Sunday, September 7, 2025
Google search engine

Homeಕಾಡು-ಮೇಡುಜಾಗ್ವಾರ್‌ ಗಂಡು ಹುಲಿ ಸಾವು

ಜಾಗ್ವಾರ್‌ ಗಂಡು ಹುಲಿ ಸಾವು

ಮೈಸೂರು : ಮೈಸೂರಿನಲ್ಲಿರುವ ಶ್ರೀಚಾಮರಾಜೇಂದ್ರ ಮೃಗಾಲಯದಲ್ಲಿ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದ್ದ ವಿಕ್ರಂ ಹೆಸರಿನ  ಜಾಗ್ವಾರ್‌ ಗಂಡು ಹುಲಿ ಸಾವನ್ನಪ್ಪಿದೆ.7.7 ವರ್ಷ ವಯಸ್ಸಿನ ವಿಕ್ರಂ ಜಾಗ್ವಾರ್‌ ಪಿತ್ತಜನಕಾಂಗ ಮತ್ತು ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿತ್ತು. ನಿರಂತರ ಚಿಕಿತ್ಸೆ ನೀಡಲಾಗುತ್ತಿತ್ತು.  

ಕಳೆದ ಎರಡು ದಿನಗಳಿಂದ ಊಟ ತ್ಯಜಿಸಿತ್ತು.  ಜಾಗ್ವಾರ್‌ ಮೈಸೂರು ಮೃಗಾಲಯದ ಆಕರ್ಷಣೆಗಳಲ್ಲಿ ಒಂದಾಗಿತ್ತು ಎಂದು ಜಾಗ್ವಾರ್‌ ಸಾವಿಗೆ ಮೈಸೂರು ಮೃಗಾಲಯದ ಆಡಳಿತ ವರ್ಗ, ಪಶು ವೈದ್ಯಕೀಯ ತಂಡ ಮತ್ತು ಪ್ರಾಣಿಪಾಲನಾ ತಂಡ ಸಂತಾಪ ವ್ಯಕ್ತಪಡಿಸಿದೆ

RELATED ARTICLES
- Advertisment -
Google search engine

Most Popular