿ ಇದೀಗ ಮತ್ತೊಂದು ಸ್ಫೋಟಕ ಹೇಳಿಕೆ ನೀಡಿದ್ದಾಳೆ. ಸುಜಾತಾ ಭಟ್ ಎಸ್​ಐಟಿ ಮುಂದೆ ಬಿಚ್ಚಿಟ್ಟಿರುವ ಮಾಹಿತಿಯಿಂದ ಮತ್ತೊಬ್ಬ ಯುಟ್ಯೂಬರ್​ಗೆ ಸಂಕಷ್ಟ ಎದುರಾಗಿದೆ.

ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಕೇಸ್​ಗೆ ದಿನಕ್ಕೊಂದು ಟ್ವಿಸ್ಟ್​ ಸಿಗ್ತಿದೆ. ಎಸ್​ಐಟಿ ತನಿಖೆ ತೀವ್ರಗೊಂಡಿದ್ದು, ಸ್ಫೋಟಕ ರಹಸ್ಯಗಳು ಬಯಲಾಗ್ತಿವೆ. ಮ್ಯಾಜಿಕ್ ಅಜ್ಜಿಗೆ ತನಿಖಾ ತಂಡ ಸಖತ್ ಡ್ರಿಲ್ ನಡೆಸುತ್ತಿದ್ದಂತೆ ಒಂದೊಂದೇ ಸತ್ಯ ಬಾಯ್ಬಿಡುತ್ತಿದ್ದಾರೆ. ಇದೀಗ ಯುಟ್ಯೂಬರ್ ​ಹೆಸರು ಬಾಯ್ಬಿಟ್ಟಿದ್ದಾರೆ.

ಯೂಟ್ಯೂಬ್ ಸಂದರ್ಶನಗಳಲ್ಲಿ ಅನನ್ಯಾ ಭಟ್ ಹೆಸರು ಹೇಳಿಕೊಂಡು ಕಣ್ಣೀರು ಹಾಕ್ತಿದ್ದ ಸುಜಾತಾ ಭಟ್​ ‘ಯುನೈಟೆಡ್ ಮೀಡಿಯಾ ಯೂಟ್ಯೂಬರ್ ಅಭಿಷೇಕ್’ ಹೆಸರು ಹೇಳಿದ್ದಾರೆ. ಈತ ನಾಲ್ಕೈದು ತಿಂಗಳ ಹಿಂದೆಯೇ ಸುಜಾತಾ ಸಂದರ್ಶನ ಮಾಡಿ ತನ್ನ ಯೂಟ್ಯೂಬ್​​ನಲ್ಲಿ ಹಂಚಿಕೊಂಡಿದ್ದ. ಬೆಂಗಳೂರಿಗೆ ತೆರಳಿ ಸುಜಾತ ಭಟ್ ಭೇಟಿಯಾಗಿ ಸಂದರ್ಶನ ಮಾಡಿದ್ದ. ಅಭಿಷೇಕ್ ಮೂಲಕವೇ ಈಕೆಗೆ ಧರ್ಮಸ್ಥಳದಲ್ಲಿ ಕೆಲವರ ಲಿಂಕ್ ಸಿಕ್ಕಿತ್ತಂತೆ.

ಈ ಅಭಿಷೇಕ್ ಎಂಬಾತ ‘ಧರ್ಮಸ್ಥಳದ ಮತ್ತೊಂದು ಕರ್ಮಕಾಂಡ’ ಎಂದು ವಿಡಿಯೋ ಮಾಡಿದ್ದ. ‘ಬಯಲಾದ ಧರ್ಮಸ್ಥಳದ ಮತ್ತೊಂದು ಕರ್ಮಕಾಂಡ’ ಹೆಸರಿನಲ್ಲಿ ಸುಜಾತಾ ಭಟ್​ ಸಂದರ್ಶನ ಮಾಡಿದ್ದ. ಈ ಸಂದರ್ಶನದ ಮೂಲಕವೇ ಅನನ್ಯಾ ಭಟ್ ಕಥೆ ಹುಟ್ಟಿತು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಕೂಡ ನಡೀತು. ಇದಾದ ಬಳಿಕ ಬುರುಡೆ ಗ್ಯಾಂಗ್​ ಜೊತೆ ಸುಜಾತ ಭಟ್ ಸೇರಿಕೊಂಡ್ರಂತೆ. ಸಾಮಾಜಿಕ ಕಾರ್ಯಕರ್ತ ಜಯಂತ್ ಟಿ ಹಾಗೂ ಅಭಿಷೇಕ್ ಮೂಲಕ ಈಕೆ ಕೆಲವರನ್ನು ಸಂಪರ್ಕ ಮಾಡಿದ್ರು ಎಂಬ ಸ್ಫೋಟಕ ಮಾಹಿತಿ ಲಭ್ಯವಾಗಿದೆ.

ಸಮೀರ್​ ಬಳಿಕ ಅಭಿಷೇಕ್​ಗೂ ಸಂಕಷ್ಟ?: ಬಿ ಗ್ಯಾಂಗ್​ ಬುರುಡೆ ಸ್ಟೋರಿಗೆ ಸುಜಾತ ಭಟ್​ರನ್ನ ಬಳಸಿಕೊಂಡ್ರು ಎನ್ನಲಾಗ್ತಿದೆ. ಮಗಳ ಅಸ್ಥಿಪಂಜರ ಸಿಕ್ಕರೆ ಕೊಡಿ ಅಂತ ಬುರುಡೆ ಗ್ಯಾಂಗ್ ಎಸ್ಐಟಿಗೆ ದೂರು ಕೊಡಿಸಿತು ಎಂದು ಸ್ವತಃ ಸುಜಾತಾ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಯೂಟ್ಯೂಬರ್ ಸಮೀರ್ ಬಳಿಕ ಇದೀಗ ಅಭಿಷೇಕ್ ಅಂಕಷ್ಟ ಎದುರಾಗುವ ಭೀತಿ ಶುರುವಾದಂತಿದೆ.

ಯೂಟ್ಯೂಬ್​ನಲ್ಲಿ ಧರ್ಮಸ್ಥಳದ ವಿರುದ್ಧ ನಿರಾಧಾರವಾಗಿ ಮಾಹಿತಿ ಪ್ರಸಾರ ಮಾಡಿದವರಿಗೆ ಇದೀಗ ನಡುಕ ಶುರುವಾಗಿದೆ. ಯಾವ ಕ್ಷಣದಲ್ಲಾದ್ರೂ ಎಸ್​ಐಟಿ ಅಧಿಕಾರಿಗಳು ವಿಚಾರಣೆಗೆ ಕರೆಯುವ ಸಾಧ್ಯತೆ ದಟ್ಟವಾಗಿದೆ.

ಚಿನ್ನಯ್ಯಗೆ ಲಕ್ಷ ಲಕ್ಷ ಕಾಸು ಕೊಟ್ಟಿದ್ದ ಬುರುಡೆ ಗ್ಯಾಂಗ್: ಧರ್ಮಸ್ಥಳದ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು ಚಿನ್ನಯ್ಯನನ್ನು ತೀವ್ರವಾಗಿ ವಿಚಾರಣೆ ನಡೆಸುತ್ತಿದ್ದಾರೆ. ಎಲ್ಲಾ ಆಯಾಮಗಳಲ್ಲೂ ಚಿನ್ನಯ್ಯನನ್ನು ವಿಚಾರಣೆ ನಡೆಸುತ್ತಿದ್ದು, ಇದೀಗ ಆತ ಮತ್ತು ಆತನ ಪತ್ನಿ ಮಲ್ಲಿಕಾ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದೆ. ಈ ಪ್ರಕರಣದಲ್ಲಿ ಆರೋಪಿಯಾಗಿರುವ ಚಿನ್ನಯ್ಯನಿಗೆ ಹಣದ ವರ್ಗಾವಣೆಗೆ ಸಂಬಂಧಿಸಿದಂತೆ ಎಸ್‌ಐಟಿ ಫ್ಯಾಕ್ಟ್-ಚೆಕ್ ನಡೆಸಿದ್ದು, ಹಣದ ಮೂಲ ಬಹಿರಂಗವಾಗಿದೆ.

ಚಿನ್ನಯ್ಯ ಮತ್ತು ಆತನ ಹೆಂಡತಿ, ಕುಟುಂಬಕ್ಕೆ ಹಣವನ್ನು ಬೈ ಹ್ಯಾಂಡ್ ನೀಡಲಾಗಿದೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. ಇದೀಗ ಈ ಹಣದ ಮೂಲ ಮತ್ತಷ್ಟು ಅನುಮಾನಗಳಿಗೆ ಕಾರವಾಗಿದ್ದು, ಇದನ್ನು ನೀಡಿದವರು ಯಾರು? ಇದರ ಸೂತ್ರಧಾರರು ಯಾರು? ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಆರೋಪಿ ಚಿನ್ನಯ್ಯ ಹಣದ ಹಿಂದಿನ ಕಹಾನಿ ಬಿಚ್ಚಿಟ್ಟಿದ್ದಾನೆ. SIT ತನಿಖೆಯಲ್ಲಿ ‘ತಿಮರೋಡಿ ಗ್ಯಾಂಗ್’ ಷಡ್ಯಂತ್ರ ಬಯಲಾಗಿದ್ದು, ಇದೇ ಗ್ಯಾಂಗ್ ಚಿನ್ನಯ್ಯಗೆ ಲಕ್ಷ ಲಕ್ಷ ಹಣವನ್ನು ಕೊಟ್ಟಿತ್ತಂತೆ. ಹಣ ಕೊಡೋದ್ರಲ್ಲೂ ತಿಮರೋಡಿ ಗ್ಯಾಂಗ್ ಚಾಲಾಕಿತನ ತೋರಿದ್ದು ಖಾತೆಗೆ ಹಾಕೋ ಬದಲು ನಗದು ನೀಡಿತ್ತಂತೆ. ಒಂದು ವೇಳೆ ಬ್ಯಾಂಕ್​ಗೆ ಹಣ ವರ್ಗಾವಣೆ ಮಾಡಿದರೆ ಸಿಕ್ಕಿಬೀಳುವ ಆತಂಕ ಕಾಡಿತ್ತು ಎನ್ನಲಾಗುತ್ತಿದೆ. S.I.T ಅಧಿಕಾರಿಗಳು ಚಿನ್ನಯ್ಯ, ಪತ್ನಿ ಮಲ್ಲಿಕಾ ಖಾತೆ ಪರಿಶೀಲಿಸಿದ್ದು, ಬ್ಯಾಂಕ್​ ಮೂಲಕ ಹಣ ಬಂದಿಲ್ಲ ಅನ್ನೋದು ಪತ್ತೆಯಾಗಿದೆ. ಇನ್ನು ತಿಮರೋಡಿ ಗ್ಯಾಂಗ್ ಲಕ್ಷ ಲಕ್ಷ ನಗದು ಕೊಟ್ಟು ಚಿನ್ನಯ್ಯನನ್ನು ಒಪ್ಪಿಸಿತ್ತಂತೆ. ಸುಳ್ಳು ದೂರು, ಆರೋಪ ಮಾಡಲು ಮೂರೂವರೆಯಿಂದ ನಾಲ್ಕು ಲಕ್ಷ ಆಫರ್ ಮಾಡಿದ್ರು, ಹಂತ ಹಂತವಾಗಿ 5, 10, 15 ಸಾವಿರದಂತೆ ಹಣ ಕೊಟ್ಟರು ಎಂದು ಎಸ್​ಐಟಿ ತನಿಖೆ ವೇಳೆ ಚಿನ್ನಯ್ಯ ಸತ್ಯ ಒಪ್ಪಿಕೊಂಡಿದ್ದಾನೆ.

ಚಿನ್ನಯ್ಯ ಮತ್ತು ಆತನ ಪತ್ನಿ ಈ ಹಣವನ್ನು ಕುಟುಂಬ ನಿರ್ವಹಣೆಗಾಗಿ ಪಡೆದಿತ್ತಂತೆ. ಆದರೂ ಎಸ್‌ಐಟಿ ಅಧಿಕಾರಿಗಳು ಇದರ ಹಿಂದಿನ ಸೂತ್ರಧಾರಿಗಳು ಮತ್ತು ಅವರಿಗೆ ಸಂಬಂಧಿಸಿದವರ ಖಾತೆಗಳ ಮೇಲೆ ಕೂಡ ಕಣ್ಣಿಟ್ಟಿದೆ. ಆದರೆ, ದೊಡ್ಡ ಮಟ್ಟದ ಹಣದ ವರ್ಗಾವಣೆಗೆ ಸಂಬಂಧಿಸಿದ ಯಾವುದೇ ದಾಖಲೆಗಳು ಬ್ಯಾಂಕ್ ಖಾತೆಗಳಲ್ಲಿ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ, ಎಸ್‌ಐಟಿ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.

RELATED ARTICLES
- Advertisment -
Google search engine

Most Popular