Wednesday, September 10, 2025
Google search engine

Homeರಾಜ್ಯಕೆ.ಎಸ್.ಬಿ.ಡಿ.ಬಿ ಗೆ ಭೇಟಿ ನೀಡಿ ಚರ್ಚಿಸಿದ ಜರ್ಮನಿ ಸಂಸದ

ಕೆ.ಎಸ್.ಬಿ.ಡಿ.ಬಿ ಗೆ ಭೇಟಿ ನೀಡಿ ಚರ್ಚಿಸಿದ ಜರ್ಮನಿ ಸಂಸದ


ಬೆಂಗಳೂರು : ಜರ್ಮನ್ ದೇಶದ ಹ್ಯಾಂಬರ್ಗ್ ಇನ್ವೆಸ್ಟ್ ಹಾಗೂ ಕೆಎಸ್ಬಿಡಿಬಿ ಯೊಂದಿಗೆ ಸಾಂಸ್ಥಿಕ ಪಾಲುಗಾರಿಕೆಯು ಹಸಿರು ಶಕ್ತಿ ಬೆಳವಣಿಗೆ ಹಾಗೂ ನೂತನ ಮತ್ತು ಪುನರ್ ಉತ್ಪಾದಿಸಲ್ಪಡುವ ಇಂಧನಗಳ ಉನ್ನತಿಕರಣ ಹಾಗೂ ವಾಣಿಜ್ಯಕರಣಕ್ಕೆ ನೆರವಾಗಲಿದೆ ಎಂದು ಜರ್ಮನಿ ಸಂಸತ್ ನ ಸದಸ್ಯರಾದ ಪ್ರರ್ಮೋದ್ ಕುಮಾರ್ ಅವರು ತಿಳಿಸಿದರು.

ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಮತ್ತು ಜರ್ಮನ್ ದೇಶದ ಪ್ರತಿಷ್ಠಿತ ಆರ್ಥಿಕ ಸಂಸ್ಥೆಯಾದ ಹ್ಯಾಂಬರ್ಗ್ ಇನ್ವೆಸ್ಟ್ ನಡುವೆ ಹಸಿರು ಶಕ್ತಿ (Green Energy) ಪಾಲುಗಾರಿಕೆ ಸಂಬಂಧ ಚರ್ಚಿಸಲು ಪರ್ಮೋದ್ ಕುಮಾರ್, ಸಂಸದ್ ಸದಸ್ಯರು, ಬರ್ಜೆಡರ್ಫ್ (ಜರ್ಮನಿ), ಫೆಡರಲ್ ಡಯೆಟ್ ಅವರು ಮಂಡಳಿಯ ಅಧ್ಯಕ್ಷರಾದ ಎಸ್.ಈ.ಸುಧೀಂದ್ರ ಅವರನ್ನು ಮಂಡಳಿಯ ಆಡಳಿತ ಕಛೇರಿಯಲ್ಲಿ ಭೇಟಿಯಾಗಿ ಚರ್ಚಿಸಿದರು.

ಜರ್ಮನ್ ದೇಶದ ಪ್ರತಿಷ್ಠಿತ ಆರ್ಥಿಕ ಸಂಸ್ಥೆಯಾದ ಹ್ಯಾಂಬರ್ಗ್ ಇನ್ವೆಸ್ಟ್ ನಡುವೆ ಹಸಿರು ಶಕ್ತಿ (Green Energy) ಕ್ಷೇತ್ರದ ಉನ್ನತೀಕರಣ ಹಾಗೂ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯು ಸಾಂಸ್ಥಿಕ ಪಾಲುಗಾರಿಕೆಗಾಗಿ ಆಸಕ್ತಿ ಹೊಂದಿದ್ದು ವಾಣಿಜ್ಯೀಕರಣಕ್ಕಾಗಿ ಈ ಹಸಿರು ಇಂಧನ ಕ್ಷೇತ್ರದ ಬೆಳವಣಿಗೆ ಇಂಧನಗಳಿಂದ ಉತ್ಪಾದಿಸಲ್ಪಡುವ ಪವನ ಶಕ್ತಿ, ಸೌರ ಶಕ್ತಿ, ಜೈವಿಕ ಇಂಧನ ಹಾಗೂ ತ್ಯಾಜ್ಯಗಳಿಂದ ಉತ್ಪಾದಿಸಲ್ಪಡುವ ಇಂಧನಗಳ ಕ್ಷೇತ್ರಗಳಲ್ಲಿ ಜ್ಞಾನ, ಸಂಶೋಧನೆ, ಕೈಗಾರಿಕಾಗಳನ್ನು ಮತ್ತು ಉದ್ದಿಮೆದಾರರ ಪ್ರೋತ್ಸಾಹಕ್ಕೆ ಜಂಟಿಯಾಗಿ ಕಾರ್ಯಾಚರಣೆ ರೂಪಿಸಿ ಅನುಷ್ಟಾನಗೊಳಿಸಲು ದಾರಿಯಾಗಲಿದೆ ಎಂದು ಅವರು ತಿಳಿಸಿದರು.

ಕೆಎಸ್ಬಿಡಿಬಿ ಅಧ್ಯಕ್ಷರಾದ ಎಸ್.ಈ.ಸುಧೀಂದ್ರ ಮಾತನಾಡಿ, ಈ ಕ್ಷೇತ್ರಗಳಲ್ಲಿ ಜರ್ಮನ್ ದೇಶದ ಹೂಡಿಕೆದಾರರು ಬಂಡವಾಳ ತೊಡಗಿಸಲು ಪೂರಕ ವಾತಾವರಣ ಸೃಷ್ಟಿಸಿ ಜರ್ಮನಿನ ಸಹಭಾಗಿತ್ವದಲ್ಲಿ ಕಾರ್ಯಯೋಜನೆ ರೂಪಿಸಲು ಅಗತ್ಯ ನೀತಿ ರಚನೆ, ತರಬೇತಿ ಕಾರ್ಯಕ್ರಮಗಳ ಆಯೋಜನೆ, ಪೈಲೆಟ್ ಕಾರ್ಯಕ್ರಮಗಳ ಅನುಷ್ಟಾನಕ್ಕೆ ಕೆಎಸ್ಬಿಡಿಬಿ ಹಾಗೂ ಜರ್ಮನ್ ದೇಶದ ಹ್ಯಾಂಬರ್ಗ್ ಇನ್ವೆಸ್ಟ್ ನಡುವಿನ ಸಾಂಸ್ಥಿಕ ಪಾಲುಗಾರಿಕೆಯು ಹಸಿರು ಶಕ್ತಿ (Green Energy) ಕ್ಷೇತ್ರದ ಬೆಳವಣಿಗೆ ಹಾಗೂ ಜೈವಿಕ ಇಂಧನ ಕ್ಷೇತ್ರದಲ್ಲಿ ನೂತನ ಆವಿಷ್ಕಾರ, ಬಂಡವಾಳ ಹೂಡಿಕೆ ಹಾಗೂ ಸುಸ್ಥಿರ ಇಂಧನ ಅಭಿವೃದ್ಧಿಯಲ್ಲಿ ಮಾದರಿಯಾಗಲಿದೆ ಹಾಗೂ ಕಾರ್ಬನ್ ಹೊರಸುಸುವಿಕೆಯನ್ನು ತಡೆಗಟ್ಟಿ ಸುಸ್ಥಿರ ಆರ್ಥಿಕತೆಯನ್ನು ಕಾಪಾಡಿಕೊಳ್ಳಬಹುದು ಎಂದು ಅಭಿಪ್ರಾಯ ಪಟ್ಟರು.

ಈ ಸಂದರ್ಭದಲ್ಲಿ ಲೀಲೀ ಓಎನ್ಜಿ, ಯೋಜನಾ ನಿರ್ದೇಶಕರು – ಇಂಟರ್ ನ್ಯಾಷನಲ್ ಇನ್ಸ್ವಸ್ಟ್ಮೆಂಟ್ಸ್, ಹ್ಯಾಂಬರ್ಗ್ ಇನ್ವೆಸ್ಟ್, ಸಮಿಹಾ ಪ್ರದೀಪ್ ಸುಲೆ, ಹ್ಯಾಂಬರ್ಗ್ ಇನ್ವೆಸ್ಟ್ನ, ಮುಂಬಯಿ ಮುಖ್ಯ ಪ್ರತಿನಿಧಿಗಳು, ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಾದ ಶಿವಶಂಕರ್.ಎಲ್, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಲೋಹಿತ್ ಬಿ.ಆರ್ಯೋಜನಾ ಸಲಹೆಗಾರರಾದ ಡಾ.ದಯಾನಂದಜಿ. ಎನ್ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular