ಬೆಂಗಳೂರು: ನಟ ದರ್ಶನ್ ಕೋರಿಕೆಯಂತೆ ಕೋರ್ಟ್ ಅವರಿಗೆ ಹೆಚ್ಚುವರಿ ದಿಂಬು ಹಾಗೂ ಹಾಸಿಗೆ ನೀಡಲು ಪರಪ್ಪನ ಅಗ್ರಹಾರದ ಜೈಲು ಅಧಿಕಾರಿಗಳಿಗೆ ಸೂಚಿಸಿದೆ. ಜೊತೆಗೆ ಜೈಲಿನ ಒಳಗಡೆ ವಾಕ್ ಮಾಡಲು ಅವಕಾಶವನ್ನು ಕೂಡ ನೀಡಿದೆ.
ಇಂದು ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯವು ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಸಲ್ಲಿಸಿದ್ದಂತ ಅರ್ಜಿಯನ್ನು ವಿಚಾರಣೆ ನಡೆಸಿತು. ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿಗೆ ಸ್ಥಳಾಂತರಿಸಲು ಕೋರಿದ್ದನ್ನು ನಿರಾಕರಿಸಿತು. ಈ ನಿರ್ಧರವು ಜೈಲು ಕೈಪಿಡಿಯಂತೆ ಜೈಲಿನ ಡಿಜಿಗೆ ಸಂಬಂಧಪಟ್ಟಿತ್ತು. ಅವರು ತೀರ್ಮಾನ ಕೈಗೊಳ್ಳಲು ತಿಳಿಸಿತು.
ಇನ್ನೂ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲಿನಲ್ಲಿ ಹೆಚ್ಚುವರಿ ದಿಂಬು, ಹಾಸಿಗೆ ನೀಡುವಂತೆ ಕೋರಿದ್ದಕ್ಕೆ ಸಮ್ಮತಿಸಿದೆ. ಪರಪ್ಪನ ಅಗ್ರಹಾರದ ಜೈಲು ಅಧಿಕಾರಿಗಳಿಗೆ ಕೊಲೆ ಆರೋಪಿ ನಟ ದರ್ಶನ್ ಗೆ ಹೆಚ್ಚುವರಿ ದಿಂಬು, ಹಾಸಿಗೆ ನೀಡುವಂತೆ ಸೂಚಿಸಿದೆ.