Saturday, April 19, 2025
Google search engine

Homeರಾಜ್ಯಜ್ಞಾನದ ಎಲ್ಲಾ ಮೂಲಗಳಿಗೆ ಮುಕ್ತರಾಗಿ: ಕವಿ ಹೇಮಚಂದ್ರ ದಾಳಗೌಡನಹಳ್ಳಿ ಸಲಹೆ

ಜ್ಞಾನದ ಎಲ್ಲಾ ಮೂಲಗಳಿಗೆ ಮುಕ್ತರಾಗಿ: ಕವಿ ಹೇಮಚಂದ್ರ ದಾಳಗೌಡನಹಳ್ಳಿ ಸಲಹೆ

ಬೆಟ್ಟದಪುರ: ಆಧುನಿಕ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಪ್ರತಿಯೊಂದು ವಿಷಯದಲ್ಲಿಯೂ ಜಾಗೃತರಾಗುವ ಮೂಲಕ ಜ್ಞಾನದ ಎಲ್ಲಾ ಮೂಲಗಳಿಗೆ ಮುಕ್ತರಾಗಿರಬೇಕು ಎಂದು ಕವಿ ಹೇಮಚಂದ್ರ ದಾಳಗೌಡನಹಳ್ಳಿ ಹೇಳಿದರು.
ಬೆಟ್ಟದಪುರ ಸಮೀಪದ ಕಿತ್ತೂರ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆಗಳ, ಸ್ಕೌಟ್ ಮತ್ತು ಗೈಡ್ಸ್, ಇಕೋ ಕ್ಲಬ್ ಉದ್ಟಾಟನೆ ಹಾಗೂ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಧುನಿಕ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಚಟುವಟಿಕೆಗಳೊಂದಿಗೆ ಇಂದಿನಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಬೇಕು. ನಿರಂತರ ಅಭ್ಯಾಸಕ್ಕೆ ಖಂಡಿತವಾಗಿ ಯಶಸ್ಸು ಸಿಗಲಿದೆ. ಹಾಗಾಗಿ ಏಕಾಗ್ರತೆಯಿಂದ ಅಭ್ಯಾಸ ಮಾಡುವುದನ್ನು ರೂಢಿಮಾಡಿಕೊಳ್ಳಬೇಕು. ಪ್ರಸ್ತುತ ದಿನಗಳಲ್ಲಿ ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಉಳಿಸಿ ಬೆಳೆಸಬೇಕಾದ ಅನಿವಾರ್ಯತೆಯನ್ನು ಅರಿತು, ಉಳಿವಿಗಾಗಿ ಪ್ರತಿಯೊಬ್ಬರು ಶ್ರಮವಹಿಸಬೇಕು ಎಂದರು.
ವಿದ್ಯಾರ್ಥಿಗಳು ಕೇವಲ ಅಂಕಗಳಿಕೆಗೆ ಮಾತ್ರ ಸೀಮಿತವಾಗದೆ ಶಿಸ್ತು, ಸಂಸ್ಕಾರ ರೂಡಿಸಿಕೊಂಡು ಮಾನವೀಯತೆಯ ಬದುಕನ್ನು ರೂಪಿಸಿಕೊಳ್ಳಬೇಕು. ಯುವಜನಾಂಗ ಮತ್ತು ವಿದ್ಯಾರ್ಥಿಗಳು ಕಂಪ್ಯೂಟರ್, ದೃಶ್ಯ ಮಾಧ್ಯಮಗಳನ್ನು ಅಗತ್ಯಕ್ಕೆ ತಕ್ಕಂತೆ ಮಾತ್ರ ಸದುಪಯೋಗ ಪಡಿಸಿಕೊಳ್ಳಬೇಕು. ಅವುಗಳಿಗೆ ದಾಸರಾಗದೆ ಹಿಡಿತದಲ್ಲಿಟ್ಟುಕೊಂಡು ಅಗತ್ಯಬಿದ್ದಾಗ ಉಪಯೋಗಿಸಿಕೊಳ್ಳಬೇಕು. ಸಮಯ ಎಂಬುದು ಬಹಳ ಅಮೂಲ್ಯವಾದದ್ದು. ಒಮ್ಮೆ ಅದು ಕಳೆದು ಹೋದರೆ ಮತ್ತೆಂದೂ ಅದು ಮರಳಿಬಾರದು. ಹಾಗಾಗಿ ವ್ಯರ್ಥವಾಗಿ ಕಾಲ ಕಳೆಯದೆ ಪ್ರತಿಯೊಬ್ಬರೂ ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳು ಸಮಯವನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜು ಆಡಳಿತ ಮಂಡಳಿವತಿಯಿAದ ಕವಿ ಹೇಮಚಂದ್ರ ದಾಳಗೌಡನಹಳ್ಳಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ವೇಳೆ ಕಾಲೇಜಿನ ವಿದ್ಯಾರ್ಥಿಗಳು ಚಲನಚಿತ್ರ ಗೀತೆಗಳಿಗೆ ನೃತ್ಯ ಹಾಗೂ ವಿವಿಧ ಏಕಪಾತ್ರ ಅಭಿನಯ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು. ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಮಹದೇವಿ, ಸವಿತಾ, ಪ್ರಾಂಶುಪಾಲ ರವಿಕುಮಾರ್, ಉಪನ್ಯಾಸಕರಾದ ಜಯರಾಮ್, ಮಂಜುನಾಥ್, ಮಲ್ಲೇಶ್, ಮಹೇಶ್, ಸತೀಶ್, ರವಿ, ನಂಜುಂಡೇಗೌಡ, ಆರತಿ, ಯಶ್ವಂತ್, ಮಹದೇವ, ಪ್ರೌಢಶಾಲೆ ಮುಖ್ಯಶಿಕ್ಷಕ ಹರೀಶ್ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

RELATED ARTICLES
- Advertisment -
Google search engine

Most Popular