ಹನಗೋಡು : ಮೈಸೂರಿನ ಸಿದ್ದಗಂಗಮ್ಮ ಚಾರಿಟಬಲ್ ಟ್ರಸ್ಟ್ ಐಎಪ್ ಎಲ್ ಐ ರಾಜೇಶ್ ಕಣ್ಣಿನ ಆಸ್ಪತ್ರೆ. ಇವರ ಪ್ರಾಯೋಜಕತ್ವದಲ್ಲಿ ಶನಿವಾರದಂದು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಸರ್ಕಾರಿ ಪದವಿ ಪೂರ್ವ ಕಾಲೇಜು ಹನಗೋಡು ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮವನ್ನು ಎಸ್ ಬಿ ಐ ವ್ಯವಸ್ಥಾಪಕ ಅನಿಲ್ ಇವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ವೈದ್ಯರು ಮನೆ ಬಾಗಿಲಿಗೆ ಬಂದಿರುವಾಗ ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ವೈದ್ಯರ ಸೇವಾ ಮನೋಭಾವಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ ಅವರು ಇಂದಿನ ದಿನಗಳಲ್ಲಿ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಬೇಕಾಗಿದೆ ಎಂದು ಹೇಳಿದರು.

ಆರೋಗ್ಯ ಶಿಬಿರದಲ್ಲಿ ಸಿದ್ದಗಂಗಮ್ಮ ಟ್ರಸ್ಟ್ ಅದ್ಯಕ್ಷ ಹರೀಶ್ ಮಾತನಾಡಿ ಮುಂದಿನ ದಿನಗಳಲ್ಲಿ ಇನ್ನೂ ಸಮುದಾಯಕ್ಕೆ ಅನುಕೂಲವಾಗುವ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲು ನಮ್ಮ ಟ್ರಸ್ಟ್ ಯಾವಾಗಲೂ ತಯಾರಿ ಎಂದು ಮತ್ತು ಸಂಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ ತಿಳಿಸಿದರು. ಐ ಎಫ್ ಐ ಎಲ್ ಅದ್ಯಕ್ಷ ಕಿರಣ್ ಕುಮಾರ್ ಮಾತನಾಡಿ ಜನರು ಆರೋಗ್ಯ ತಪಾಸಣೆಯ ಉಪಯೋಗ ಪಡೆಯಬೇಕು ಸಂಸ್ಥೆಯು ಬಡ ಜನರಿಗೆ ಉಪಯೋಗವಾಗುವ ಕಾರ್ಯಕ್ರಮ ಮಾಡುತ್ತಿದೆ ಎಂದು ಅಭಿನಂದನೆ ಸಲ್ಲಿಸಿದರು.

ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ದಾ ರಾ ಮಹೇಶ್ ಡಾ. ಚಿರಂಜೀವಿ ಡಾ. ಭೂಮಿಕಾ ಪ್ರಾಂಶುಪಾಲ ರಾಜೇಶ್ ಟ್ರಸ್ಟ್ ನ ಮಹೇಶ್ ಶೀಲಾ ಚಿರಂಜಿವಿ ರುದ್ರೇಶ್ ರವಿಕಿರಣ್ ಕೃಷ್ಣಮೂರ್ತಿ ರೂಪಹರೀಶ್ ವನ್ಯಜೀವಿ ಛಾಯಚಿತ್ರಕಿ ಛಾಯಸುನೀಲ್ ಸಿಡಿಸಿ ಸದಸ್ಯರಾದ ಮಂಜು ದೀಪು ಉಪಸ್ಥಿತರಿದ್ದರು. ಆರೋಗ್ಯ ಶಿಬಿರದ ಪ್ರಯೋಜನವನ್ನು ಸುಮಾರು 350ಕ್ಕೂ ಹೆಚ್ಚು ಜನರು ಹಾಗು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡಿರುತ್ತಾರೆ.