Friday, September 19, 2025
Google search engine

Homeಸ್ಥಳೀಯಉಪಜಾತಿ ಮುಂದಿನ ಕ್ರೈಸ್ತ ಪದ ತೆಗೆಯಿರಿ: ವಿವಿಧ ಜಾತಿಗಳ ಮುಖಂಡರ ಸಭೆಯಲ್ಲಿ ನಿರ್ಣಯ

ಉಪಜಾತಿ ಮುಂದಿನ ಕ್ರೈಸ್ತ ಪದ ತೆಗೆಯಿರಿ: ವಿವಿಧ ಜಾತಿಗಳ ಮುಖಂಡರ ಸಭೆಯಲ್ಲಿ ನಿರ್ಣಯ

ವರದಿ: ಸ್ಟೀಫನ್ ಜೇಮ್ಸ್

ಬೆಳಗಾವಿ: ಸಮುದಾಯಗಳ ಭಾವನೆಗೆ ಬೆಲೆ ಕೊಟ್ಟು ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೈಗೊಳ್ಳಬೇಕು. ಇಲ್ಲದಿದ್ದರೆ ಸಮೀಕ್ಷೆಯನ್ನೇ ಬಹಿಷ್ಕಾರ ಮಾಡಲಾಗುವುದು ಎಂದು ವಿವಿಧ 46 ಜಾತಿಗಳ ಮುಖಂಡರ ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು.
ಈ ಬಗ್ಗೆ ನಿರ್ಣಯದ ಪ್ರತಿಯನ್ನು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರಿಗೆ ಸಲ್ಲಿಸಲಾಯಿತು. ಮನವಿ ಪಡೆದ ಜಿಲ್ಲಾಧಿಕಾರಿ ಅದನ್ನು ರಾಜ್ಯಪಾಲರ ಕಚೇರಿಗೆ ತಲುಪಿಸುವುದಾಗಿ ಹೇಳಿದರು.

ಹಿಂದೂ ಜನಜಾಗೃತಿ ವೇದಿಕೆ ನೇತೃತ್ವದಲ್ಲಿ ಇಲ್ಲಿನ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಲಿಂಗಾಯತ, ಬ್ರಾಹ್ಮಣ, ಕುರುಬ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಒಕ್ಕಲಿಗ, ರೆಡ್ಡಿ, ಅಂಬಿಗ, ಹೂಗಾರ ಸೇರಿದಂತೆ ಒಟ್ಟು 46 ಜಾತಿಗಳ ಮುಖಂಡರ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಿ ನಿರ್ಧರಿಸಲಾಯಿತು.
ಸರ್ಕಾರ ನಡೆಸಲು ಉದ್ದೇಶಿಸುರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಎಲ್ಲ ಸಮುದಾಯಗಳ ಉಪಜಾತಿಯ ಹಿಂದೆ ಕ್ರೈಸ್ತ ಎಂಬ ಧರ್ಮದ ಪದ ಸೇರಿಸಲಾಗಿದೆ. ಇದು ರಾಜ್ಯ ಸರ್ಕಾರ ನಡೆಸಿದ ದೊಡ್ಡ ಹುನ್ನಾರ. ಈ ದೇಶದ ಉಪಜಾತಿಗಳಿಗೂ ಹೊರಗಡೆಯಿಂದ ಬಂದ ಕ್ರೈಸ್ತ ಧರ್ಮೀಯರಿಗೂ ಏನು ಸಂಬಂಧ? ಸಾವಿರಾರು ವರ್ಷಗಳಿಂದ ಗುರುತಿಸಿಕೊಂಡು ಬಂದ ಜಾತಿಗಳನ್ನೂ ಸುಳ್ಳು ಮಾಡಿ ಕ್ರೈಸ್ತರಿಗೆ ಸಂಬಂಧ ಎಂಬಂತೆ ಬಿಂಬಿಸಲಾಗುತ್ತಿದೆ ಎಂದೂ ಕೆಲ ಮುಖಂಡರು ಆಕ್ರೋಶ ಹೊರಹಾಕಿದರು.

ಭಾರತೀಯ ಸನಾತನ ಹಿಂದೂ ಧರ್ಮದಲ್ಲಿ ವಿವಿಧ ಸಮುದಾಯಗಲ್ಲಿ ಉಪ ಜಾತಿಗಳ ಧಾರ್ಮಿಕ ಆಚರಣೆಗಳು ಸಾವಿರಾರೂ ವರ್ಷಗಳ ಇತಿಹಾಸ ಹೊಂದಿವೆ. ನಮ್ಮಲ್ಲಿ ಜಾತಿಗಳು ಬೇರೆ
ಬೇರೆಯಾಗಿರಬಹುದು. ಆದರೆ, ಧಾರ್ಮಿಕ ಆಚರಣೆ, ವಿಚಾರಣೆಗಳ ಮೂಲ ಹಿಂದೂ ಧರ್ಮದ ಸಂಸ್ಕೃತಿ. ಏಕಾಏಕಿ ಹಿಂದುಳಿದ ವರ್ಗಗಳ ಆಯೋಗವು ಎಲ್ಲ ಸಮುದಾಯ ಉಪಜಾತಿಗಳಲ್ಲಿ ಕ್ರೈಸ್ತ ಎಂಬ ಹೊಸ ಉಪಜಾತಿ ಸೃಷ್ಟಿಸಿ ಹೊಸ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಈ ವಿಷಯದಲ್ಲಿ ಪಕ್ಷಾತೀತ, ಜಾತ್ಯಾತೀತವಾಗಿ ಹೋರಾಟ ಮಾಡಲು ನಾವೆಲ್ಲ ಬದ್ಧರಾಗಿದ್ದೇವೆ.
ಆಯೋಗ ತನ್ನ ನಿರ್ಧಾರ ಬದಲಿಸಲಿದ್ದಾರೆ ಕಾನೂನು ಹೋರಾಟದ ಜತೆಗೆ ಸಮೀಕ್ಷೆ ಬಹಿಷ್ಕರ ಹಾಕಲಾಗುವುದು ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.


ವಿಧಾನ ಪರಿಷತ್‌ನ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಬಿಜೆಪಿ ಮುಖಂಡ ಎಂ.ಬಿ.ಝಿರಲೆ, ಮಾಜಿ ಶಾಸಕ ಅನಿಲ ಬೆನಕೆ ಮಾತನಾಡಿ ಒಮ್ಮತದ ನಿರ್ಣಯ ಕೈಗೊಂಡರು. ಮೇಯರ್ ಮಂಗೇಶ ಪವಾರ್, ಉಪಮೇಯರ್ ವಾಣಿ ಜೋಶಿ, ವಿವಿಧ ಸಮುದಾಯಗಳ ಮುಖಂಡರಾದ ವಿನೋದ ದೊಡ್ಡಣ್ಣವರ, ಈರಣ್ಣ ದಯಾನಂದ, ಸಂದೀಪ ಜೀರಗ್ನಾಳ, ರೋಹನ್ ಜವಳಿ, ಹಣಮಂತ ಕೊಂಗಾಲಿ, ಆರ್.ಎಸ್.ಮುತಾಲಿಕ್, ಮುರೇಂದ್ರಗೌಡ ಪಾಟೀಲ ಸೇರಿದಂತೆ ವೇದಿಕೆ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular