ಹುಣಸೂರು: ಗ್ರಾಮಾಂತರ ಸರಕಾರಿ ಶಾಲೆಗಳ ಪುನಶ್ಚೇತನ ನಮ್ಮ ಅಂತರಾಷ್ಟ್ರೀಯ ರೋಟರಿ ಸೇವೆಯಾಗಿದೆ ಎಂದು ರೋಟರಿ ಅಧ್ಯಕ್ಷ ಸುಕಿನ್ ಪದ್ಮನಾಭ ತಿಳಿಸಿದರು.
ಹುಣಸೂರು ತಾಲೂಕು ಉದ್ದೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹುಣಸೂರು ರೋಟರಿ ಕ್ಲಬ್ ಮತ್ತು ರೋಟರಿ ಕ್ಲಬ್ ಆಫ್ ಬೆಂಗಳೂರು 3192 ವತಿಯಿಂದ ಶಾಲೆಯ ಕಾಂಪೌಂಡಿಗೆ ಗೇಟ್ ಮತ್ತು ಗೋಪರ ನೀಡಲಾಗಿದೆ ಎಂದು ತಿಳಿಸಿದರು.
ರೊ.ಡಾ.ಅನಿಲ್ ಅಗಡಿ ಮಾತನಾಡಿ, ಡಾ.ಮುಸ್ತಾಲಿ ವಾಗ್ ಮತ್ತು ಹುಣಸೂರು ರೋಟರಿ ಅಧ್ಯಕ್ಷ ಹೆಚ್.ಆರ್.ಕೃಷ್ಣಕುಮಾರ್ ಮನವಿ ಮೇರೆಗೆ ಉದ್ದೂರು ಸರಕಾರಿ ಶಾಲೆಗೆ ಗೇಟ್ ಮತ್ತು ಗೋಪರ, ಮತ್ತು ಕುರ್ಚಿ, ಟೇಬಲ್ ನೀಡಲು ನಿರ್ಧರಿಸಲಾಯಿತು. ಮುಂದೆಯೂ ಈ ಶಾಲೆಯ ಅಭಿವೃದ್ಧಿಗೆ ಸಹಕಾರ ನೀಡಲಾಗುವುದು ಎಂದರು.
ಹುಣಸೂರು ರೋಟರಿ ಅಧ್ಯಕ್ಷ ಹೆಚ್.ಆರ್. ಕೃಷ್ಣಕುಮಾರ್ ಮಾತನಾಡಿ, ಎರಡು ತಿಂಗಳಲ್ಲಿ ಜಿಲ್ಲಾ ಯೋಜನೆಯಲ್ಲಿ ಈಗಾಲೇ ಅಂಗನವಾಡಿಗೆ ಉನ್ನತಿಕರಣದಲ್ಲಿ ಮಕ್ಕಳಿಗೆ ಚೇರು, ಸಮವಸ್ತ್ರ ನೀಡಲಾಗಿದ್ದು, ನಮ್ಮ ರೋಟರಿ ಕ್ಲಬ್ ಆಫ್ ಬೆಂಗಳೂರು ಅವರ ಸಹಕಾರ ಹಾಗೂ ನಮ್ಮ ರೋಟರಿ ಸದಸ್ಯರ ಸಹಕಾರದಿಂದ ಸುಮಾರು ಎಪ್ಪತೈದರಿಂದ ಒಂದು ಲಕ್ಷದ ಕಾಮಗಾರಿಗೆ ಸಹಕಾರ ನೀಡಲಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಹುಣಸೂರು ರೋಟರಿ ಕ್ಲಬ್ ವತಿಯಿಂದ ಮಧುಮೇಹಿಗಳಿಗೆ ನೆರವಾಗುವ ನಿಟ್ಟಿನಲ್ಲಿ ತಾಲೂಕಿನ ಜನತೆಗೆ ಇನ್ನೂ ಹೆಚ್ಚಿನ ಸಹಕಾರಿಯಾಗಲೆಂದು ಡಯಾಲೀಸಸ್ ಕೇಂದ್ರ ಅಥವಾ ಡುಯಾಲೀಸಸ್ ಮೆಷಿನ್ನ್ನು ಸರಕಾರಿ ಆಸ್ಪತ್ರೆಗೆ ನೀಡುವ ಚಿಂತನೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಧರ್ಮಾಪುರ ಶ್ಯಾಮಣ್ಣ, ಸರ್ಜಂಟ್ ಲೂಯಿಸ್ ಪೆರೇರಾ, ರೊ.ಮುಂಜುನಾಥ್, ಬೆಂಗಳೂರು ರೋಟರಿ ಕ್ಲಬ್ಬಿನ ಹಿರಿಯ ರೊ.ಮೋಹನ್, ರೊ.ಮೀರಾ ಶಂಕರ್, ರೊ.ಅಂಜು ಅಗಡಿ, ರೊ.ಗೌರಿ, ಶಿಕ್ಷಕಿ ಚಿನ್ನಮ್ಮಇದ್ದರು.