ಕೊಪ್ಪಳ : ಬಿಜೆಪಿ ನಾಯಕರ ಪ್ರಚೋದನಾಕಾರಿ ಭಾಷಣ ಹೇಳಿಕೆ ಕುರಿತು ಸಚಿವ ಶಿವರಾಜ್ ತಂಗಡಿಗೆ ಆಕ್ರೋಶ ವ್ಯಕ್ತಪಡಿಸಿದ್ದು, ಮಾಜಿ ಸಂಸದ ಪ್ರತಾಪ್ ಸಿಂಹ ಅಷ್ಟೆ ಅಲ್ಲ ಎಲ್ಲ ಬಿಜೆಪಿ ನಾಯಕರನ್ನು ಗಡಿಪಾರು ಮಾಡಬೇಕು ಎಂದು ಕೊಪ್ಪಳದಲ್ಲಿ ಸಚಿವ ಶಿವರಾಜ್ ತಂಗಡಗಿ ಆಕ್ರೋಶ.
ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಬಿಜೆಪಿಯವರ ಮಕ್ಕಳು ಗಣೇಶ ಉತ್ಸವದಲ್ಲಿ ಕುಣಿಯುತ್ತಾರಾ? ಯಾವ ನಾಯಕರು ಮಕ್ಕಳು ಪ್ರತಿಭಟನೆಯಲ್ಲಿ ಭಾಗಿಯಾಗುತ್ತಾರೆ? ಬಡವರ ಮಕ್ಕಳನ್ನು ಪ್ರಚೋದಿಸಿ ಜಗಳ ಮಾಡಿಸುತ್ತಾರೆ. ಕೊನೆಗೆ ಅನಾಹುತಕ್ಕೀಡಾಗುವುದು ಹಿಂದೂಗಳ ಮಕ್ಕಳು ಎಂದು ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ಹೊರ ಹಾಕಿದರು