Wednesday, September 17, 2025
Google search engine

Homeರಾಜ್ಯಸುದ್ದಿಜಾಲರೈಸ್ತ ಸಮುದಾಯದ ಪ್ರತಿನಿಧಿ ಸಂಘಟನೆಯಿಂದ ಜಾತಿ ಸಮೀಕ್ಷೆಗೆ ಮನವಿ: "ಕ್ರೈಸ್ತ" ಎಂದು ಸ್ಪಷ್ಟ ಉತ್ತರ ನೀಡಿ"

ರೈಸ್ತ ಸಮುದಾಯದ ಪ್ರತಿನಿಧಿ ಸಂಘಟನೆಯಿಂದ ಜಾತಿ ಸಮೀಕ್ಷೆಗೆ ಮನವಿ: “ಕ್ರೈಸ್ತ” ಎಂದು ಸ್ಪಷ್ಟ ಉತ್ತರ ನೀಡಿ”

ಸರ್ಕಾರದ 2011ರ ಜಾತಿವಾರು ಜನಗಣತಿಯ ಪ್ರಕಾರ ರಾಜ್ಯದಲ್ಲಿ ಕ್ರೈಸ್ತ ಸಮುದಾಯದ ಒಟ್ಟು ಜನಸಂಖ್ಯೆ ಕೇವಲ 11.30 ಲಕ್ಷ ಎಂದು ಸರ್ಕಾರದ ದಾಖಲೆಯಲ್ಲಿ ಇರುವುದರಿಂದ ಕ್ರೈಸ್ತ ಸಮುದಾಯಕ್ಕೆ ಪ್ರತಿಯೊಂದು ವಿಷಯದಲ್ಲಿ ಘೋರ ಅನ್ಯಾಯ ಆಗುತ್ತದೆ ಜನಸಂಖ್ಯೆ ಹೆಚ್ಚಿದ್ದಲ್ಲಿ ಪರಿಹಾರ ಸಿಗಲಿದೆ.

ಕ್ರೈಸ್ತ ಸಮುದಾಯದಲ್ಲಿ 57 ಉಪಜಾತಿಗಳು ಇವೆ ಎಂದು ಸರ್ಕಾರ ಗೊಂದಲ ಉಂಟು ಮಾಡುತ್ತಿದೆ. ಕ್ರೈಸ್ತರು ಗೊಂದಲಕ್ಕೆ ಈಡಾಗದೆ ಜಾತಿವಾರು ಸಮೀಕ್ಷೆಯನ್ನು ಗಂಭೀರವಾಗಿ ಪರಿಗಣಿಸಿ ಕ್ರೈಸ್ತರು ಎಂದು ಮಾಹಿತಿ ನೀಡಿದರೆ ರಾಜ್ಯದಲ್ಲಿ ಕ್ರೈಸ್ತ ಸಮುದಾಯದ ಜನಸಂಖ್ಯೆ ಸುಮಾರು 35.ರಿಂದ 40 ಲಕ್ಷ ಎಂದು ಸರ್ಕಾರದ ದಾಖಲೆಗಳಲ್ಲಿ ಸೇರಲಿದೆ.

ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಈ ತಿಂಗಳ 22 ರಿಂದ ಜಾತಿ, ಉಪಜಾತಿವಾರು ರಾಜ್ಯಾದ್ಯಂತ ಆರ್ಥಿಕ.ಸಾಮಾಜಿಕ, ಶೈಕ್ಷಣಿಕ ಹಾಗೂ ಔದ್ಯೋಗಿಕ ಸಮೀಕ್ಷೆಯನ್ನು ನೆಡೆಸಲಿದ್ದು ಸರ್ಕಾರ ಮೀಸಲಾತಿ, ಸವಲತ್ತು ಪ್ರೋತ್ಸಾಹ ನೀಡಲು ಈ ಗಣತಿ ಸಹಕಾರಿಯಾಗಲಿದೆ. ಕ್ರೈಸ್ತ ಸಮುದಾಯವನ್ನು ಒಳಗೊಂಡಂತೆ ಕ್ರೈಸ್ತ 57 ಉಪಜಾತಿಗಳನ್ನು ಕರ್ನಾಟಕದಲ್ಲಿ ನಡೆಯಲಿರುವ ಜಾತಿ ಜನಗಣತಿಯಲ್ಲಿ ಪರಿಗಣಿಸಿದೆ. ಯಾವ ದಾಖಲೆಯನ್ನು ನೋಡಿ ಮಾಡಿದ್ದಾರೆ ಎಂದು ನಾವು ಕೇಳುತ್ತಿದ್ದೇವೆ ಕ್ರೈಸ್ತ ಸಮುದಾಯ ಈ ವಿಷಯದಲ್ಲಿ ಗೊಂದಲಕ್ಕೆ ಒಳಗಾಗಬಾರದು.

ಈ ಜನಗಣತಿ ಎಲ್ಲಾ ಕ್ರೈಸ್ತ ಸಮುದಾಯದವರು ತಮ್ಮ ಉಪ ಜಾತಿ ಗಣನೆಗೆ ತೆಗೆದುಕೊಳ್ಳದೆ ಗಣತಿಯಲ್ಲಿ ಕೇಳಲಿರುವ 60 ಪ್ರಶ್ನೆಗಳಿಗೆ ನಿಖರವಾದ ಎಂದರೆ ಕ್ರೈಸ್ತರು ಎಂದು ಮಾತ್ರ ಮಾಹಿತಿ ನೀಡಬೇಕೆಂದು ಕ್ರೈಸ್ತ ಸಮುದಾಯವನ್ನು ಸರ್ಕಾರದ ಮಟ್ಟದಲ್ಲಿ ಪ್ರತಿನಿಧಿಸುತ್ತಿರುವ ಕರ್ನಾಟಕ ಕ್ರೈಸ್ತರ ಸಾಮಾಜಿಕ ಕ್ಷೇಮಾಭಿವೃದ್ಧಿ ಸಂಘಟನೆಯವರು ಮನವಿ ಮಾಡಿದರು

RELATED ARTICLES
- Advertisment -
Google search engine

Most Popular