ನೆಲಮಂಗಲ: ನೆಲಮಂಗಲ ಟೋಲ್ ಬಳಿ ಬಸ್ ಚಲಾಯಿಸುವಾಗ ಎದೆನೋವು ಕಾಣಿಸಿಕೊಂಡಾಗರೂ ಪ್ರಯಾಣಿಕರ ಜೀವ ರಕ್ಷಣೆಗಾಗಿ ಬಸ್ ನಿಲ್ಲಿಸಿ ಚಾಲಕ ಪ್ರಾಣಬಿಟ್ಟಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ಟೋಲ್ ಬಳಿ ನಡೆದಿದೆ.
ಉತ್ತರ ಕರ್ನಾಟಕದ ಮೂಲದ ರಾಜೀವ್ ಬಿರಾದಾರ ಮೃತ ಕೆಎಸ್‌ಆರ್‌ಟಿಸಿ ಚಾಲಕ. ಮೆಜೆಸ್ಟಿಕ್‌ನಿಂದ ಹರಿಹರಕ್ಕೆ ತೆರಳುತ್ತಿದ್ದ ಬಸ್ ಚಲಾಯಿಸುತ್ತಿದ್ದರು.
ಬಸ್ ನೆಲಮಂಗಲದ ಟೋಲ್ ಹತ್ತಿರ ಬಂದಾಗ ಅವರಿಗೆ ಎದೆನೋವು ಶುರುವಾಯಿತು. ತಕ್ಷಣ ಬಸ್ ನಿಲ್ಲಿಸಿ ಪ್ರಯಾಣಿಕರ ಪ್ರಾಣ ಕಾಪಾಡಿದ ಅವರು, ಆಸ್ಪತ್ರೆಗೆ ಸಾಗುವ ಮಾರ್ಗದಲ್ಲೇ ಕೊನೆಯುಸಿರೆಳೆದರು.
ನೆಲಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹ ಶವಾಗಾರಕ್ಕೆ ರವಾನಿಸಲಾಗಿದೆ.