Monday, September 22, 2025
Google search engine

Homeಸ್ಥಳೀಯಸಾಂಸ್ಕೃತಿಕ ರಾಯಭಾರಿಯಂತೆ ಕಂಡು ಬಂದ ಸಾಹಿತಿ ಬಾನು ಮುಷ್ತಾಕ್..!

ಸಾಂಸ್ಕೃತಿಕ ರಾಯಭಾರಿಯಂತೆ ಕಂಡು ಬಂದ ಸಾಹಿತಿ ಬಾನು ಮುಷ್ತಾಕ್..!

ಮೈಸೂರು : ಬಿಜೆಪಿ ನಾಯಕರ ಹೇಳಿಕೆಗೆ ಸೆಡ್ಡು ಹೊಡೆದ ಲೇಖಕಿ, ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರು ಇಂದು ಮೈಸೂರು ಸಾಂಸ್ಕೃತಿಕ ರಾಯಭಾರಿಯಂತೆ ಕಂಡು ಬಂದರು.

ಹಿಂದೂ ಸಂಪ್ರದಾಯದ ನಾರಿಯಂತೆ ಆಗಮಿಸಿದ ಅವರು ಹಳದಿ ಬಣ್ಣದ ಹಸಿರಿನ ಜೊತೆ ಬಂಗಾರದ ಬಣ್ಣದ ಅಂಚಿರುವ ಸೀರೆ ತೊಟ್ಟು ಹಸಿರು ರವಿಕೆ ಧರಿಸಿ, ತಲೆಯಲ್ಲಿ ಮೈಸೂರು ಮಲ್ಲಿಗೆ ಹೂವನ್ನು ಮುಡಿದು ಚಾಮುಂಡಿಬೆಟ್ಟಕ್ಕೆ ಮೈಸೂರು ದಸರಾ ಮಹೋತ್ಸವ-2025ನ್ನು ಉದ್ಘಾಟಿಸಲು ಆಗಮಿಸಿದರು.

ಮೈಸೂರು ದಸರಾವನ್ನು ಅನ್ಯಧರ್ಮೀಯರು ಉದ್ಘಾಟಿಸಬಾರದು ಎನ್ನುವುದಕ್ಕಿಂತ ಅವರು ಕನ್ನಡ ವೇದಿಕೆಯೊಂದರಲ್ಲಿ ತಾಯಿ ಭುವನೇಶ್ವರಿಯನ್ನು ಅರಿಶಿನ ಕುಂಕುಮ ನೀಡಿ ಕುಳ್ಳಿಸಿದ್ದಾರೆ ಎಂದಿರುವ ವಿಡಿಯೋವೊಂದು ವೈರಲ್ ಆದ ಬೆನ್ನಲ್ಲೇ ಅದು ಅನೇಕರ ಭಾವನೆಗೆ ಪೆಟ್ಟು ನೀಡಿತ್ತು. ಅದರಿಂದ ದಸರಾ ಉದ್ಘಾಟನೆಗೆ ಅವರನ್ನು ವಿರೋಧಿಸಿದ್ದರು. ಸೋಮವಾರ ಅದೆಲ್ಲವನ್ನು ಮೆಟ್ಟಿನಿಂತು ಬಾನು ಮುಷ್ತಾಕ್ ಆಗಮಿಸಿರುವುದು ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿತ್ತು. ಬಾನು ಮುಷ್ತಾಕ್ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಹೆಜ್ಜೆಹಾಕಿದರು.


ಬಾನು ಮುಷ್ತಾಕ್ ಅವರಿಗೆ ಕಲಾ ತಂಡಗಳು ಅದ್ಧೂರಿ ಸ್ವಾಗತಕೋರಿದವು. ಚಾಮುಂಡೇಶ್ವರಿ ದೇವಸ್ಥಾನದ ಮುಂಬಾಗಿಲಿನಲ್ಲಿ ಗಣೇಶನಿಗೆ ನಮಿಸಿದ ಅವರು ಮಂಗಳಾರತಿಯನ್ನು ಪಡೆದರು. ಇದೇ ವೇಳೆ ಮುಖ್ಯಮಂತ್ರಿಗಳಿಗೆ ಹೂವಿನ ಹಾರ ಹಾಕಲು ಬಂದಾಗ ಸಿದ್ದರಾಮಯ್ಯನವರು ಹಾರವನ್ನು ಬಾನು ಮುಷ್ತಾಕ್ ಅವರಿಗೆ ಹಾಕಿ ಎಂದಿದ್ದು ವಿಶೇಷವಾಗಿತ್ತು. ಹಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹಾಕಿದ ದೇವಸ್ಥಾನದ ಅರ್ಚಕರು ಹೂವನ್ನು ಬಾನು ಅವರ ಕೈಗೆ ನೀಡಿದರು.
ಚಾಮುಂಡೇಶ್ವರಿಗೆ ಕೈಮುಗಿದು ಮಂಗಳಾರತಿ ತೆಗೆದುಕೊಂಡು ಬಾವುಕರಾದ ಬಾನು ಮುಷ್ತಾಕ್ ಅವರು ಬಿಜೆಪಿಗರು ಕೇಳಿದ ಪ್ರಶ್ನೆಗಳಿಗೆ ಅವರ ನಡೆಯ ಮೂಲಕವೇ ಉತ್ತರ ನೀಡಿದಂತಿತ್ತು.

ನಾಡಹಬ್ಬ ದಸರಾ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳೇ ಆಗಮಿಸಿದ್ದು, ಭಕ್ತರಿಲ್ಲದೆ ಚಾಮುಂಡಿ ಬೆಟ್ಟಬಣಗುಡುತ್ತಿತ್ತು. ದಸರಾ ಉತ್ಸವ ಉದ್ಘಾಟನೆ ವೇದಿಕೆ ಮುಂಭಾಗವೂ ಖಾಲಿ ಖಾಲಿಯಾಗಿತ್ತು. ಆಸನಗಳನ್ನ ತುಂಬಿಸಲು ಜಿಲ್ಲಾಡಳಿತ ಹರಸಾಹಸ ಪಟ್ಟಂತೆ ಕಾಣಿಸುತ್ತಿತ್ತು. ದಸರಾ ಉದ್ಘಾಟನೆ ಕಾರ್ಯಕ್ರಮ ಸೀಟು ತುಂಬಿಸಲು ಕಾಲೇಜು ವಿದ್ಯಾರ್ಥಿನಿಯರನ್ನು ಜಿಲ್ಲಾಡಳಿತ ಕರೆತಂದಿತ್ತು. ಮೈಸೂರಿನ ಮಹಾರಾಣಿ ಕಾಲೇಜು ವಿದ್ಯಾರ್ಥಿನಿಯರು, ಒಂಟಿಕೊಪ್ಪಲು ಸರ್ಕಾರಿ ಕಾಲೇಜು ವಿದ್ಯಾರ್ಥಿನಿಯರು, ಹಾಸ್ಟೆಲ್ ವಿದ್ಯಾರ್ಥಿಗಳು ಆಗಮಿಸಿದ್ದರು. ಪ್ರತಿಯೊಬ್ಬರಿಗೂ ಪಾಸ್ ನೀಡಿ ಆಯಾ ಕಾಲೇಜಿನ ಸಿಬ್ಬಂದಿ ವರ್ಗದ ನೇತೃತ್ವದಲ್ಲೇ ವಿದ್ಯಾರ್ಥಿಗಳನ್ನು ಸ್ಥಳದಲ್ಲಿ ಸೇರಿಸಲಾಗಿತ್ತು.

ಬೆಳಗ್ಗೆ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳಿಗೆ ಪಾಸ್ ನೀಡಿ ನೇರ ಉದ್ಘಾಟನಾ ಸ್ಥಳಕ್ಕೆ ಸಿಬ್ಬಂದಿಗಳು ಕರೆತಂದಿದ್ದರು. ಸಾರ್ವಜನಿಕರಿಗೆ ಅವಕಾಶ ಇಲ್ಲದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಕರೆತರಲಾಗಿತ್ತು. ಶಿಕ್ಷಕರು ಸರ್ಕಾರಿ ಬಸ್ ಗಳ ಮೂಲಕ ವಿದ್ಯಾರ್ಥಿಗಳ ಕರೆತಂದಿದ್ದರು.

RELATED ARTICLES
- Advertisment -
Google search engine

Most Popular