Wednesday, September 24, 2025
Google search engine

Homeಅಪರಾಧನಕಲಿ ಮದ್ಯ ತಯಾರಿಕಾ ಅಡ್ಡೆಗೆ ದಾಳಿ

ನಕಲಿ ಮದ್ಯ ತಯಾರಿಕಾ ಅಡ್ಡೆಗೆ ದಾಳಿ

ಮಂಗಳೂರು (ದಕ್ಷಿಣ ಕನ್ನಡ) : ನಕಲಿ ಮದ್ಯ ತಯಾರಿಕಾ ಅಡ್ಡೆಗೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ ಘಟನೆ ಮಂಗಳೂರು‌ ನಗರದ ಕದ್ರಿ ಲೋಬೊ ಲೇನ್‌ನಲ್ಲಿ ನಡೆದಿದೆ. ಸುಮಾರು 5,57,690 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮೈಕಲ್ ಬ್ಲೈಸ್ ಮಿನೇಜಸ್ ಎಂಬಾತನ ಮನೆಯಲ್ಲಿ ನಕಲಿ ಮದ್ಯ ತಯಾರಿಸಲಾಗುತ್ತದೆ ಎಂಬ ಖಚಿತ ವರ್ತಮಾನ ಮೇರೆಗೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದರು. ಮೈಕಲ್ ಬ್ಲೈಸ್ ಮಿನೇಜಸ್‌ನ ಮನೆಯಲ್ಲಿ ತಯಾರಿಸಿಟ್ಟಿದ್ದ ನಕಲಿ ವೈನ್ – 238.500 ಲೀಟರ್, ವೈನ್ ತಯಾರಿಸುವ ಕೊಳೆ – 1,500 ಲೀಟರ್ , ಮದ್ಯ – 3.180 ಲೀಟರ್ , ನಕಲಿ ವೈನ್ ತಯಾರಿಸುವ ಸಲಕರಣೆಗಳನ್ನು ವಶಪಡಿಸಿಕೊಂಡಿದ್ದಾರೆ.

ಮಂಗಳೂರು ದಕ್ಷಿಣ ವಲಯ -1 ಕಚೇರಿಯ ಅಬಕಾರಿ ಉಪ ನಿರೀಕ್ಷಕರಾದ ಹರೀಶ್ ಪಿ ಅವರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಆರೋಪಿಯ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

RELATED ARTICLES
- Advertisment -
Google search engine

Most Popular