ಮೈಸೂರು : ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಗಣೇಶಮೂರ್ತಿ ವಿಸರ್ಜನೆ ವೇಳೆ ಕಲ್ಲು ತೂರಾಟ ನಡೆಸಿರುವುದನ್ನು ಖಂಡಿಸಿ ಕರ್ನಾಟಕ ಸೇನಾಪಡೆ ವತಿಯಿಂದ ಪ್ರತಿಭಟನೆ ನಡೆಯಿತು.
ಜಿಲ್ಲಾಧಿಕಾರಿ ಕಛೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಮೆರವಣಿಗೆ ಬರುತ್ತಿದ್ದಂತೆ ಪ್ಲಾನ್ ಮಾಡಿ ಕಲ್ಲುಗಳನ್ನು ಇಟ್ಟುಕೊಂಡು ರಸ್ತೆಯ ಎಲ್ಲಾ ಲೈಟ್ ಗಳನ್ನು ಆಫ್ ಮಾಡಿ ಏಕಾಏಕಿ ಕಲ್ಲುಗಳನ್ನು ಎಸೆದಿರುವುದು ಅತ್ಯಂತ ಖಂಡನೀಯ ಎಂದರು.
ಸರ್ಕಾರ ಕಲ್ಲು ಎಸೆದವರ ಮೇಲೆ ಲಾಠಿಚಾರ್ಜ್ ಮಾಡದೆ ಹಿಂದೂ ಕಾರ್ಯಕರ್ತರ ಹಾಗೂ ಮಹಿಳೆಯರ ಮೇಲೆ ಲಾಠಿಚಾರ್ಜ್ ಮಾಡಿರುವುದು ಅತ್ಯಂತ ಖಂಡನೀಯ. ರಾಜ್ಯ ಸರ್ಕಾರ ಐದು ಬಿಟ್ಟಿ ಭಾಗ್ಯಗಳ ಜೊತೆ ಮತ ಹಾಕಿದ ಹಿಂದೂಗಳಿಗೆ ಮುಸ್ಲಿಂರಿಂದ ಕಲ್ಲಿನಲ್ಲಿ ಹೊಡೆಸಿಕೊಳ್ಳುವ ಭಾಗ್ಯವನ್ನು ಸಹ ಕರುಣಿಸುತ್ತಿದೆ. ಗೃಹ ಇಲಾಖೆ ಸಂಪೂರ್ಣ ವಿಫಲವಾಗಿದೆ. ಕೂಡಲೇ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಿ ಸೂಕ್ತಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಗೋಲ್ಡನ್ ಸುರೇಶ್, ಪ್ರಭುಶಂಕರ್, ಸಿಂಧುವಳ್ಳಿ ಶಿವಕುಮಾರ್, ಪ್ರಜೀಶ, ಮಧುವನ ಚಂದ್ರು, ಗಿರೀಶ್, ಕೃಷ್ಣಪ್ಪ, ಶಿವಲಿಂಗಯ್ಯ, ವರಕೂಡು ಕೃಷ್ಣೇಗೌಡ, ನೇಹ, ಭಾಗ್ಯಮ್ಮ, ಶೋಭಾರಾಣಿ ಗೌಡ, ಹೊನ್ನೇಗೌಡ, ಡಾ.ಶಾಂತರಾಜೇ ಅರಸ್, ಮಹಾದೇವಸ್ವಾಮಿ, ಪದ್ಮ, ತಾಯೂರು ಗಣೇಶ್, ಸುನಿಲ್, ನಂದಕುಮಾರ್ ,ನಾರಾಯಣಗೌಡ, ಹನುಮಂತಯ್ಯ, ಅಶೋಕ್, ಹನುಮಂತೇಗೌಡ, ಬಸವರಾಜು, ಆನಂದಗೌಡ, ಕೆ.ಪಿ.ನಾಗಣ್ಣ, ರಾಧಾಕೃಷ್ಣ, ರಘು ಅರಸ್, ಎಳನೀರ್ ರಾಮಣ್ಣ, ದರ್ಶನಗೌಡ, ಮೂರ್ತಿ ,ಲಿಂಗಯ್ಯ, ಪ್ರದೀಪ್, ಗಣೇಶ್ಪ್ರಸಾದ್, ರಘು ಆಚಾರ್, ಸ್ವಾಮಿಗೌಡ, ತ್ಯಾಗರಾಜ್, ರಾಮಕೃಷ್ಣೇಗೌಡ, ಚಂದ್ರಶೇಖರ್, ನಾಗರಾಜು, ರವೀಶ್, ರವಿನಾಯಕ್, ವಿಷ್ಣು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.