ಮಂಗಳೂರು (ದಕ್ಷಿಣ ಕನ್ನಡ) : ಕೆಂಪು ಕಲ್ಲು ದರ ನಿಗದಿ ಬಗ್ಗೆ ಚರ್ಚೆ ನಡೆಸಲಾಗಿದೆ. ಜನರಿಗೆ ಸುಲಭ ಮತ್ತು ಕಡಿಮೆ ದರದಲ್ಲಿ ಸಿಗುವಂತೆ ಮಾಡಲಾಗುವುದು. ಯಾವುದೇ ಕಾರಣಕ್ಕೂ ಹಿಂದಿಗಿಂತ ಅಧಿಕ ಹಣ ಪಡೆದುಕೊಳ್ಳದಂತೆ ನೋಡಿಕೊಳ್ಳಲಾಗುವುದು ಎಂದರು.
ಈಗಾಗಲೇ ಎಲ್ಲಾ ರೀತಿಯ ರಾಜ ಧನ ಮತ್ತು ತೆರಿಗೆ ವಿನಾಯಿತಿ ಕೊಟ್ಟು ಅಧಿಕ ಹಣ ಪಡೆಯುವುದು ಹೇಗೆ ಎಂದು ಸ್ಪೀಕರ್ ಯುಟಿ ಖಾದರ್ ಪ್ರಶ್ನಿಸಿದ್ದಾರೆ. ಅವರು ಇಂದು ಮಂಗಳೂರು ಕದ್ರಿಯಲ್ಲಿ ನಡೆದ ಪ್ರೆಸ್ ಮೀಟ್ ನಲ್ಲಿ ಮಾತನಾಡಿದರು.
ಹಿಂದೆಗಿಂತ ಕಡಿಮೆ ದರದಲ್ಲಿ ಜನರಿಗೆ ಕಲ್ಲು ಸಿಗುವಂತೆ ವ್ಯವಸ್ಥೆ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಕ್ರಮ ಕೈಗೊಂಡು ಸರ್ಕಾರವೇ ದರ ನಿಗದಿ ಪಡಿಸಲಿದೆ ಎಂದ ಅವರು, ಈ ವಿಷಯದ ಬಗ್ಗೆ ಪ್ರತಿಭಟಿಸುವ ಹಕ್ಕ ಪ್ರಜಾಪ್ರಭುತ್ವದಲ್ಲಿ ಇದೆ ಎಂದು ಈ ವೇಳೆ ಸ್ಪೀಕರ್ ಒಪ್ಪಿಕೊಂಡರು ಮತ್ತು ರಾಜಕೀಯ ಪ್ರತಿಭಟನೆಗಳು ಅರ್ಥವಾಗುವಂತಹದ್ದಾಗಿದ್ದರೂ, ಈಗ ನ್ಯಾಯಯುತ ಮತ್ತು ಕಾನೂನುಬದ್ಧ ಪರಿಹಾರವನ್ನು ನೀಡಲಾಗಿದೆ, ಇದು ಕೆಂಪು ಕಲ್ಲು ವ್ಯಾಪಾರದಲ್ಲಿರುವವರಿಗೆ ಪರಿಹಾರವನ್ನು ನೀಡುತ್ತದೆ ಎಂದರು.
ಮರಳು ಗಣಿಗಾರಿಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಇದೇ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು. ಮರಳು ಖರೀದಿಯನ್ನು ಸುಗಮಗೊಳಿಸಲು ಮತ್ತು ಅಕ್ರಮಗಳನ್ನು ಕಡಿಮೆ ಮಾಡಲು ‘ಮರಳು ಬಜಾರ್’ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಾಗಿದೆ. ಸಿಆರ್‌ಝಡ್ ಉಲ್ಲಂಘನೆಯ ಅಡಿಯಲ್ಲಿ ವಶಪಡಿಸಿಕೊಂಡ ಮರಳಿನ ದಾಸ್ತಾನನ್ನು ಈಗ ಸಾರ್ವಜನಿಕ ಕಾರ್ಯಗಳಿಗಾಗಿ ಮರುನಿರ್ದೇಶಿಸಲಾಗುವುದು, ಮೂಲಸೌಕರ್ಯ ಅಗತ್ಯಗಳಿಗಾಗಿ ವಸ್ತುಗಳನ್ನು ಹಂಚಿಕೆ ಮಾಡಲು ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ ಅಂದರು.