ವರದಿ: ರವಿಚಂದ್ರ ಬೂದಿತಿಟ್ಟು
ಪಿರಿಯಾಪಟ್ಟಣ: ಪಿರಿಯಾಪಟ್ಟಣ 66/11 KV ಪಿರಿಯಾಪಟ್ಟಣ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 20 ರಂದು ಎರಡನೇ ತ್ರೈಮಾಸ ನಿರ್ವಹಣೆ ಇರುವುದರಿಂದ ಪಿರಿಯಾಪಟ್ಟಣ ವಿದ್ಯುತ್ ಉಪ ಕೇಂದ್ರಗಳಿಂದ ಸರಬರಾಜುಗೋಳ್ಳುವ ಮುತ್ತೂರು, ಮಾಲಂಗಿ, ಚೌತಿ, ಕೀರನಹಳ್ಳಿ, ಪಂಚವಳ್ಳಿ, ಚಿಟ್ಟೆನಹಳ್ಳಿ, ಕಂಪ್ಲಾಪುರಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಮತ್ತು ಪಿರಿಯಾಪಟ್ಟಣ ಟೌನ್ ವ್ಯಾಪ್ತಿಗೆ ಒಳಪಡುವ ಎಲ್ಲಾ ಗ್ರಾಮಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 6 ಗಂಟೆಯ ವರೆಗೆ ವಿದ್ಯುತ್ ಕಡಿತಗೊಳ್ಳಲಿದೆ ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಪಿರಿಯಾಪಟ್ಟಣ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗುರು ಬಸವರಾಜಸ್ವಾಮಿ ತಿಳಿಸಿದ್ದಾರ.