ಮೈಸೂರು : ವಿಶ್ವಪ್ರಸಿದ್ಧ ದಸರಾ ಮಹೋತ್ಸವ ಉದ್ಘಾಟನೆಯಾಗಿದೆ. ಸಾಹಿತಿ ಬಾನು ಮುಸ್ತಾಕ್ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ನೆರವೇರಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ, ಉಸ್ತುವಾರಿ ಸಚಿವ ಮಹದೇವಪ್ಪ ಜತೆಗೂಡಿ ಬಾನು ಮುಸ್ತಾಕ್ ನಾಡ ದೇವಿಗೆ ಮಂಗಳಾರತಿ ನೆರವೇರಿಸಿ ದಸರಾಗೆ ವಿದ್ಯುಕ್ತ ಚಾಲನೆ ನೀಡಿ ದ್ದಾರೆ.
ದಸರಾ ಉದ್ಘಾಟನೆ ಮಾಡಿದ ಬಳಿಕ ಬಾನು ಮುಸ್ತಾಕ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.ಎಷ್ಟೇ ಅಡಕು ತೊಡಕುಗಳಿದ್ರೂ ಮಧ್ಯೆ ಚಾಮುಂಡಿ ನನ್ನನ್ನ ಕರೆಸಿಕೊಂಡಿದ್ದಾಳೆ. ದೇವಿಯ ದರ್ಶನ ಪಡೆದಿದ್ದು ಖುಷಿ ತಂದಿದೆ ಎಂದು ಹೇಳಿದರು.ನನಗೆ ಬೂಕರ್ ಪ್ರಶಸ್ತಿ ಬಂದಾಗ ನನ್ನ ಗೆಳತಿ ಚಾಮುಂಡಿ ಬೆಟ್ಟಕ್ಕೆ ಕರೆದೊಯ್ಯುವುದಾಗಿ ಹರಕೆ ಹೊತ್ತಿದ್ದೆ ಎಂದು ಹೇಳಿದ್ದರು.
ಆದರೀಗ ದಸರಾ ಉದ್ಘಾಟನೆಗೆ ನನ್ನನ್ನು ಆಹ್ವಾನಿಸಿದ್ದು ನನಗೆ ಸಿಕ್ಕಿದ ಅತ್ಯುನ್ನತ ಗೌರವವಾಗಿದೆ ಎಂದು ಹೇಳಿದರು.
ಮೈಸೂರಿನ ಅರಸರು ಮುಸ್ಲಿಮರ ಮೇಲೆ ನಂಬಿಕೆ ಇಟ್ಟುಕೊಂಡಿದ್ದರು.ಅವರ ಅಂಗರಕ್ಷಕರನ್ನಾಗಿ ಮುಸ್ಲಿಮರನ್ನು ನೇಮಕ ಮಾಡಿಕೊಂಡಿದ್ದುದೇ ಇದಕ್ಕೆ ನಿದರ್ಶನ. ನನ್ನ ಮಾವ ಕೂಡ ಅಂಗರಕ್ಷಕ ರಾಗಿದ್ದರು ಎಂದು ತಿಳಿಸಿದರು.
ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟ.ಈ ದಸರಾ ಹಬ್ಬ ಮೈಸೂರು, ರಾಜ್ಯ, ದೇಶಕ್ಕೆ ಸೀಮಿತವಾಗದೇ ಇಡೀ ವಿಶ್ವಕ್ಕೆ ವ್ಯಾಪಿಸಿ ಉತ್ತಮ ಸಂದೇಶ ರವಾನಿಸಲಿ ಎಂದು ಬಾನು ಮುಷ್ತಾಕ್ ಹೇಳಿದರು.