ಹುಣಸೂರು: ನಾಡಿನಲ್ಲಿ ನಮ್ಮನ್ನಾಳುವ ಸರಕಾರಗಳಿಂದ ರೈತರಿಗೆ ಆಗುತ್ತಿರುವ ಅನ್ಯಾಯದ ವಿರುದ್ದ ಅಹಿಂದ ರೈತ ಸಂಘ ಅಸ್ತಿತ್ವಕ್ಕೆ ಬರಲಿದೆ ಎಂದು ಅತ್ಯುತ್ತಮ ರೈತ ಪ್ರಶಸ್ತಿ ಪುರಸ್ಕೃತ ಸೋಮನಹಳ್ಳಿ ಶಿವಶೇಖರ್ ತಿಳಿಸಿದರು.
ನಗರದ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಿನಾಂಕ 22.09.25ರ ಸೋಮವಾರ ನಗರದ ಡಾ.ಅಂಬೇಡ್ಕರ್ ಭವನದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಸಾನಿಧ್ಯವನ್ನು ಶ್ರೀ ಶ್ರೀ ನಟರಾಜಸ್ವಾಮಿ ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ , ಉದ್ಘಾಟನೆ ಮಲ್ಲಿಕಾರ್ಜುನ ಖರ್ಗೆ ಅಭಿಮಾನಿ ಸಂಘದ ರಾಜ್ಯಾಧ್ಯಕ್ಷ ನಾಗವಾಲ ನರೇಂದ್ರ ನೆರೆವೇರಿಸಲಿದ್ದಾರೆ, ಪ್ರಾಸ್ತಾವಿಕ ನುಡಿ ಶಿವಶೇಖರ್ ಅವರಿಂದ ಎಂದು ತಿಳಿಸಿದರು.
ಈ ನೂತನ ಸಂಘ ಹುಟ್ಟಲು ತಾಲ್ಲೂಕಿನ ಅಧಿಕಾರಿಗಳು ಮತ್ತು ಸರಕಾರದ ದ್ವಂದ್ವ ನೀತಿಯ ಮೂಲಕ. ಗೋಮಾಳದ ಉಳುಮೆ ಮಾಡುತ್ತಿದ್ದು 2000 ಸಾವಿರ ಅರ್ಜಿಗಳಿಗೆ ನಿಜವಾದ ರೈತರಿಗೆ ಸಿಗಬೇಕಾದ ಸಾಗುವಳಿ ನೀಡದೆ ಅನ್ಯಾಯವೆಸಗುವುದರ ಜೊತೆಗೆ ಹತ್ತು ವರ್ಷಗಳಿಂದ ಒಂದು ಗ್ರಾಮವನ್ನು ಪೋಡಿ ಮುಕ್ತ ಮಾಡಿಲ್ಲ ಎಂದು ಆರೋಪಿಸಿದರು.
ನಗರದ 7 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಾವಿರಾರು ರೈತರು ಹಿಂದಿನಿಂದಲೂ ಫಾರಂ ನಂ. 50,53,57 ಸಾಗುವಳಿಗಾಗಿ ಅರ್ಜಿ ಸಲ್ಲಿಸಿದ್ದು, ಅವರಿಗೆ ಇಲ್ಲಿಯವರೆಗೆ ಸಾಗುವಳಿ ನೀಡದೆ ಅರ್ಜಿಗಳನ್ನು ವಿಲೇ ಇಡಲಾಗಿದೆ. ಇದರ ಪರಿಣಾಮವಾಗಿ ಹೋರಾಟ ಮಾಡಲು ಸರಕಾರದ ಗಮನ ಸೆಳದು ರೈತರಿಗೆ ನ್ಯಾಯ ಒದಗಿಸಲು ಕರ್ನಾಟಕ ರಾಜ್ಯ ಅಹಿಂದ ರೈತ ಸಂಘವನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಹಿಂದ ರೈತ ಸಂಘದ ತಾಲೂಕು ಅಧ್ಯಕ್ಷ, ಚಿಟ್ಟಕ್ಯಾತನಹಳ್ಳಿ ರಮೇಶ್, ತಾಲೂಕು ಕಾರ್ಯಾಧ್ಯಕ್ಷ ಅಶೋಕ್ ಶೀರೇನಹಳ್ಳಿ, ಪ್ರಧಾನಕಾರ್ಯದರ್ಶಿ ಪರಮೇಶ್ , ರಾಮಚಂದ್ರ ನಾಯ್ಕ, ಚನ್ನಪ್ಪ, ವಾಸದೇವ್ ರೆಡ್ಡಿ ಇದ್ದರು.