Saturday, September 6, 2025
Google search engine

Homeರಾಜ್ಯಸುದ್ದಿಜಾಲಕೆ.ಆರ್.ನಗರದಲ್ಲಿ ರೋಟರಿ ಕ್ಲಬ್ ಅಂಗ ಸಂಸ್ಥೆಗಳ ಪದಗ್ರಹಣ ಸಮಾರಂಭ

ಕೆ.ಆರ್.ನಗರದಲ್ಲಿ ರೋಟರಿ ಕ್ಲಬ್ ಅಂಗ ಸಂಸ್ಥೆಗಳ ಪದಗ್ರಹಣ ಸಮಾರಂಭ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಸುಮಾರು 121ವರ್ಷಗಳ ಇತಿಹಾಸ ಹೊಂದಿರುವ ರೋಟರಿ ಸಂಸ್ಥೆ 200ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ 43 ಸಾವಿರ ಕ್ಲಬ್ ಗಳನ್ನು ಹೊಂದಿದೆ ಎಂದು ರೋಟರಿ ಜಿಲ್ಲಾ ಸಹಾಯಕ ಗವರ್ನರ್ ರಾಜೇಗೌಡ ಹೇಳಿದರು.

ಕೆ.ಆರ್.ನಗರ ರೋಟರಿ ಭವನದಲ್ಲಿ ರೋಟರಿ ಕ್ಲಬ್ ವತಿಯಿಂದ ನಡೆದ ರೋಟರಿ ಅಂಗ ಸಂಸ್ಥೆಗಳಾದ ರೋಟರಾಕ್ಟ್, ಇಂಟರಾಕ್ಟ್ ಮತ್ತು ಆರ್ ಸಿಸಿ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

ರೋಟರಿ ಕ್ಲಬ್ 65ವರ್ಷಗಳ ಇತಿಹಾಸ ಹೊಂದಿದೆ. ಕ್ಲಬ್ ಮೂಲಕ ಸಮಾಜ ಸೇವೆ ಮಾಡಲು ನಮ್ಮೆಲ್ಲರಿಗೂ ಅವಕಾಶ ಸಿಕ್ಕಿದೆ. ಅದನ್ನು ಸದುಪಯೋಗ ಪಡಿಸಿಕೊಳ್ಳೋಣ. ಇಂಟರಾಕ್ಟ್ ನಲ್ಲಿ ಶಾಲಾ ದಿನಗಳ ಹಂತದಲ್ಲಿಯೇ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಮತ್ತು ಸಮಾಜ ಮುಖಿ ಸೇವೆಯಲ್ಲಿ ತೊಡಗಿಸಿಕೊಳ್ಳುವುದು ಹೇಗೆ ಎನ್ನುವುದು ತಿಳಿಸಿಕೊಡಲಾಗುತ್ತದೆ. ರೋಟರಾಕ್ಟ್ ನಲ್ಲಿ ಸಮಾಜ ಮುಖಿ ಕೆಲಸಗಳ ಜೊತೆಗೆ ರೋಟರಿ ಕ್ಲಬ್ ನಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಅನುಕೂಲವಾಗುತ್ತದೆ ಎಂದರು.

ಆರ್ ಸಿಸಿ ಪದಗ್ರಹಣ ಅಧಿಕಾರಿ ಡಿ.ವೆಂಕಟಾಚಲ ಮಾತನಾಡಿ, ಕೊಳ್ಳೆಗಾಲ ರೋಟರಿ ಕ್ಲಬ್ 24ಆರ್ ಸಿಸಿ ಹೊಂದಿದೆ. ಗ್ರಾಮೀಣ ಭಾಗದಲ್ಲಿ ಸೇವೆ ಒದಗಿಸುವ ಸಂಸ್ಥೆ ಇದೆ ಎಂದರೆ ಅದುವೇ ರೋಟರಿ ಕ್ಲಬ್. ಸಮಾಜ ಮುಖಿ ಕೆಲಸ ಮಾಡುವುದೇ ರೋಟರಿ ಸಮುದಾಯದ ಉದ್ದೇಶವಾಗಿದೆ ಎಂದರು.

ಹರೀಶ್ ರಾಘವೇಂದ್ರ

ರೋಟರಿ ಕ್ಲಬ್‌ ಅಧ್ಯಕ್ಷ ಟಿ.ಎನ್.ದಯಾನಂದ, ವಲಯ ಸೇನಾನಿ ನಾಗರಾಜಿ ಬಾವಿಕಟ್ಟಿ, ಕಾರ್ಯದರ್ಶಿ ಕೆ.ಆರ್.ಪುರುಷೋತ್ತಮ, ಯುವಜನ ಸೇವಾ ನಿರ್ದೇಶಕ ಜಿ.ಎಲ್.ಧನಂಜಯ್, ಶಕುಂತಲಾ ಮಾತನಾಡಿದರು.

ರೋಟರಾಕ್ಸ್‌ ಅಧ್ಯಕ್ಷರಾಗಿ ದೊಡ್ಡಕೊಪ್ಪಲು ಡಿ.ಎಚ್.ಹರೀಶ್ ರಾಘವೇಂದ್ರ, ಕಾರ್ಯದರ್ಶಿಯಾಗಿ ಎಸ್.ದಿವ್ಯಾಕುಮಾರಿ, ಇಂಟರಾಕ್ಟ್ ಅಧ್ಯಕ್ಷರಾಗಿ ಎಸ್.ಎಂ.ಕುಸುಮಾ, ಕಾರ್ಯದರ್ಶಿಯಾಗಿ ಪಿ.ಪೂರ್ವಿಕ್, ಆರ್ ಸಿಸಿ ಅಧ್ಯಕ್ಷರಾಗಿ ಬಿ.ಆರ್.ಗೋಪಾಲ್ ರಾಜ್ ಕಾರ್ಯದರ್ಶಿಯಾಗಿ ಬಿ.ಎಂ.ಪ್ರಕಾಶ್ ಅಧಿಕಾರ ಸ್ವೀಕರಿಸಿದರು.

ರೋಟರಿ ಪದಾಧಿಕಾರಿಗಳಾದ ಅರುಣ ಬಿ.ನರಗುಂದ, ಎಂ.ಎನ್.ರವಿಕುಮಾ‌ರ್, ಅರುಣಕುಮಾ‌ರ್, ಅಶೋಕಕುಮಾರ್, ವೈ.ಬಿ.ಶಶಿಭೂಷಣ್, ಚಂದ್ರಶೇಖರರಾವ್ ಪಟೇಲ್ಕರ್, ಎಂಜಿನಿಯರ್ ಕುಮಾರ್ ಭಾಗವಹಿಸಿದ್ದರು

RELATED ARTICLES
- Advertisment -
Google search engine

Most Popular