ವರದಿ ರವಿಚಂದ್ರ ಬೂದಿ ತಿಟ್ಟು
ಪಿರಿಯಾಪಟ್ಟಣ : ರಾಜ್ಯ ಸರಕಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಸೆ.22 ರಿಂದ ಅ.7 ರವರಿಗೆ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ತಾಲ್ಲೂಕಿನ ಎಲ್ಲಾ ಗೊಲ್ಲ ಸಮುದಾಯದವರು ತಮ್ಮ ಉಪ ಪಂಗಡಗಳನ್ನು ನಮೂದಿಸದೇ ಗೊಲ್ಲ ಎಂದೇ ನಮೂದಿಸಬೇಕು ಎಂದು ಪಿರಿಯಾಪಟ್ಟಣ ತಾಲ್ಲೂಕು ಯಾದವರ ಸಂಘದ ಅಧ್ಯಕ್ಷ ಪಿ.ಡಿ.ಪ್ರಸನ್ನ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕೆ ಹೇಳಿಕೆ ನೀಡಿರುವ ಅವರು ಜಾತಿ ಗಣತಿ ಸಮೀಕ್ಷೆಯಲ್ಲಿ ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲಿ ವಾಸಿಸುತ್ತಿರುವ ಗೊಲ್ಲ ಸಮುದಾಯದವರೆಲ್ಲರೂ ಗೊಲ್ಲ ಎಂದೇ ನಮೂದಿಸಬೇಕು. ಗಣತಿದಾರರು ತಮ್ಮ ಮನೆಗೆ ಬಂದಾಗ ಸಮಾಜದ ಬಂದುಗಳು ಜಾತಿ ಕಾಲಂ ನಂ 9 ರಲ್ಲಿ ಗೊಲ್ಲ ಎಂದೇ ಕಡ್ಡಾಯವಾಗಿ ನಮೂದಿಸಬೇಕು ಇದಲ್ಲದೆ ಉಪಜಾತಿ ಕಾಲಂ ನಲ್ಲಿ ಗೊಲ್ಲ ಜಾತಿ ಎಂದೇ ಬರೆಸಬೇಕು.
ಇನ್ನಿತರ ಯಾವುದೇ ಉಪಜಾತಿಗಳ ಹೆಸರುಗಳನ್ನು ಬರೆಸಬಾರದು ಇದರಿಂದ ತಾಲ್ಲೂಕಿನಲ್ಲಿರುವ ಸಮುದಾಯದ ಅಂಕಿ ಅಂಶಗಳು ಸರಕಾರಕ್ಕೆ ಲಭ್ಯವಾಗುವುದರ ಮೂಲಕ ಸರ್ಕಾರದಿಂದ ಸಾಮಾಜಿಕ, ಶೈಕ್ಷಣಿಕ, ಉದ್ಯೋಗ ಮತ್ತು ಆರ್ಥಿಕ ಇತ್ಯಾದಿ ಸರ್ಕಾರದ ಮೀಸಲಾತಿ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ ಅದರಿಂದ ಎಲ್ಲರೂ ಯಾವುದೇ ಉಪಜಾತಿಗಳನ್ನುಬರೆಸಬಾರದು ಎಂದು ಮನವಿ ಮಾಡಿದ್ದಾರೆ.



