ಮೈಸೂರು: ಪರಮ ಪೂಜ್ಯ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ಜಯಂತಿ ಅಂಗವಾಗಿ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಪ್ರಸಾದ ಲೇಖನ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮೈಸೂರು ಸುತ್ತೂರು ಮಠದಲ್ಲಿ ನಡೆದ ರಾಜೇಂದ್ರ ಶ್ರೀಗಳವರ ಶತೋತ್ತರದಶಮಾನೋತ್ಸವದಲ್ಲಿ ಪರಮಪೂಜ್ಯಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿಕಾರ್ಯದರ್ಶಿಗಳಾದ ಶ್ರೀ ಎಸ್. ಶಿವಕುಮಾರಸ್ವಾಮಿಯವರು ಬಹುಮಾನಗಳನ್ನು ವಿತರಿಸಿದರು.
ಪದವಿ ಪೂರ್ವ ವಿಭಾಗದಲ್ಲಿ ಮೈಸೂರು ವಿಜಯ ನಗರದ ಸದ್ವಿದ್ಯಾ ಸೆಮಿ-ರೆಸಿಡೆನ್ಸಿಯಲ್ ಪದವಿ ಪೂರ್ವ ಕಾಲೇಜಿನ ಕು.ಎಲ್. ದೀಕ್ಷಾ ಪ್ರಥಮ, ಹಾಸನ ಸಂತ ಜೋಸೆಫರ ಪದವಿ ಪೂರ್ವ ಕಾಲೇಜಿನ ಕು.ನಂದಿ ನಿದ್ವಿತೀಯ, ಸೋಮವಾರಪೇಟೆ ತಾಲ್ಲೂಕುನೆಲ್ಲಿ ಹುದಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕು.ಕೆ.ಎಸ್. ಸಫತೃತೀಯ ಬಹುಮಾನ ಪಡೆದರು.
ಪದವಿ ವಿಭಾಗದಲ್ಲಿ ಮೈಸೂರು ಹಿಂದೂಸ್ತಾನ್ ಕಾಲೇಜಿನ ಎ.ಎಂ.ಪ್ರಣವಿ ಪ್ರಥಮ, ತಾಂಡವಪುರ ಮಹಾರಾಜತಾಂತ್ರಿಕ ಮಹಾವಿದ್ಯಾಲಯದ ಕು.ಕೆ.ಎಸ್. ಧನ್ಯಶ್ರೀ ದ್ವಿತೀಯ, ಸರಸ್ವತಿಪುರಂ ಜೆಎಸ್‌ಎಸ್ ಮಹಿಳಾ ಕಾಲೇಜಿನ ಕು.ಎಂ.ನಿಶಾತೃತೀಯ ಬಹುಮಾನ ಪಡೆದರು.
ಸ್ನಾತಕೋತ್ತರ ವಿಭಾಗದಲ್ಲಿಮೈಸೂರು ವಿಶ್ವವಿದ್ಯಾನಿಲಯದ ಕು.ಆರ್.ಕುಸುಮಾಬಾಯಿ ಪ್ರಥಮ, ಮೈಸೂರು ಊಟಿ ರಸ್ತೆ ಜೆಎಸ್‌ಎಸ್ ಕಾಲೇಜಿನಕು. ಹರ್ಷಿತ ದ್ವಿತೀಯ ಹಾಗೂ ಆಕಾಶ್ ತೃತೀಯ ಬಹುಮಾನ ಪಡೆದರು.