ವರದಿ: ಸ್ಟೀಫನ್ ಜೇಮ್ಸ್.
ಬೆಳಗಾವಿ: ಧಾರ್ಮಿಕ ಆಚರಣೆಯ ಕೇಂದ್ರ ಬಿಂದುವಾದ ನವರಾತ್ರಿಯ ಶ್ರೀ ದುರ್ಗಾಮಾತಾ ದೌಡ್ ಇಂದಿನಿಂದ ಆರಂಭಗೊಂಡಿತು. ದೇವ ದೇಶ ಮತ್ತು ಧರ್ಮ ಜಾಗೃತಿಯನ್ನು ಮೂಡಿಸುತ್ತ ನಡೆದ ಮೊದಲ ದಿನದ ದೌಡಗೆ ಬೆಳಗಾವಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ನವರಾತ್ರಿಯ ಮೊದಲ ದಿನ ಶೈಲಪುತ್ರಿಯ ಆರಾಧನೆಯೊಂದಿಗೆ ಶ್ರೀ ಶಿವಪ್ರತಿಷ್ಠಾನ ಹಿಂದೂಸ್ತಾನನ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಶ್ರೀ ದುರ್ಗಾಮಾತಾದೌಡ್ ಆರಂಭಗೊಂಡಿತು.
ಡಾ. ಶ್ಯಾಮಾ ಪ್ರಸಾದ ಮುಖರ್ಜಿ ರಸ್ತೆಯಲ್ಲಿರುವ ಉದ್ಯಾನದಲ್ಲಿ ಛತ್ರಪತಿ ಶಿವಾಜೀ ಮಹಾರಾಜರ ಮೂರ್ತಿಗೆ ಛತ್ರೆ ಗುರುಜೀ ಸೇರಿದಂತೆ ಗಣ್ಯರಿಂದ ಪೂಜೆ ಸಲ್ಲಿಸಿ ಪ್ರೇರಣಾ ಮಂತ್ರದೊಂದಿಗೆ ಧ್ವಜಾರೋಹನ ಮಾಡಲಾಯಿತು. ನಂತರ ದೌಡ್, ಆರಂಭಗೊಂಡು, ಹುಳಬತ್ತೆ ಕಾಲನಿ, ಮಹಾತ್ಮಾ ಫೂಲೇ ರೋಡ್, ಎಸ್.ಪಿ.ಎಂ ರೋಡ್, ಸಂತಸೇನಾ ರೋಡ್, ಪಾರಿದಾರ ಭವನ ರೋಡ್, ಶಾಸ್ತ್ರೀ ನಗರ, ಗೂಡ್ಡಶೇಡ್ ರೋಡ್, ಕಪಿಲೇಶ್ವರ ಕಾಲನಿ, ಶಾಸ್ತಿನಗರ ಆಠಲೇ ರೋಡ್, ಮಹಾದ್ವಾರ ರೋಡ್ ಕ್ರಾಸ್ ನಂ. 4, ಮಾಣಿಕಬಾಗ್ ರೋಡ್, ಸಮರ್ಥನಗರ, ತಾನಾಜೀ ಗಲ್ಲಿ, ಮಹಾದ್ವಾರ ರೋಡ್ ಕ್ರಾಸ್ ನಂ.3 ಮತ್ತು ಕ್ರಾಸ್ ನಂ.2 ಛತ್ರಪತಿ ಸಂಭಾಜೀ ಗಲ್ಲಿ ಮಾರ್ಗವಾಗಿ ಎಸ್.ಪಿ.ಎಂ ರಸ್ತೆಯಲ್ಲಿ ಸಂಚರಿಸಿತು.
ಈ ವೇಳೆ ಹಿಂದೂ ಧರ್ಮದ ಪಾರಂಪರೀಕ ವೇಷಭೂಷಣಗಳನ್ನು ತೊಟ್ಟಿ ದೌಡಿನಲ್ಲಿ ಭಾಗಿಯಾದ ಯುವತಿಯರು ತಮ್ಮ ಉತ್ಸಾಹವನ್ನು ಪ್ರದರ್ಶಿಸಿದರು. ತಮ್ಮ ಗಲ್ಲಿಗೆ ದೌಡ ಬರುತ್ತಿದ್ದಂತೆ ಆರತಿ ಎತ್ತಿ ದೌಡನ್ನು ಅತ್ಯಂತ ಭಕ್ತಭಾವದಲ್ಲಿ ಸ್ವಾಗತಿಸಲಾಯಿತು. ಕಳೆದ ರಾತ್ರಿಯಿಂದಲೇ ಶ್ರೀ ದುರ್ಗಾಮಾತಾ ದೌಡಿನ ಮಾರ್ಗವನ್ನು ಆಕರ್ಷಕ ರಂಗೋಲಿಗಳನ್ನು ಬಿಡಿಸಿ, ತಳಿರು ತೋರಣ, ಭಗವಾ ಪತಾಕೆಗಳನ್ನು ಹಚ್ಚಿ ಶೃಂಗರಿಸಲಾಗುತ್ತದೆ.
ದೌಡಿನ ಮಾರ್ಗದಲ್ಲಿ ಶ್ರೀ ದುರ್ಗಾಭವಾನಿ, ಹಿಂದವಿ ಸ್ವರಾಜ್ಯದ ಸಂಸ್ಥಾಪಕ ಛತ್ರಪತಿ ಶಿವಾಜೀ ಮಹಾರಾಜನ ಜನೋತ್ಸವದ ರೂಪಕಗಗಳು ಧಾರಕರಿಗಳ ಗಮನ ಸೆಳೆದವು. ಈ ಕುರಿತು ಇನ್ ನ್ಯೂಸ್; ಗೆ ಹೆಚ್ಚಿನ ಮಾಹಿತಿಯನ್ನು ನೀಡಿದ ಶ್ರೀ ಶಿವಪ್ರತಿಷ್ಠಾನ ಹಿಂದೂಸ್ತಾನನ ಪ್ರಮುಖರಾದ ಕಿರಣ್ ಗಾವಡೆ ಅವರು, ಇಂದಿನಿಂದ ಶ್ರೀ ದುರ್ಗಾಮಾತಾ ದೌಡ್ ಬೆಳಗಾವಿ ಮತ್ತು ಪ್ರದೇಶದಲ್ಲಿ ಆರಂಭಗೊಂಡಿದೆ. ಈ ಬಾರಿ 27ನೇ ವರ್ಷದ ದೌಡ್ ನಡೆಸಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಧಾರಕರಿಗಳ ಸಂಖ್ಯೆ ಹೆಚ್ಚಾಗುತ್ತದೆ. ಜಗತ್ತಿಗೆ ದೇವರು ಸುಖ ಸಮೃದ್ಧಿಯನ್ನು ನೀಡಲಿ ಮತ್ತು ದೇವ ದೇಶ ಮತ್ತು ಧರ್ಮವು ಅಖಂಡಿತವಾಗಿರಲಿ ಎಂಬ ಉದ್ದೇಶದಿಂದ ಈ ದೌಡನ್ನುಆಯೋಜಿಸಲಾಗುತ್ತದೆ ಎಂದರು.
ನಂತರ ದಕ್ಷಿಣ ಕಾಶಿ ಕಪಿಲೇಶ್ವರಕ್ಕೆ ತಲುಪಿ ಎಸಿಪಿ ಕಟ್ಟಿಮನಿ, ಎಸಿಪಿ ಶೇಖರಪ್ಪ ಸೇರಿದಂತೆ ಗಣ್ಯರಿಂದ ಮಹಾ ಆರತಿ ಕೈಗೊಂಡು ಧೈಯ ಮಂತ್ರದೊಂದಿಗೆ ಧ್ವಜಾರೋಹನ ಮಾಡಿ ಇಂದಿನ ದೌಡ್ ಸಮಾಪ್ತಿಗೊಳಿಸಲಾಯಿತು. ದೌಡಿನಲ್ಲಿ ಯುವಕ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು.
ನಾಳೆ ಮಂಗಳವಾರದಂದು ಬೆಳಗಾವಿ ರಾಣಿ ಚೆನ್ನಮ್ಮ ವೃತ್ತದಿಂದ ಶ್ರೀ ದುರ್ಗಾಮಾತಾ ದೌಡ್ ಆರಂಭಗೊಂಡು ಕಿಲ್ಲಾ ಶ್ರೀ ದುರ್ಗಾದೇವಿ ಮಂದಿರಕ್ಕೆ ತಲುಪಿ ಕೊನೆಗೊಳ್ಳಲಿದೆ.