Wednesday, September 24, 2025
Google search engine

Homeರಾಜ್ಯಸುದ್ದಿಜಾಲಮತ್ತೇ ಸರಕಾರಿ ಅಧಿಕಾರಿಯ‌ ಮೇಲೆ ದರ್ಪ ತೋರಿದ ಶಾಸಕ ಅಭಯ

ಮತ್ತೇ ಸರಕಾರಿ ಅಧಿಕಾರಿಯ‌ ಮೇಲೆ ದರ್ಪ ತೋರಿದ ಶಾಸಕ ಅಭಯ

  • ಕಮಿಷನರ್ ಮೇಲೆ ಕೈ ಎತ್ತಿ ಅವಾಜ್
  • ಅಂದು ಖಾಸಗಿ ಮಾರುಕಟ್ಟೆಗೆ ವಿರೋಧ ಇಂದು ಪ್ರಚೋಧನಕಾರಿ ಭಾಷಣ

ವರದಿ: ಸ್ಟೀಫನ್ ಜೇಮ್ಸ್

ಬೆಳಗಾವಿ: ಬಿಜೆಪಿ ಸರಕಾರದ ಅವಧಿಯಲ್ಲಿ ಕಳೆದ 2018ರಂದು ಜೈ ಕಿಸಾನ್ ಖಾಸಗಿ ಮಾರುಕಟ್ಟೆಗೆ ಅನುಮತಿ ನೀಡಬೇಡಿ ಎಂದು ಸರಕಾರಕ್ಕೆ ಪತ್ರ ಬರೆದಿದ್ದ ಶಾಸಕ ಅಭಯ ಪಾಟೀಲ್ ಮಂಗಳವಾರ ಜೈ ಕಿಸಾನ್ ಖಾಸಗಿ ಮಾರುಕಟ್ಟೆಯ ನಡೆಸಿದ ಹೋರಾಟದಲ್ಲಿ ಭಾಗಿಯಾಗಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಎಂದು ಪ್ರಚೋಧನಕಾರಿ ಭಾಷಣ‌ ಮಾಡಿದ್ದಲ್ಲದೆ, ಐಪಿಎಸ್ ಅಧಿಕಾರಿ, ನಗರ ಪೊಲೀಸ್ ಆಯುಕ್ತರಿಗೆ ಅವಮಾನ ಮಾಡಿದ್ದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಖಾಸಗಿ ಮಾರುಕಟ್ಟೆಯ ವರ್ತಕರ ಮನವೊಲಿಸಲು ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಅವರಿಗೆ ‘ಮಾನ ಮರ್ಯಾದೆ ಇದೆಯಾ’? ಎಂದು‌ ಏರು‌ ಧ್ವನಿಯಲ್ಲಿ ಮಾತನಾಡಿ ಕೈ ಎತ್ತಿ ಅವಮಾನ ಮಾಡಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಈ‌ ಹಿಂದೆ ಧರ್ಮಸ್ಥಳದ ಅಪಪ್ರಚಾರದ ವೇಳೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರಿಗೆ ಅವಮಾನ ಮಾಡಿದ್ದ ಅಭಯ ಪಾಟೀಲ್ ಇಂದು ನಗರ ಪೊಲೀಸ್ ಆಯುಕ್ತರಿಗೆ ಮಾನಮರ್ಯಾದೆ ಇದೆಯಾ ಎಂದು ಏರು ಧ್ವನಿಯಲ್ಲಿಯೇ ಮಾತನಾಡಿದ್ದು ವ್ಯಾಪಕ‌ ಟೀಕೆಗೆ ಕಾರಣವಾಗಿದೆ.

RELATED ARTICLES
- Advertisment -
Google search engine

Most Popular