ಧರ್ಮಸ್ಥಳ: ಇಲ್ಲಿ ತಲೆಬುರುಡೆ ಕೇಸ್ ಸಂಬಂಧಿಸಿದಂತೆ ಬಂಗ್ಲೆಗುಡ್ಡ ಕಾಡಿನಲ್ಲಿ ಎಸ್ಐಟಿಯಿಂದ ಶೋಧ ಕಾರ್ಯಾಚರಣೆ ಮಾಡಲಾಗುತ್ತಿದೆ. ಈ ವೇಳೆಯಲ್ಲಿ ಬಂಗ್ಲೆಗುಡ್ಡ ಕಾಡಿನಲ್ಲಿ ಮತ್ತೆರಡು ಕಳೇಬರಹ ಪತ್ತೆಯಾಗಿದ್ದಾವೆ.
ಧರ್ಮಸ್ಥಳದ ಬಂಗ್ಲೆಗುಡ್ಡ ಕಾಡಿನಲ್ಲಿ ತಲೆಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿಯಿಂದ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ ಮತ್ತೆರಡು ಅಸ್ಥಿಪಂಜರಗಳು ಪತ್ತೆಯಾಗಿದ್ದಾವೆ. ಮನುಷ್ಯನ ಬುರುಡೆ, ಅಸ್ಥಿಪಂಜರದ ಅವಶೇಷ ಪತ್ತೆಯಾಗಿವೆ.
ಈ ಹಿನ್ನಲೆಯಲ್ಲಿ ದೊರೆತಿರುವಂತ ಮೂಳೆಗಳನ್ನು ಪರಿಶೀಲನೆಯನ್ನು ಎಫ್ ಎಸ್ ಎಲ್ ತಂಡ ನಡೆಸಲಾಗುತ್ತಿದೆ. ಸ್ಥಳದಲ್ಲಿ ಎಸ್ ಐ ಟಿಯಿಂದ ಮಹಜರು ಮಾಡಲಾಗುತ್ತಿದೆ.