Friday, September 26, 2025
Google search engine

Homeಕ್ರೀಡೆಭಾರತ ಟೆಸ್ಟ್ ತಂಡ ಪ್ರಕಟ : 7 ಆಟಗಾರರು ಔಟ್

ಭಾರತ ಟೆಸ್ಟ್ ತಂಡ ಪ್ರಕಟ : 7 ಆಟಗಾರರು ಔಟ್

ವರದಿ: ಸ್ಟೀಫನ್ ಜೇಮ್ಸ್

ವೆಸ್ಟ್‌ ಇಂಡೀಸ್‌ ವಿರುದ್ದದ ಸರಣಿಗಾಗಿ ಬಾರತ ಟೆಸ್ಟ್‌ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರುಗಳ ಈ ತಂಡವನ್ನು ಶುಭ್‌ಮನ್ ಗಿಲ್‌ ಮುನ್ನಡೆಸಲಿದ್ದಾರೆ. ಉಪನಾಯಕನಾಗಿ ರವೀಂದ್ರ ಜಡೇಜಾ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ದೇವದತ್ ಪಡಿಕ್ಕಲ್, ವಿಕೆಟ್ ಕೀಪರ್ ಆಗಿ ಧ್ರುವ್ ಜುರೆಲ್ , ಮತ್ತೊಬ್ಬ ವಿಕೆಟ್‌ ಕೀಪರ್‌ ಆಗಿ ಎನ್ ಜಗದೀಸನ್, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಜಸ್​ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ನಿತೀಶ್ ಕುಮಾರ್ ರೆಡ್ಡಿ ಟೆಸ್ಟ್‌ ತಂಡಕ್ಕೆ ಸೆಲೆಕ್ಟ್‌ ಆಗಿದ್ದಾರೆ. ಆರಂಭಿಕರಾಗಿ ಯಶಸ್ವಿ ಜೈಸ್ವಾಲ್ ಹಾಗೂ ಕೆಎಲ್ ರಾಹುಲ್ ಇನಿಂಗ್ಸ್ ಆರಂಭಿಸಲಿದ್ದಾರೆ.

ಇನ್ನು ಭಾರತ ಟೆಸ್ಟ್ ತಂಡದಲ್ಲಿ 7 ಆಟಗಾರರಿಗೆ ಸ್ಥಾನ ಲಭಿಸಿಲ್ಲ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾ ಪರ ವಿಕೆಟ್ ಕೀಪರ್ ಬ್ಯಾಟರ್ ಆಗಿ ರಿಷಭ್ ಪಂತ್, ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದಾರೆ. ಆಂಗ್ಲರ ವಿರುದ್ಧದ ಸರಣಿಯಲ್ಲಿ 4 ಮ್ಯಾಚ್ ಆಡಿದ್ದ ಕರುಣ್ ನಾಯರ್​ಗೆ ಈ ಬಾರಿ ಅವಕಾಶ ಸಿಕ್ಕಿಲ್ಲ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾ ಪರ ಶಾರ್ದೂಲ್ ಆಗಿ ಕಣಕ್ಕಿಳಿದಿದ್ದ ಠಾಕೂರ್ ಆಲ್​ರೌಂಡರ್ ಹೊರಗಿಡಲಾಗಿದೆ. ಟೀಮ್ ಇಂಡಿಯಾದ ಬ್ಯಾಕಪ್ ಓಪನರ್ ಆಗಿ ಕಾಣಿಸಿಕೊಂಡಿದ್ದ ಅಭಿಮನ್ಯು ಈಶ್ವರನ್ ಅವರನ್ನು ಕೈ ಬಿಡಲಾಗಿದೆ. ಆಕಾಶ್ ದೀಪ್ ಅವರನ್ನೂ ಸಹ ಟೆಸ್ಟ್‌ನಿಂದ ಕೈಬಿಡಲಾಗಿದೆ. ಅನ್ಶುಲ್ ಕಂಬೋಜ್ ಅವರನ್ನು ಕೈಬಿಡಲಾಗಿದೆ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಹೆಚ್ಚುವರಿ ವೇಗಿಯಾಗಿ ಕಾಣಿಸಿಕೊಂಡಿದ್ದ ಅರ್ಷದೀಪ್ ಸಿಂಗ್ ಅವರನ್ನು ಈ ಬಾರಿ ಆಯ್ಕೆ ಮಾಡಿಲ್ಲ.

RELATED ARTICLES
- Advertisment -
Google search engine

Most Popular