ಮಂಗಳೂರು (ದಕ್ಷಿಣ ಕನ್ನಡ) : ಸಮಸ್ತದ ವಿವಿಧ ಸಂಘಟನೆಗಳ ಇಷ್ಕೇ ರಸೂಲ್ ಮೀಲಾದ್ ಸ್ವಾಗತ ಸಮಿತಿ ವತಿಯಿಂದ ಇಷ್ಕೇ ರಸೂಲ್ ಕಾರ್ಯಕ್ರಮ ಹಾಗೂ ಗ್ರ್ಯಾಂಡ್ ಮೀಲಾದ್ ಜಾಥಾವು ಸೆಪ್ಟೆಂಬರ್ 9 ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ. ಬೆಳಗ್ಗೆ 9 ಕ್ಕೆ ಬಾವುಟ ಗುಡ್ಡೆಯಿಂದ ಆರಂಭಗೊಂಡ ಮೀಲಾದ್ ಜಾಥಾ ಜ್ಯೋತಿ ಸರ್ಕಲ್ ಮೂಲಕ ಹಂಪನಕಟ್ಟೆ ಮಾರ್ಗವಾಗಿ ಪುರಭವನ ತಲುಪಲಿದೆ ಎಂದು ಸ್ವಾಗತ ಸಮಿತಿ ಸಂಚಾಲಕ ಅಬ್ದುಲ್ ಅಝೀಝ್ ದಾರಿಮಿ ಇಂದು ಮಂಗಳೂರು ನಗರದ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಸಮಸ್ತ ಕರ್ನಾಟಕ ಮುಶಾವರ, ಎಸ್‌ವೈಎಸ್, ಎಸ್‌ಕೆಎಸ್‌ಎಸ್‌ಎಫ್, ಸಮಸ್ತ ಜಂಇಯ್ಯತುಲ್ ಮುಅಲ್ಲಿಮೀನ್, ಮದರಸ ಮ್ಯಾನೇಜ್ ಮೆಂಟ್, ಜಂಇಯ್ಯತುಲ್ ಮುದರ್ರಿಸೀನ್, ಜಂಇಯ್ಯತುಲ್ ಖುತಬಾ, ಸಮಸ್ತ ಬಾಲ ವೇದಿ ಸಂಯುಕ್ತವಾಗಿ ಈ ಜಾಥಾ ಹಮ್ಮಿಕೊಂಡಿದೆ ಎಂದರು.
ಅಂದು ಬೆಳಗ್ಗೆ 9 ಗಂಟೆಗೆ ಬಾವುಟಗುಡ್ಡೆಯಿಂದ ಮೀಲಾದ್ ಜಾಥಾ ಆರಂಭಗೊಳ್ಳಲಿದ್ದು, ಜ್ಯೋತಿ ಅಂಬೇಡ್ಕರ್ ವೃತ್ತದ ಮೂಲಕ ಹಂಪನಕಟ್ಟೆ ಮಾರ್ಗವಾಗಿ ಪುರಭವನ ತಲುಪಲಿದೆ. ಬಳಿಕ ಸಮಸ್ತದ ಅಧ್ಯಕ್ಷ ಸಯ್ಯಿದುಲ್ ಉಲಮಾ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ನೇತೃತ್ವದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.