Monday, September 22, 2025
Google search engine

Homeಸ್ಥಳೀಯಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಭವ್ಯವಾಗಿ ಉದ್ಘಾಟನೆಗೊಂಡ ವಿಶ್ವವಿಖ್ಯಾತ ದಸರಾ ಮಹೋತ್ಸವ

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಭವ್ಯವಾಗಿ ಉದ್ಘಾಟನೆಗೊಂಡ ವಿಶ್ವವಿಖ್ಯಾತ ದಸರಾ ಮಹೋತ್ಸವ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಇಂದು ಪವಿತ್ರ ಚಾಮುಂಡಿ ಬೆಟ್ಟದಲ್ಲಿ ಭವ್ಯವಾಗಿ ಚಾಲನೆ ದೊರೆಯಿತು. ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಪಸ್ಥಿತರಿದ್ದು, ದಸರಾ ಹಬ್ಬದ ಮಹತ್ವವನ್ನು ಬಿಂಬಿಸುವಂತೆ ಭಾಷಣ ನೆರವೇರಿಸಿದರು.

ಚಾಮುಂಡಿ ಬೆಟ್ಟದಲ್ಲಿ ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ ಉದ್ಘಾಟನೆ ಕಾರ್ಯಕ್ರಮದಲ್ಲಿ ಜನಪ್ರಿಯ ಸಮಾಜ ಕಲ್ಯಾಣ ಸಚಿವರಾದ ಎಚ್. ಸಿ ಮಹದೇವಪ್ಪ ಅವರು, ಕಾನೂನು ಸಂಸದೀಯ ವ್ಯವಹಾರಗಳ ಮತ್ತು ಶಾಸನ ರಚನೆ ಪ್ರವಾಸೋದ್ಯಮ ಇಲಾಖೆ ಸಚಿವರಾದ ಎಚ್. ಕೆ ಪಾಟೀಲ್ ಅವರು, ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ. ಎಚ್ ಮುನಿಯಪ್ಪ ಅವರು, ಪಶುಸಂಗೋಪನೆ ಮತ್ತು ರೇಷ್ಮೆ ಇಲಾಖೆ ಸಚಿವರಾದ ಕೆ. ವೆಂಕಟೇಶ್ ಅವರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ ತಂಗಡಗಿ ಶಿವರಾಜ್ ಸಂಗಪ್ಪ ಅವರೊಂದಿಗೆ ಪಾಲ್ಗೊಂಡು. ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಉದ್ಘಾಟನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಶಾಸಕರಾದ ಜಿ. ಟಿ ದೇವೇಗೌಡ ರವರು, ತನ್ವಿರ್ ಸೇಠ್ ರವರು, ಅನಿಲ್ ಚಿಕ್ಕಮಾದು ರವರು, ಹರೀಶ್ ಗೌಡ ರವರು, ಶಾಸಕ ದರ್ಶನ್ ಧೃವನಾರಾಣ್ ರವರು ಡಿ. ರವಿಶಂಕರ್ ರವರು, ಎ. ಆರ್ ಕೃಷ್ಣಮೂರ್ತಿ ರವರು, ರಮೇಶ್ ಬಂಡಿ ಸಿದ್ದೇಗೌಡ ರವರು, ಮಂಜುನಾಥ್ ರವರು, ಶ್ರೀವತ್ಸ ರವರು, MLC ತಿಮ್ಮಯ್ಯ ರವರು, ಶಿವಕುಮಾರ್ ರವರು, ಮಂಜೇಗೌಡ ರವರು, ಗ್ಯಾರಂಟಿ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷರಾದ ಪುಷ್ಪ ಅಮರ್ನಾಥ್ ರವರು, ಕಾಡಾ ಅಧ್ಯಕ್ಷರಾದ ಮರಿಸ್ವಾಮಿ ರವರು, ಜಿಲ್ಲಾಧಿಕಾರಿಗಗಳು ಸೇರಿದಂತೆ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular