Saturday, September 13, 2025
Google search engine

Homeಅಪರಾಧಹಾಸನದಲ್ಲಿ ಗಣೇಶ ಮೆರವಣಿಗೆಯ ವೇಳೆ ವೇಳೆ ಟ್ರಕ್ ಹರಿದು ದುರಂತ ಕೇಸ್: ಚಾಲಕನ ವಿರುದ್ಧ...

ಹಾಸನದಲ್ಲಿ ಗಣೇಶ ಮೆರವಣಿಗೆಯ ವೇಳೆ ವೇಳೆ ಟ್ರಕ್ ಹರಿದು ದುರಂತ ಕೇಸ್: ಚಾಲಕನ ವಿರುದ್ಧ FIR ದಾಖಲು

ಹಾಸನ : ತಾಲೂಕಿನ ಮೊಸಳೆ ಹೊಸಳ್ಳಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಬಳಿ ನೆನ್ನೆ ರಾತ್ರಿ ಘೋರ ದುರಂತ ಒಂದು ಸಂಭವಿಸಿದ್ದು ಗಣೇಶ ಮೆರವಣಿಗೆ ವೇಳೆ ಏಕಾಏಕಿ ಕ್ಯಾಂಟರ್ ನುಗ್ಗಿ 9 ಜನರು ಸಾವನ್ನಪ್ಪಿದ್ದು 20ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಇದೀಗ ಈ ಒಂದು ಘಟನೆಗೆ ಸಂಬಂಧಿಸಿದಂತೆ, ಕ್ಯಾಂಟರ್ ಚಾಲಕ ಭುವನ ವಿರುದ್ಧ ಎಫ್ಐಆರ್ ದಾಖಲಾಗಿದೆ. ಹಾಸನ ಜಿಲ್ಲೆಯ ಗೊರೂರು ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಇನ್ನ ಈ ಒಂದು ಘಟನೆಯಲ್ಲಿ ಕ್ಯಾಂಟರ್ ಚಾಲಕ ಭುವನ್ಗು ಸಹ ಗಂಭೀರವಾದ ಗಾಯಗಳಾಗಿವೆ. ಈ ಹಿನ್ನೆಲೆ ಆತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಚಾಲಕ ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂಬುದು ಗೊತ್ತಿಲ್ಲ. ಆ ಬಗ್ಗೆ ಪೊಲೀಸರು ಗೌಪ್ಯತೆ ಕಾಪಾಡಿಕೊಂಡಿದ್ದಾರೆ.

RELATED ARTICLES
- Advertisment -
Google search engine

Most Popular