ಮಂಗಳೂರು (ದಕ್ಷಿಣ ಕನ್ನಡ) : ಜಿಲ್ಲೆಯಲ್ಲಿ ಶುಕ್ರವಾರ ಇಸ್ಲಾಂ ಧರ್ಮದ ಪ್ರವಾದಿ ಮುಹಮ್ಮದ್ ರ 1500 ನೇ ಜನ್ಮದಿನಾಚರಣೆಯ ಅಂಗವಾಗಿ ಇಂದು ಸಂಭ್ರಮದಿಂದ, ಭಕ್ತಿಯಿಂದ ಈದ್ ಮೀಲಾದ್ ಕಾರ್ಯಕ್ರಮವನ್ನು ಆಚರಿಸಲಾಯಿತು.
ಜಿಲ್ಲೆಯ ಎಲ್ಲಾ ಮಸೀದಿಗಳಲ್ಲಿ ಧ್ವಜಾರೋಹಣ ಮಾಡಿದ ನಂತರ ಬೃಹತ್ ಮೀಲಾದ್ ರ್ಯಾಲಿ ನಡೆಸಲಾಯಿತು. ತದನಂತರ ಮಸೀದಿಗಳಲ್ಲಿ ಮೌಲೂದ್ ಪಾರಾಯಣ ಎಂಬ ವಿಶೇಷ ಪ್ರಾರ್ಥನೆ ನಡೆಸಲಾಯಿತು.