Sunday, November 9, 2025
Google search engine

Homeರಾಜ್ಯಸುದ್ದಿಜಾಲಕಸಬಾ ಸಹಕಾರ ಸಂಘ 2024-25 ನೇ ಸಾಲಿನಲ್ಲಿ ₹20.25 ಲಕ್ಷ ಲಾಭಗಳಿಸಿದೆ: ಅಧ್ಯಕ್ಷ ಬಿ.ಆರ್. ಸತೀಶ್...

ಕಸಬಾ ಸಹಕಾರ ಸಂಘ 2024-25 ನೇ ಸಾಲಿನಲ್ಲಿ ₹20.25 ಲಕ್ಷ ಲಾಭಗಳಿಸಿದೆ: ಅಧ್ಯಕ್ಷ ಬಿ.ಆರ್. ಸತೀಶ್ ಕುಮಾರ್

ವರದಿ ರವಿಚಂದ್ರ ಬೂದಿತಿಟ್ಟು

ಪಿರಿಯಾಪಟ್ಟಣ: ತಾಲೂಕಿನ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2024 – 25 ನೇ ಸಾಲಿನಲ್ಲಿ 2ಆ0.25 ಲಕ್ಷ ರೂ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಬಿ.ಆರ್.ಸತೀಶ್ ಕುಮಾರ್ ತಿಳಿಸಿದರು.

ಪಟ್ಟಣದಲ್ಲಿರುವ ಸಂಘದ ಆವರಣದಲ್ಲಿ ಬುಧವಾರ ನಡೆದ 2024 – 25 ನೇ ಸಾಲಿನ ಸಂಘದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಕಳೆದ ಸಾಲಿನಲ್ಲಿ ಸಂಘವು ಮೈಸೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಿಂದ 10.53 ಕೋಟಿ ರೂ ಸಾಲ ಪಡೆದು ಸಂಘದ ಶೇರುದಾರ ಸದಸ್ಯರಿಗೆ ಅಲ್ಪಾವಧಿ ಸಾಲ ವಿತರಿಸಿದೆ ಎಂದು ತಿಳಿಸಿದರು. ಈ ಪೈಕಿ 2025 ರ ಮಾರ್ಚ್ ಅಂತ್ಯದ ವೇಳೆಗೆ ಸಾಲ ಪಡೆದ ಶೇರುದಾರರಿಂದ ಶೇ. 94 ರಷ್ಟು ಸಾಲದ ಹಣ ವಸೂಲಾತಿಯಾಗಿದ್ದು ಜಿಲ್ಲಾ ಬ್ಯಾಂಕಿಗೆ ಶೇ. 100 ರಷ್ಟು ಸಾಲದ ಹಣ ಪಾವತಿಸಲಾಗಿದೆ ಎಂದು ಮಾಹಿತಿ ನೀಡಿದರು.


ರಾಜ್ಯ ಸರ್ಕಾರವು ಶೂನ್ಯ ಬಡ್ಡಿ ದರದಲ್ಲಿ ಮೂರು ಲಕ್ಷದವರೆಗೆ ರೈತರಿಗೆ ಸಾಲದ ಸೌಲಭ್ಯ ಕಲ್ಪಿಸಿದ್ದು ಈ ಸೌಲಭ್ಯವು ಕೇವಲ ಅಲ್ಪಾವಧಿ ಕೆ ಸಿ ಸಿ ಸಾಲಕ್ಕೆ ಮಾತ್ರ ಅನ್ವಯವಾಗುತ್ತದೆ ಎಂದರು ರೈತರು ಉತ್ಪತ್ತಿಗಿಂತ ಹೆಚ್ಚಿನ ಮಟ್ಟದಲ್ಲಿ ಸಾಲ ಪಡೆಯುತ್ತಿರುವುದರಿಂದ ಮರುಪಾವತಿಗೆ ತೊಂದರೆಯಾಗುತ್ತಿದ್ದು ಶೂನ್ಯ ಬಡ್ಡಿ ದರದ ಸಾಲವನ್ನು ಸದುಪಯೋಗಪಡಿಸಿಕೊಂಡು ಉಳಿತಾಯ ಮನೋಭಾವವನ್ನು ಬೆಳೆಸಿಕೊಳ್ಳಬೇಕೆಂದು ಮನವಿ ಮಾಡಿದರು. ನಮ್ಮ ಸಹಕಾರ ಸಂಘದ ಉತ್ತಮ ವಹಿವಾಟನ್ನು ಗುರುತಿಸಿ ಸಂಘವನ್ನು 2024 – 25 ನೇ ಸಾಲಿಗೆ “ಬಿ” ತರಗತಿಯಲ್ಲಿ ವರ್ಗೀಕರಿಸಲಾಗಿದೆ ಎಂದರು. ಸಂಘದ ಸದಸ್ಯರು ನಾವು ಪಡೆದಿರುವ ಸಾಲದ ಹಣವನ್ನು ಸಕಾಲದಲ್ಲಿ ಪೂರ್ಣವಾಗಿ ಮರುಪಾವತಿ ಮಾಡಿ ಸಂಘದಿಂದ ದೊರೆಯಬಹುದಾದ ಇತರೆ ಸಾಲ ಸೌಲಭ್ಯಗಳನ್ನು ಪಡೆದು ತಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಿಕೊಂಡು ಸಂಘದ ಶ್ರೇಯೋಭಿವೃದ್ಧಿಗೆ ಕಾರಣರಾಗಬೇಕೆಂದುಮನವಿ ಮಾಡಿದರು.

ವಿ ಆರ್ ವೆಂಕಟೇಶ್ ಮಾತನಾಡಿ ಹಬಟೂರು ಗ್ರಾಮದಲ್ಲಿ ನೂತನವಾಗಿ ಆರಂಭಗೊಂಡಿರುವ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸರ್ಕಾರದಿಂದ ಬಂದಿರುವ ಮಾರ್ಗಸೂಚಿಯ ಬಗ್ಗೆ ಸಭೆಯಲ್ಲಿ ವಿವರಿಸಿದರು, ನಮ್ಮ ಸಂಘದ ಅಭಿವೃದ್ಧಿಗೆ ಎಲ್ಲ ಸದಸ್ಯರ ಸಹಕಾರ ಬೇಕಿದ್ದು ನೂತನ ಸಂಘಕ್ಕೆ ಹೋಗುವವಲು ಬಯಸುವವರು ಸಾಲವನ್ನು ಪಾವತಿ ಮಾಡಿ ಹೋಗಬಹುದು ಎಂದು ತಿಳಿಸಿದರು. ನಂತರ ಸಂಘದ ಕೆಲವು ಸದಸ್ಯರುಗಳು ಮಾತನಾಡಿ ಕಸಬಾ ಸಹಕಾರ ಸಂಘದಿಂದ ಯಾವ ರೈತರೂ ಅಲ್ಲಿಗೇ ವಲಸೆ ಹೋಗಬಾರದೆಂದು ಮನವಿ ಮಾಡಿದರು.

ನಂತರ ಸರ್ಕಾರ ಹೊರಡಿಸಿರುವ ನಿಯಮದಂತೆ ಚೌತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಾವ ಗ್ರಾಮಗಳನ್ನು ಬಿಟ್ಟುಕೊಡಬಾರದೆಂದು ಎಲ್ಲಾ ಸರ್ವ ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದರು. ಸಭೆಯ ಮಧ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲಿತ ಕೆಲವು ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಕೊನೆಗೆ ಆಡಳಿತ ಮಂಡಲಿಯ ನಿರ್ದೇಶಕರು ಎಲ್ಲರನ್ನೂ ಸಮಾಧಾನಪಡಿಸಿದರು.

ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಚ್.ಆರ್.ಪ್ರವೀಣ್ ಮಾತನಾಡಿ 2024 – 25 ನೇ ಸಾಲಿನಲ್ಲಿ ಸಂಘದ ಆರ್ಥಿಕ ವಹಿವಾಟು ಮತ್ತು ಖರ್ಚು ವೆಚ್ಚದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ತೇರ್ಗಡೆ ಹೊಂದಿದ ಸಂಘದ ಷೇರುದಾರರ ನಾಲ್ವರು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು. ಸಂಘದಲ್ಲಿ ಉತ್ತಮ ಮೊತ್ತದ ಠೇವಣಿಯನ್ನು ಇಟ್ಟಿರುವ ಷೇರುದಾರರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ರಾಮೇಗೌಡ, ನಿರ್ದೇಶಕರಾದ ಹೆಚ್.ಬಿ.ಸುರೇಶ್, ಪಿ.ಕೆ.ಕುಮಾರ್, ಹೆಚ್.ಬಿ.ರಮೇಶ್, ವಿ.ಆರ್.ವೆಂಕಟೇಶ್, ಕರಿನಾಯಕ, ಸೈಯದ್ ಜಮೀಲ್, ರಾಮಕೃಷ್ಣ, ಗೀತಾ, ಎಸ್.ಜೆ.ನಳಿನಿ, ಶೋಭಾ, ಸಿಬ್ಬಂದಿಗಳಾದ ಸಿ.ಎಂ.ಜ್ಯೋತಿ, ಸಾಗರ್.ಕೆ.ಗೌಡ, ಕುಮಾರಸ್ವಾಮಿ, ಕೆ.ನಾಗರಾಜ್, ಮನೋಹರ್ , ಸೇರುಧರರಾದ ರಾಮಚಂದ್ರ, ಕೃಷ್ಣೇಗೌಡ, ಶಿವರಾಜು, ಸ್ವಾಮಿ, ಚಂದ್ರು, ಮಹದೇವ್, ಕೋಡಿ ಗೌಡ, ಕಾಂತ್ರಾಜು ಸೇರಿದಂತೆ ಮತ್ತಿತರರು ಇದ್ದರು.

RELATED ARTICLES
- Advertisment -
Google search engine

Most Popular