Monday, September 15, 2025
Google search engine

Homeರಾಜ್ಯದಸರಾ ಹಬ್ಬ ಮುಲ್ಲಾರ ಪ್ರಕಾರ ನಡೆಯುತ್ತಿದೆ : ಆರ್. ಅಶೋಕ್ ವಾಗ್ದಾಳಿ

ದಸರಾ ಹಬ್ಬ ಮುಲ್ಲಾರ ಪ್ರಕಾರ ನಡೆಯುತ್ತಿದೆ : ಆರ್. ಅಶೋಕ್ ವಾಗ್ದಾಳಿ

ಬೆಂಗಳೂರು : ಈ ಬಾರಿ ಮೈಸೂರು ದಸರಾ ಉದ್ಘಾಟನೆಗೆ ಖ್ಯಾತ ಸಾಹಿತಿ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿದ್ದು, ರಾಜ್ಯ ಸರ್ಕಾರದ ವಿರುದ್ಧ ಇದೀಗ ವಿಪಕ್ಷಗಳು ತೀವ್ರ ಅಕ್ರೋಶ ವ್ಯಕ್ತಪಡಿಸಿವೆ. ಇದೀಗ ಇದೇ ವಿಚಾರವಾಗಿ ವಿಪಕ್ಷ ನಾಯಕ ಆರ್ ಅಶೋಕ್ ದಸರಾ ಉದ್ಘಾಟನೆ, ಮುಲ್ಲಾರ ಪ್ರಕಾರ ನಡೆಯುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಇದೆ ವಿಚಾರವಾಗಿ ಮಾತನಾಡಿದ ಅವರು, ದಸರಾ ಉದ್ಘಾಟನೆ ಮುಲ್ಲಾರ ಪ್ರಕಾರ ನಡೆಯುತ್ತಿದೆ , ಮುಸ್ಲಿಮರ ಹಬ್ಬವನ್ನು ಹಿಂದುಗಳ ಕೈಯಲ್ಲಿ ಮಾಡಿಸಲಿ ಬಲವಂತವಾಗಿ ಮುಸ್ಲಿಮರಿಂದ ಯಾಕೆ ಉದ್ಘಾಟಿಸಬೇಕು? ಉದ್ಘಾಟನೆಗೆ ಭಾನುಮುಷ್ತಾಕ್ ಅವರನ್ನು ಕರೆಯುವುದು ಸರ್ಕಾರದ ಅಧಿಕಾರ ಅಂತ ಮಾಡಿರಬಹುದು ಏನೋ ಕಾನೂನು ಇರಲಿಲ್ಲ ಹಾಗಾಗಿ ಕೋರ್ಟ್ ನಲ್ಲಿ ಪ್ರತಾಪ್ ಸಿಂಹ ಸಲ್ಲಿಸಿದ ಅರ್ಜಿ ವಜಾ ಆಗಿದೆ.

ದಸರಾ ಹಬ್ಬ ಹಿಂದೂ ಸಂಪ್ರದಾಯ. ಹಿಂದೂ ಪಂಚಾಂಗದ ಪ್ರಕಾರ ನಡೆದುಕೊಂಡು ಬಂದಿದೆ. ಸಿದ್ದರಾಮಯ್ಯ ಅವರು ಬಂದ ಮೇಲೆ ಒಂದು ರೀತಿ ಮುಲ್ಲಾ ಗಳ ಸರ್ಕಾರ ತಾಲಿಬಾನ್ ಸರ್ಕಾರ ಆಗಿರುವುದರಿಂದ ಪಂಚಾಂಗ ತೆಗೆದು ಪಕ್ಕಕ್ಕೆ ಇಟ್ಟಿದ್ದಾರೆ. ಇದಕ್ಕೆ ಕಾನೂನು ತರಬೇಕು. ಈ ರೀತಿ ಸಿಎಂ ಸಿದ್ದರಾಮಯ್ಯ ಮಾಡುತ್ತಾರೆ ಎಂದು ಕರ್ನಾಟಕ ಜನತೆ ಅಂದುಕೊಂಡಿರಲಿಲ್ಲ ಎಂದು ತಿಳಿಸಿದರು.

RELATED ARTICLES
- Advertisment -
Google search engine

Most Popular