ಮೈಸೂರು ವಿಭಾಗದಿಂದ ರಕ್ತದಾನ ಶಿಬಿರ ಆಯೋಜನೆ, ವಿಭಾಗೀಯ ರೈಲ್ವೆ ವ್ಯವಸ್ಥಾಪಕರು, ಶ್ರೀ ಮುದಿತ್ ಮಿತ್ತಲ್, ಅವರಿಂದ ರಕ್ತದಾನ
ಮೈಸೂರು ವಿಭಾಗದಿಂದ ಇಂದು ರೈಲ್ವೆ ಆಸ್ಪತ್ರೆ, ಮೈಸೂರು ಹಾಗೂ ರಕ್ತ ನಿಧಿ, ಕೆ.ಆರ್. ಆಸ್ಪತ್ರೆ, ಮೈಸೂರು ಮೆಡಿಕಲ್ ಕಾಲೇಜ್ & ಸಂಶೋಧನಾ ಸಂಸ್ಥೆ ಸಹಯೋಗದೊಂದಿಗೆ ಯಶಸ್ವಿಯಾಗಿ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು. ಈ ಶಿಬಿರದ ಉದ್ದೇಶ ಸೇವಾ ಮನೋಭಾವ, ಸಹಾನುಭೂತಿ ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಉತ್ತೇಜಿಸುವುದಾಗಿತ್ತು.
ಶಿಬಿರವನ್ನು ಮುದಿತ್ ಮಿತ್ತಲ್, ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಮೈಸೂರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶ್ರೀ ಶಮ್ಮಾಸ್ ಹಮೀದ್, ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಮೈಸೂರು, ಡಾ. ಅಶೋಕ್ ಕುಮಾರ್ ಬಿ.ಎನ್, ಮುಖ್ಯ ವೈದ್ಯಾಧಿಕಾರಿ ಮೈಸೂರು, ಡಾ. ಕುಸುಮಾ ಹಾಗೂ ಡಾ. ಚಿಂಟು ಮೇರಿ ಮ್ಯಾಥ್ಯೂ, ಕೆ.ಆರ್. ಆಸ್ಪತ್ರೆ & ರಕ್ತ ನಿಧಿ ಇವರುಗಳು ಉಪಸ್ಥಿತರಿದ್ದರು. ಗಣ್ಯರು ಈ ಶಿಬಿರವನ್ನು ಶ್ಲಾಘಿಸಿ, ಇಂತಹ ಜೀವ ರಕ್ಷಕ ಕಾರ್ಯಕ್ರಮಗಳಲ್ಲಿ ಹೆಚ್ಚಿನವರು ಭಾಗವಹಿಸಲು ಪ್ರೋತ್ಸಾಹಿಸಿದರು.
ಅನೇಕ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸ್ವಯಂಸೇವಕರು ಉತ್ಸಾಹದಿಂದ ಶಿಬಿರದಲ್ಲಿ ಭಾಗವಹಿಸಿದರು. ಶ್ರೀ ಮುದಿತ್ ಮಿತ್ತಲ್ ವಿಭಾಗೀಯ ರೈಲ್ವೆ ವ್ಯವಸ್ಥಾಪಕರೊಂದಿಗೆ ಒಟ್ಟು 48 ಮಂದಿ ಸ್ವಯಂಸೇವಕರು ರಕ್ತದಾನ ಮಾಡಿ, ಸಮಾಜದ ಕಲ್ಯಾಣ ಮತ್ತು ಸಾರ್ವಜನಿಕ ಆರೋಗ್ಯದತ್ತ ತಮ್ಮ ಬದ್ಧತೆಯನ್ನು ತೋರಿಸಿದರು. ರಕ್ತದಾನ ಶಿಬಿರವು ರಕ್ತದಾನ ಪೂರೈಕೆಯನ್ನು ಬಲಪಡಿಸಿ, ಪ್ರದೇಶದ ಅಗತ್ಯವಿರುವ ರೋಗಿಗಳಿಗೆ ನೆರವಾಗುವ ಉದ್ದೇಶವನ್ನು ಹೊಂದಿದ್ದರಿಂದ ಹೆಚ್ಚಿನ ಮೆಚ್ಚುಗೆಗೆ ಪಾತ್ರವಾಯಿತು.
ಮೈಸೂರು ವಿಭಾಗವು ತನ್ನ ಸಮಾಜಮುಖಿ ಸೇವಾ ಬದ್ಧತೆಯನ್ನು ಪುನರುಚ್ಚರಿಸಿ, ಆರೋಗ್ಯ ಸಂಬಂಧಿತ ಹಿತಾಸಕ್ತಿ ಕಾರ್ಯಕ್ರಮಗಳು ಹಾಗೂ ಸಾಮಾಜಿಕ ಉಪಕ್ರಮಗಳಿಗೆ ನಿರಂತರವಾಗಿ ಬೆಂಬಲ ನೀಡುವುದಾಗಿ ತಿಳಿಸಿದೆ.