Tuesday, September 16, 2025
Google search engine

Homeರಾಜ್ಯಸುದ್ದಿಜಾಲಕೆ.ಆರ್.ನಗರ ಮತ್ತು ಸಾಲಿಗ್ರಾಮದಲ್ಲಿ ಜೆಡಿಎಸ್ ಭವಿಷ್ಯ ಪ್ರಬಲ: ಡಾ. ಸಾ.ರಾ. ಧನುಷ್ ವಿಶ್ವಾಸ

ಕೆ.ಆರ್.ನಗರ ಮತ್ತು ಸಾಲಿಗ್ರಾಮದಲ್ಲಿ ಜೆಡಿಎಸ್ ಭವಿಷ್ಯ ಪ್ರಬಲ: ಡಾ. ಸಾ.ರಾ. ಧನುಷ್ ವಿಶ್ವಾಸ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಕೆ.ಆರ್.ನಗರ ಮತ್ತು ಸಾಲಿಗ್ರಾಮ ಅವಳಿ ತಾಲೂಕಿನಲ್ಲಿ ಮುಂಬರುವ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್ ಅತಿ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ರಾಜ್ಯ ಜೆಡಿಎಸ್ ಪಕ್ಷದ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಚಿವ ಸಾ‌.ರಾ‌.ಮಹೇಶ್ ಪುತ್ರ ಖ್ಯಾತ ಮೂಳೆ ತಜ್ಞ ಡಾ.ಸಾ.ರಾ‌.ಧನುಷ್ ತಿಳಿಸಿದರು.

ಪಟ್ಟಣದ ಹೊರವಲಯ ಕಗ್ಗರೆ ಗ್ರಾಮದಲ್ಲಿರುವ ಸಾ.ರಾ.ನಿಧಿ ಗಾರ್ಮೆಂಟ್ಸ್ ನಲ್ಲಿ ತಾಲೂಕಿನ ತಿಪ್ಪೂರು ಗ್ರಾಮ ಪಂಚಾಯತಿಗೆ ಜೆಡಿಎಸ್ ಬೆಂಬಲಿತ ಅಧ್ಯಕ್ಷೆಯಾಗಿ ಕನುಗನಹಳ್ಳಿ ಗ್ರಾಮದ ರಮ್ಯವಿಶ್ವನಾಥ್ ಆಯ್ಕೆಯಾದ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷದ ಪರವಾಗಿ ಅಭಿನಂದಿಸಿ ಮಾತನಾಡಿದರು.

ಮುಂಬರುವ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ 34 ಗ್ರಾಮ ಪಂಚಾಯತಿಗಳ ಪೈಕಿ 25ಕ್ಕೂ ಹೆಚ್ಚು ಗ್ರಾ.ಪಂ.ಗಳಲ್ಲಿ ಜೆಡಿಎಸ್ ಪಕ್ಷದ ಸದಸ್ಯರು ಆಯ್ಕೆಯಾಗಿ ಅಧಿಕಾರ ಹಿಡಿಯಲಾಗುವುದು ಎಂದು ಡಾ.ಸಾ.ರಾ.ಧನುಷ್ ತಿಳಿಸಿದರು.

ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಬಲವರ್ಧನೆಗಾಗಿ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಲಾಗಿದೆ. ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣಾ ಕ್ಷೇತ್ರಗಳು ವಿಂಗಡಣೆಯಾಗಿ ಮೀಸಲಾತಿ ಘೋಷಣೆ ಮಾಡಿದ ನಂತರ ಕ್ಷೇತ್ರದಲ್ಲಿ ಹೆಚ್ಚಾಗಿ ಪಕ್ಷ ಸಂಘಟನೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಇಂದು ನಡೆದ ತಿಪ್ಪೂರು ಗ್ರಾಮ ಪಂಚಾಯತಿ ಅಧ್ಯಕ್ಷರ ಚುನಾವಣೆಯಲ್ಲಿ ನಮ್ಮ‌ ಪಕ್ಷದ ಅಭ್ಯರ್ಥಿ ರಮ್ಯವಿಶ್ವನಾಥ್ ಅವರು ಖಂಡಿತವಾಗಿ ಗೆಲ್ಲಲಿದ್ದಾರೆ ಎಂದು ಜಾದಳ‌ ಬೆಂಬಲಿತ ಸದಸ್ಯರು ಹೇಳಿದ್ದರು ಆದರೂ ಸಹ ಲಾಟರಿ ಮೂಲಕವೇ ಆಯ್ಕೆಯಾಗಿರುವುದು ಸಂತಸ ತಂದಿದೆ ಆದ್ದರಿಂದ ಯಾವುದೇ ನಿರೀಕ್ಷೆ ಮಾಡದೇ ಜನರ ಕೆಲಸ ಮಾಡಿ‌ ಜನಮನ್ನಣೆ ಗಳಿಸಿ ಎಂದು ಶುಭ ಹಾರೈಸಿದರು.

ಯುವ ಜೆಡಿಎಸ್ ಜಿಲ್ಲಾ ಗ್ರಾಮಾಂತರ ಉಪಾಧ್ಯಕ್ಷ ಕಗ್ಗರೆ ಕುಚೇಲ, ಕಸಬಾ ಹೋಬಳಿ ಜಾದಳ ಅಧ್ಯಕ್ಷ ಶಿವಣ್ಣ, ಪಿ.ಎಲ್.ಡಿ.ನಿರ್ಧೆಶಕ ರಮೇಶನಾಯಕ್, ಗ್ರಾ.ಪಂ. ಉಪಾಧ್ಯಕ್ಷೆ ಅನಿತಾಮಂಜು, ಸದಸ್ಯರಾದ ಭಾರತಿಕೃಷ್ಣನಾಯಕ, ಶೋಭಾಕೃಷ್ಣನಾಯಕ, ರತ್ನಮ್ಮ, ನೀಲಯ್ಯ, ಭಾಸ್ಕರ್, ರಾಮಕೃಷ್ಣೇಗೌಡ, ಸತ್ಯನಾರಾಯಣ, ಜೆಡಿಎಸ್ ಮುಖಂಡರಾದ ಸಿ.ವಿ.ಗುಡಿ ಸಾಗರ್, ತಿಪ್ಪೂರು ವೆಂಕಟೇಶ್, ಕನುಗನಹಳ್ಳಿ ಸೋಮಶೇಖರ್, ಮಹದೇವಣ್ಣ, ಸಂದೇಶ್, ನಂದಕುಮಾರ್,ಮಹೇಶ್ ಜಿತೇಂದ್ರ ಕುಮಾರ್, ತಿಪ್ಪೂರು ವಿಷ್ಣು, ಟೈಲರ್ ಶಿವಣ್ಣನಾಯಕ ಅನೇಕರು ಇದ್ದರು.

RELATED ARTICLES
- Advertisment -
Google search engine

Most Popular