ಹಾಸನ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 2025-26ನೇ ಸಾಲಿನ ವಿಶೇಷ ಕಾರ್ಯಕ್ರಮಗಳಲ್ಲಿ ಒಂದಾದ “ಚಿಗುರು” ಕಾರ್ಯಕ್ರಮವೂ ಹಾಸನದ ದೇವೇಗೌಡ ನಗರದ ಸರ್ಕಾರಿ ಶಾಲೆ ಆವರಣದಲ್ಲಿ ನೆರವೇರಿತು.
ಕಾರ್ಯಕ್ರಮದ ಉದ್ಘಾಟನೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮುಖ್ಯ ಶಿಕ್ಷಕರಾದ ಪ್ರಮೀಳಾ ಎಸ್.ಕೆ ಹಾಗೂ ಆಸ್ಮಾ ತಬುಸಮ್ ರವರು ಮತ್ತು ಶಾಲೆಯ ಶಿಕ್ಷಕ ವೃಂದದವರು ಭಾಗಿಯಾಗಿದ್ದರು, “ಚಿಗುರು” ಕಾರ್ಯಕ್ರಮವೂ ಬಾಲ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕಾರ್ಯಕ್ರಮವಾಗಿದ್ದು, ಹಾಸನ ಜಿಲ್ಲೆಯ ಬಾಲ ಕಲಾವಿದರಿಗೆ ವೇದಿಕೆ ಕಲ್ಪಿಸಿಕೊಡಲಾಗುತ್ತದೆ.
“ಚಿಗುರು” ಕಾರ್ಯಕ್ರಮದಲ್ಲಿ ಲಿಪಿಕಾ ನಾಯರ್ ಮತ್ತು ತಂಡದವರಿAದ ಸುಗಮ ಸಂಗೀತ, ಆರಾಧ್ಯ ಟಿ ಮತ್ತು ತಂಡದವರಿAದ ಕೊಳಲು ವಾದನ, ದಿಗಂತ್ ಹೆಚ್ ಎನ್ ಮತ್ತು ತಂಡದವರಿAದ ಜಾನಪದ ಗೀತೆ, ನಾಗಶ್ರೀ ಮತ್ತು ತಂಡದಿAದ ನೃತ್ಯರೂಪಕ ಹಾಗೂ ಚಂದನ್ ಚರ್ಚಿಲ್ ಅವರ ಏಕಪಾತ್ರಾಭಿನಯ ಮತ್ತು ದೇವೇಗೌಡ ನಗರ ಸರ್ಕಾರಿ ಶಾಲೆ ಮಕ್ಕಳಿಂದ ನಾಟಕ ಪ್ರಯೋಗ ಯಶಸ್ವಿಯಾಗಿ ನೆರವೇರಿತು.