ಗುಂಡ್ಲುಪೇಟೆ: ಪಟ್ಟಣದ 18ನೇ ವಾರ್ಡ್ ನಿವಾಸಿ ಎಚ್.ಆರ್.ರಾಕೇಶ್ ಮೆದುಳು ನಿಷ್ಕ್ರಿಯವಾದ ಹಿನ್ನೆಲೆ ಅಂಗಾಂಗ ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಗುಂಡ್ಲುಪೇಟೆ ಪಟ್ಟಣದ 18ನೇ ನಿವಾಸಿಗಳ ರಾಜು ಮತ್ತು ಸುಮಂಗಲ ದಂಪತಿಗಳ ಪುತ್ರ ಎಚ್.ಆರ್.ರಾಕೇಶ್‍ಗೆ ದಿಢೀರ್ ಬ್ರೈನ್ ಸ್ಟ್ರೋಕ್ ಆದ ಹಿನ್ನೆಲೆ ಮೈಸೂರಿನ ಅಪೋಲೋ ಆಸ್ಪತ್ರೆಗೆ ಕೂಡಲೇ ದಾಖಲು ಮಾಡಲಾಗಿತ್ತು. ನಂತರ ಆಸ್ಪತ್ರೆಯಲ್ಲಿ ಎರಡು ರೀತಿಯ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೆದುಳು ನಿಷ್ಕ್ರಿಯವಾಗಿ ಸಾವನ್ನಪ್ಪಿದರು. ನಂತರ ಪೋಷಕರು ತಮ್ಮ ಪುತ್ರನ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿಗೆ ಸೂಚಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಈ ಮೂಲಕ ರಾಕೇಶ್ ತನ್ನ ಸಾವಿನಲ್ಲಿ ಅಂಗಾಂಗ ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದು ಇತರರಿಗೆ ಮಾದರಿಯಾಗಿದ್ದಾರೆ.
ಮೈಸೂರಿನ ಅಪೋಲೋ ಆಸ್ಪತ್ರೆಗೆ ರಾಕೇಶ್ ಹೃದಯ ಮತ್ತು ಹೃದಯದ ನಾಳ, ಶ್ವಾಸಕೋಸ ನಾಶಗಳು, ಪಿತ್ತಕೋಂಶ(ಲಿವರ್), ಮೂತ್ರಪಿಂಡ(ಕಿಡ್ನಿ), ಕಣ್ಣು, ಚರ್ಮ(ಸ್ಕೀನ್) ದಾನ ಮಾಡಿದ್ದಾರೆ.
ಶಸ್ತ್ರ ಚಿಕಿತ್ಸೆಗೆ ಸಹಾಯ ಹಸ್ತ: ಎಚ್.ಆರ್.ರಾಕೇಶ್ ಬ್ರೈನ್ ಸ್ಟ್ರೋಕ್ ಆದ ಹಿನ್ನಲೆ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಶಸ್ತ್ರಚಿಕಿತ್ಸೆಗೆ ಐದು ಲಕ್ಷ ಹಣ ಅವಶ್ಯಕತೆ ಇರುವುದನ್ನು ಮನಗಂಡ ತಾಲೂಕಿನ ಸಹೃಯಿಗಳು ರಾಕೇಶ್ ಬ್ಯಾಂಕ್ ಖಾತೆ ಹಾಗೂ ಗೂಗಲ್ ಫೇಗೆ ಹಣ ಹಾಕುವ ಮೂಲಕ ಸಹಾಯ ಹಸ್ತ ಚಾಚಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾಕೇಶ್ ಸಾವನ್ನಪ್ಪಿರುವ ಹಿನ್ನಲೆ ತಾಲೂಕಿನ ಹಲವು ಮಂದಿಗೆ ನೋವುಂಟಾಗಿದೆ.
ಇನ್ನೂ ರಾಕೇಶ್ ಮೃತದೇಹವನ್ನು ಮೈಸೂರಿನಿಂದ ಆಂಜುಲೆನ್ಸ್ ಮೂಲಕ ತೆಗೆದುಕೊಂದು ಗುಂಡ್ಲುಪೇಟೆಯಲ್ಲಿ ಅಂತ್ಯ ಕ್ರಿಯೆ ನೆರವೇರಿಸಲಾಯಿತು. ಈ ವೇಳೆ ಕುಟುಂಬಸ್ಥರು ಹಾಗು ಸಾವಿರಾರು ಮಂದಿ ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿತ್ತು.
ಸಂತಾಪ: ಮೆದುಳು ನಿಷ್ಕ್ರೀಯವಾಗಿ ರಾಕೇಶ್ ಸಾವನ್ನಪ್ಪಿದ ಹಿನ್ನೆಲೆ ಶಾಸಕ ಎಚ್.ಎಂ.ಗಣೇಶಪ್ರಸಾದ್, ಮಾಜಿ ಶಾಸಕ ಸಿ.ಎಸ್.ನಿರಂನಜಕುಮಾರ್, ಪುರಸಭೆ ಸದಸ್ಯ ಶಶಿಧರ್ ದೀಪು ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದರು.