ವರದಿ: ಸ್ಟೀಫನ್ ಜೇಮ್ಸ್
ಧಾರವಾಡ: ಮಾನವೀಯತೆ ಮೆರೆದರು ಹೃದಯವಂತ ಪೋಲಿಸ್ ಅಧಿಕಾರಿ – ಅವರೆ ಶ್ರೀ ಶಿವಾಜಿ ಎಚ್. ಸಾಳುಂಕೆ ASI ವಿಧ್ಯಾಗಿರಿ ಪೋಲಿಸ್ ಸ್ಟೇಷನ್ ಧಾರವಾಡ. 14 ರಂದು ರವಿವಾರ 2025 UPSC – NDA II ಸ್ಪರ್ಧಾತ್ಮಕ ಪರೀಕ್ಷೆ ಹಮ್ಮಿಕೊಂಡ ಸಂಧರ್ಭದಲ್ಲಿ JSS ಸಮುಹ ಸಂಸ್ಥೆಯ ಪರೀಕ್ಷಾ ಕೇಂದ್ರದಲ್ಲಿ ಆವರಣದಲ್ಲಿ ನಡೆದ ವಿಚಾರ.
ಪರ ಊರಿನ ವಿಧ್ಯಾರ್ಥಿಯೊಬ್ಬಳು ಆಟೊದಲ್ಲಿ ಬಂದು ಪರೀಕ್ಷಾ ಕೇಂದ್ರಕ್ಕೆ ಇಳಿಯುವಳು , ಆಟೊ ಬಾಡಿಗೆ ನೀಡಲು ಅವಳ ಬಳಿ ದುಡ್ಡಿರಲಿಲ್ಲ ಆಟೊ ಡ್ರೈವರ ದುಡ್ಡು ನೀಡದೆ ಬಿಡ್ತಿಲ್ಲ. ಅಷ್ಟರಲ್ಲಿ (ACTOR SANTHOSH WIFE) ಆಟೊದವನಿಗೆ ವಿಚಾರಿಸಿ ಆತನಿಗೆ ದುಡ್ಡು ಕೊಟ್ಟು ಕಳಿಸಿದರು, ನಂತರ ಆಕೆಯ ಬಳಿ ಪರಿಕ್ಷೆ ಬರೆಯಲು ಪ್ರವೇಶ ಪತ್ರಿಕೆ, ಪೆನ್ನು ಏನೆನು ಕೂಡ ಇರಲಿಲ್ಲ ಕಾರಣ ತನ್ನ ಬ್ಯಾಗನ್ನು ತನ್ನ ಗೆಳತಿಯ ಕೈಯಲ್ಲಿ ಕೊಟ್ಟು ಪೋಟೋ ತೆಗೆಸಲು ತೆರಳಿದ್ದಳು.
ಅವಳು ಮರಳಿ ಬರುವಷ್ಟರಲ್ಲಿ ಅವಳ ಗೆಳತಿ ಬ್ಯಾಗ ಸಮೇತ ಕಾಣಿಸಲೆ ಇಲ್ಲ. ಅವಳು ಬಂದಿದ್ದು ತಡವಾಯಿತು ಪರೀಕ್ಷೆಗೆ ಸಮಯವಾಗಿತ್ತು. ವಿದ್ಯಾರ್ಥಿನಿ ಅಳಲು ಶುರು ಮಾಡಿದಳು. ಅಷ್ಟರಲ್ಲಿ ಪರೀಕ್ಷಾ ಕೇಂದ್ರಕ್ಕೆ ಕರ್ತವ್ಯ ನಿರತರಾಗಿದ್ದ ಶ್ರೀ ಶಿವಾಜಿ ಎಚ್ ಸಾಳುಂಕೆ ವಿದ್ಯಾಗಿರಿ ಪೋಲಿಸ್ ಸ್ಟೇಷನ್ ಅಧಿಕಾರಿ ಧಾವಿಸಿ ಬಂದು ವಿಧ್ಯಾರ್ಥಿನಿಗೆ ಸಮಾಧಾನ ಮಾಡಿ ಸಂಯಮದಿಂದ ವಿಚಾರವನ್ನು ಅರಿತು ಪರೀಕ್ಷಾ ಕೇಂದ್ರದ ಎಲ್ಲಾ ಕೊಠಡಿಗಳಲ್ಲಿ ಅವಳ ಗೆಳತಿಯನ್ನು ಅವಳ ಬ್ಯಾಗನ್ನು ಹುಡಕಲು ಶುರು ಮಾಡಿದರು ಇತ್ತ ವಿಧ್ಯಾರ್ಥಿನಿ ಗಾಬರಿ ಗೊಂಡು ಪರಿಕ್ಷೆ ಬರೆಯುವುದು ತಪ್ಪುವ ಕಾರಣ ತಿಳಿದು ಅಳಲು ಶುರು ಮಾಡಿದಳು.
ಅಧಿಕಾರಿ ಶ್ರೀ ಸಾಳುಂಕೆ ಅವರು ಅವಳಿಗೆ ಧೈರ್ಯ ತುಂಬಿ ಅವಳನ್ನು ತನ್ನ ಬೈಕನಲ್ಲಿ ಕುರಿಸಿ ಅಲ್ಲಿನ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸ್ವತಃ ಹೋಗಿ ಸಮಯ ಇದ್ದಾಗಲೆ ಅವಳ ಬ್ಯಾಗನ್ನು ಹುಡಕಿ ಅಧಿಕಾರಿ ಸಮಯ ಪ್ರಜ್ಞೆಯಿಂದ ಸ್ವತ ಅವಳನ್ನು ಪರೀಕ್ಷಾ ಕೇಂದ್ರದ ಒಳಗೆ ಸೇರಿಸಿ ತಮ್ಮ ಕರ್ತವ್ಯ ಪಾಲನೆ ಮಾಡಿ ಮಾನವೀಯತೆ ಮೆರೆದರು..
ಅಷ್ಟರಲ್ಲಿ ಅಧಿಕಾರಿ ಬಗ್ಗೆ ಅಲ್ಲಿದ್ದ ಪೋಷಕರು ತುಂಬಾ ಹೆಮ್ಮೆಯಿಂದ ಮೆಚ್ಚುಗೆ ವ್ಯಕ್ತಪಡಿಸಿದರು. ಅಧಿಕಾರಿ ಶ್ರೀ ಶಿವಾಜಿ ಸಾಳುಂಕೆ ಅವರ ಕಣ್ಣು ತ್ಯಾವ ಕೊಂಡಿದ್ದವು ನೋಡಿದ ಎಲ್ಲರೂ ಅವರಿಗೆ ಅಭಿನಂದನೆಗಳು ತಿಳಸಿ ಶ್ಲಾಘಿಸಿದರು.