ಮೈಸೂರು: ಶಿಕ್ಷಣ ತಜ್ಞ, ಪತ್ರಕರ್ತ ಮತ್ತು ಸಮಾಜ ಸೇವಕರಾದ ವೆಂಕಟಕೃಷ್ಣಯ್ಯ, ತಾತಯ್ಯ ಎಂದೇ ಪ್ರಸಿದ್ಧಿಯಾಗಿದ್ದಾರೆ.
ಅವರ ೧೮೧ನೇ ಜಯಂತಿಯನ್ನು ನಗರದ ಅನಾಥಾಲಯದ ಆವರಣದಲ್ಲಿ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಅನಾಥಾಲಯ ಸಂಸ್ಥೆಯು ಲಯನ್ಸ್ ಕ್ಲಬ್ ಆಫ್ ಜೀವಧಾರ ಇವರ ಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕುರಿತು ಮಾತನಾಡಿದ ಅನಾಥಾಲಯದ ಕಾರ್ಯದರ್ಶಿ ಹೆಚ್.ಅಶ್ವತ್‌ನಾರಾಯಣ್, ರಕ್ತದಾನ ವ್ಯಕ್ತಿ ಜೀವಕ್ಕೆ ನೀಡುವ ಉಡುಗೊರೆಯಾಗಿದ್ದು, ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯೂ ನಿಯಮಿತವಾಗಿ ರಕ್ತದಾನಕ್ಕೆ ಮುಂದಾಗಬೇಕು. ಜೀವನ ಪ್ರತಿಯೊಬ್ಬರಿಗೂ ಅಮೂಲ್ಯವಾದದ್ದು, ವಿಶೇಷವಾಗಿ ಯುವಜನತೆ ಕಷ್ಟದಲ್ಲಿರುವ ರೋಗಿಗಳ ಅವಶ್ಯಕತೆ ಮನಗಂಡು ದಾನದಲ್ಲೇ ಶ್ರೇಷ್ಠವಾದ ರಕ್ತದಾನ ಮಾಡಬೇಕು.
ಇದರಿಂದ ರೋಗಿಗಳಿಗೆ ಜೀವ ರಕ್ಷಣೆ ನೀಡಿದಂತಾಗುತ್ತದೆ ಎಂದರು. ಅನಾಥಾಲಯದ ೧೦೦ಕ್ಕೂ ಅಧಿಕ ವಿದ್ಯಾಥಿ-ವಿದ್ಯಾರ್ಥಿನಿಯರು ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮಾನವೀಯ ಸೇವೆಗೆ ಅಮೂಲ್ಯವಾದ ರಕ್ತವನ್ನು ದಾನ ಮಾಡಿದರು. ವೇದಿಕೆಯಲ್ಲಿ ಅನಾಥಾಲಯದ ಅಧ್ಯಕ್ಷ ಸಿ.ವಿ.ಗೋಪಿನಾಥ್, ಉಪಾಧ್ಯಕ್ಷ ಎನ್.ವಿ.ದಿನೇಶ್, ಕಾರ್ಯದರ್ಶಿ ಹೆಚ್.ಅಶ್ವತ್‌ನಾರಾಯಣ್, ಸಹ ಕಾರ್ಯದರ್ಶಿ ವೆಂಕಟೇಶ್ ಪದಕಿ, ಡಾ.ಶ್ರೀರಾಂ, ಸತ್ಯನಾರಾಯಣ್, ಗುರುರಾಜ್, ನಿರ್ದೇಶಕಿ ಬಿ.ಚಿತ್ಕಲ ಉಪಸ್ಥಿತರಿದ್ದರು.