Thursday, September 25, 2025
Google search engine

Homeರಾಜ್ಯಸುದ್ದಿಜಾಲಸೆಪ್ಟೆಂಬರ್ 27ರಂದು ಹುಲಿವೇಷ ಪ್ರದರ್ಶನ: ಲಯನ್ಸ್ ಸಂಸ್ಥೆಯಿಂದ ಸಜ್ಜು

ಸೆಪ್ಟೆಂಬರ್ 27ರಂದು ಹುಲಿವೇಷ ಪ್ರದರ್ಶನ: ಲಯನ್ಸ್ ಸಂಸ್ಥೆಯಿಂದ ಸಜ್ಜು

ಮಂಗಳೂರು (ದಕ್ಷಿಣ ಕನ್ನಡ) : ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆ, ಜಿಲ್ಲೆ 317 ಡಿ , ದಕ್ಷಿಣ ಕನ್ನಡ, ಹಾಸನ, ಕೊಡಗು, ಚಿಕ್ಕಮಗಳೂರು ಹೀಗೆ 4 ಕಂದಾಯ ಜಿಲ್ಲೆಯನ್ನು ಒಳಗೊಂಡ ಲಯನ್ಸ್ ಸೇವಾ ಸಂಸ್ಥೆಯು ಲಯನ್ಸ್ ಜಿಲ್ಲಾ ರಾಜ್ಯಪಾಲರಾದ ಲಯನ್ ಕುಡ್ಪಿ ಅರವಿಂದ್ ಶೆಣೈ ನೇತೃತ್ವದಲ್ಲಿ ತುಳುನಾಡಿನ ಸಾಂಸ್ಕೃತಿಕ ಪ್ರತೀಕವಾಗಿರುವ ಹುಲಿ ವೇಷದ ಪ್ರದರ್ಶವನ್ನು ಸತತ ೩ ನೇ ವರ್ಷ ಏರ್ಪಡಿಸಲಾಗಿದೆ.

ಲಯನ್ಸ್ ಮತ್ತು ಲಿಯೋ ಸದಸ್ಯರು ಹಾಗೂ ಜಿಲ್ಲೆಯ ೨ ಆಯ್ದ ಹುಲಿವೇಷದ ತಂಡಗಳಿಗೆ ಆಹ್ವಾನ ನೀಡಿ ಸಿಂಹದ ಕಲೊಟು ಪಿಲಿಗೊಬ್ಬು ಎನ್ನುವ ಕಾರ್ಯಕ್ರಮವನ್ನು ಮಂಗಳೂರಿನ ಕದ್ರಿ ಬಯಲು ರಂಗ ಮಂದಿರದಲ್ಲಿ ಸೆಪ್ಟೆಂಬರ್ ೨೭ ರಂದು ಸಂಜೆ ೫ ಗಂಟೆಯಿಂದ ನಡೆಯಲಿದೆ ಎಂದು ಲಯನ್ಸ್ ಜಿಲ್ಲಾ ಸಾರ್ವಜನಿಕ ಸಂಪರ್ಕ ಅಧಿಕಾರಿ ಲಯನ್ ಸುದರ್ಶನ್ ಪಡಿಯಾರ್ ತಿಳಿಸಿದ್ದಾರೆ. ಅವರು ಮಂಗಳೂರಿನ ಪತ್ರಿಕಾಭವನದಲ್ಲಿ ಈ ಬಗ್ಗೆ ಮಾಹಿತಿ ನೀಡಿ.

ಈ ಕಾರ್ಯಕ್ರಮವನ್ನು ‘ನಾವು ಪ್ರತಿವರ್ಷ ನವರಾತ್ರಿಯ ಸಮಯದಲ್ಲಿ ಮಾಡುತ್ತಾ ಬಂದಿದ್ದೇವೆ. ಈ ಕಾರ್ಯಕ್ರಮದ ಮುಖ್ಯ ಸಂಯೋಜಕ ಲಯನ್ ಗಣೇಶ್ ಶೆಟ್ಟಿ ನೇತೃತ್ವದಲ್ಲಿ ಲಯನ್ಸ್ ಜಿಲ್ಲೆಯ ಹಲವಾರು ಜಿಲ್ಲಾಧ್ಯಕ್ಷರುಗಳನ್ನು ಸೇರಿಸಿಕೊಂಡು ಈ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ. ಅಂದು ನಗರದ ಮಲ್ಲಿಕಟ್ಟೆಯ ಲಯನ್ಸ್ ಸೇವಾ ಮಂದಿರದಿಂದ ಸಂಜೆ 4 ಗಂಟೆಗೆ ಹುಲಿ ವೇಷ ಕುಣಿತಗಳ ಭವ್ಯ ಮೆರವಣಿಗೆ ಕದ್ರಿ ಬಯಲು ರಂಗಮಂಟಪಕ್ಕೆ ಬರುವುದು, ಸಂಜೆ 5 ರಿಂದ ಸಭಾ ಕಾರ್ಯಕ್ರಮ ಶುರುವಾಗಲಿದೆ ಎಂದರು.

RELATED ARTICLES
- Advertisment -
Google search engine

Most Popular