ವರದಿ: ರವಿಚಂದ್ರ ಬೂದಿತಿಟ್ಟು
ಪಿರಿಯಾಪಟ್ಟಣ: ಗುಣಮಟ್ಟದ ಹಾಲು ಪೂರೈಸುವ ಉತ್ಪಾದಕರಿಗೆ ಹಾಲಿಗೆ ತಕ್ಕ ಬೆಲೆ ನೀಡಲಾಗುತ್ತದೆ ಹಾಗಾಗಿ ರೈತರು ಗುಣಮಟ್ಟದ ಹಾಲು ಪೂರೈಸುವ ಮೂಲಕ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬೇಕು ಎಂದು ಕಿರನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮುತ್ತುರಾಜ್ ತಿಳಿಸಿದರು.
ತಾಲೂಕಿನ ಕಿರನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ 2024-25 ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು ಆರ್ಥಿಕವಾಗಿ ಸದೃಢವಾಗಲು ಹೈನುಗಾರಿಕೆ ಒಂದು ಪ್ರಮುಖ ಉದ್ಯಮವಾಗಿದ್ದು ಕುಟುಂಬ ನಿರ್ವಹಣೆಗೆ ಹೈನುಗಾರಿಕೆ ಸಹಕಾರಿಯಾಗಿದೆ
ಹಾಗಾಗಿ ರೈತರು ವ್ಯವಸಾಯದ ಜೊತೆಗೆ ಹೈನುಗಾರಿಕೆಗೆ ಆದ್ಯತೆ ನೀಡಬೇಕು. ವೈಜ್ಞಾನಿಕವಾಗಿ ಹಸು ಸಾಕಾಣಿಕೆ ಮಾಡುವುದನ್ನು ಅಳವಡಿಸಿಕೊಳ್ಳಬೇಕು.
ಹೈನುಗಾರಿಕೆಯನ್ನು ನಮ್ಮ ಪಿರಿಯಾಪಟ್ಟಣ ಭಾಗದ ಜನರು ಉಪ ಕಸುಬನ್ನಾಗಿ ಮಾಡಿಕೊಳ್ಳುವ ಮೂಲಕ ಆರ್ಥಿಕ ಸ್ವಾವಲಂಬನೆಗೆ ದಾರಿ ಮಾಡಿಕೊಂಡಿದ್ದು ನಿಜಕ್ಕೂ ಶ್ಲಾಘನೀಯ, ಕೃಷಿಯಿಂದ ನಷ್ಟವಾದುದ್ದನ್ನು ಹೈನುಗಾರಿಕೆಯ ಮೂಲಕ ಸಂಪಾದಿಸುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದ ಹೈನುಗಾರಿಕೆಯಲ್ಲಿ ಪಿರಿಯಾಪಟ್ಟಣ ತಾಲೂಕು ಮೈಸೂರು ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ ಇದು ಹೆಮ್ಮೆಯ ವಿಷಯವಾಗಿದೆ.
ರೈತರಿಗಾಗಿ ಒಕ್ಕೂಟವು ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು ಈ ಅವಕಾಶವನ್ನು ಸದ್ಬಳಕೆ ಮಾಡಿ ಕೊಂಡು ಇನ್ನೂ ಹೆಚ್ಚಿನ ಹಾಲು ಪೂರೈಕೆ ಮಾಡಲು ಮುಂದಾಗಬೇಕು ಸಂಘವನ್ನು ಉನ್ನತ ಮಟ್ಟಕ್ಕೆ ತರಲು ಹಾಲು ಉತ್ಪಾದಕರ ಸಂಘದ ಸದಸ್ಯರು ಉತ್ತಮ ಗುಣಮಟ್ಟದ ಹಾಲು ನೀಡಬೇಕುಎಂದು ಹೇಳಿದರು
ಮೈಮುಲ್ ವಿಸ್ತರಣಾಧಿಕಾರಿ ನಂದಿನಿ 2024-25 ನೇ ಸಾಲಿನ ವಾರ್ಷಿಕ ಮಹಾಸಭೆಯ ಅಯವ್ಯಯ ಮಂಡಿಸಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷೆ ಹೆಚ್.ಎಸ್.ಸರೋಜ, ಗ್ರಾಪಂ ಸದಸ್ಯ ರಾಜೇಗೌಡ, ವಿಎಸ್ಎಸ್ಬಿಎನ್ ಭಾಗ್ಯಮ್ಮ ರಾಜೇಗೌಡ, ಕಾರ್ಯದರ್ಶಿ ಸಣ್ಣಮ್ಮ, ನಿರ್ದೇಶಕರಾದ ಕೆ.ಉಮೇಶ್, ಆರ್.ಹರೀಶ್, ಕುಮಾರ, ಕೆ.ಎ.ರಮೇಶ, ಜಯರಾಮ್, ಶಿವಣ್ಣ,
ಗೋವಿಂದಶೆಟ್ಟಿ, ಪುಟ್ಟಸ್ವಾಮಿ, ಯಶೋದಮ್ಮ, ಮುಖಂಡರಾದ ಉಮೇಶ್, ಧರಣೇಶ್ ಸೇರಿದಂತೆ ಸದಸ್ಯರು ಇದ್ದರು