Friday, September 26, 2025
Google search engine

Homeರಾಜ್ಯಸುದ್ದಿಜಾಲಕೆ.ಆರ್ ನಗರದಲ್ಲಿ ವ್ಯವಸಾಯೋತ್ಪನ್ನ ಸಹಕಾರ ಸಂಘದ ವಾರ್ಷಿಕ ಮಹಾಸಭೆ

ಕೆ.ಆರ್ ನಗರದಲ್ಲಿ ವ್ಯವಸಾಯೋತ್ಪನ್ನ ಸಹಕಾರ ಸಂಘದ ವಾರ್ಷಿಕ ಮಹಾಸಭೆ

ಕೆ ಆರ್ ನಗರ: ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ 2024 25 ನೇ ಸಾಲಿನ ವಾರ್ಷಿಕ ಮಹಸಭೆಯು ಸಂಘದ ವಿಶೇಷ ಅಧಿಕಾರಿಗಳಾದ ಎಸ್ ರವಿ ರವರ ಅಧ್ಯಕ್ಷತೆಯಲ್ಲಿ ನಡೆದು ಸಹಕಾರಿ ರೈತರ ಸಮ್ಮುಖದಲ್ಲಿ ವಿಶೇಷ ಹಾಗೂ ಅಗತ್ಯ ನಿರ್ಣಯಗಳನ್ನು ಕೈಗೊಳ್ಳಲು ತೀರ್ಮಾನಿಸಲಾಗಿತ್ತು.

ಪಟ್ಟಣದ ಟಿ ಎ ಪಿ ಸಿ ಎಂ ಎಸ್ ಸಿ ನ ಸಭಾಂಗಣದಲ್ಲಿ ನಡೆದ 2024 25 ನೇ ಸಾಲಿನ ಸರ್ವ ಸದಸ್ಯರ ಮಹಾಸಭೆಯ ಉದ್ಘಾಟನೆಯನ್ನು ಮಾಡಿದ ಸಂಘದ ವಿಶೇಷ ಅಧಿಕಾರಿ ಎಸ್ ರವಿ ರವರು ಮಾತನಾಡಿ ನಮ್ಮ ವ್ಯವಸಾಯೋತ್ಪನ್ನ ಸಹಕಾರ ಸಂಘದಲ್ಲಿ ಆಡಳಿತ ಮಂಡಳಿ ಇಲ್ಲದೆ ಇರುವುದರಿಂದ ನನ್ನ ನೇತೃತ್ವದಲ್ಲಿ ಸಭೆಯನ್ನು ನಡೆಸುತ್ತಿದ್ದು ಎಲ್ಲಾ ರೈತರು ಸಹಕಾರ ನೀಡುವಂತೆ ಮನವಿ ಮಾಡಿದರು.


ನಂತರ ಮಾತನಾಡಿದ ರೈತ ಸೇರುದಾರರು ಹಿಂದಿನ ಆಡಳಿತ ಮಂಡಳಿಯ ಆಡಳಿತ ಅವಧಿಯಲ್ಲಿ ನಮ್ಮ ಸಹಕಾರ ಸಂಘದಲ್ಲಿ ಸಂಘದ ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಹಣ ದುರುಪಯೋಗ ಮಾಡಿರುವ ಬಗ್ಗೆ ಪ್ರತಿ ಸಭೆಯಲ್ಲಿಯೂ ಚರ್ಚಿಸಲಾಗುತ್ತಿದೆ ಆದರೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಕೆಲವು ಪ್ರಕರಣಗಳು ನ್ಯಾಯಾಲಯದ ಆದೇಶದಂತೆ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಅನುಮತಿ ನೀಡಿದರು ಕ್ರಮ ಕೈಗೊಂಡಿಲ್ಲ ಏಕೆ ಇನ್ನು ಕೆಲವು ಪ್ರಕರಣಗಳು ನ್ಯಾಯಾಲಯದಲ್ಲಿ ಇರುವುದರಿಂದ ಅವುಗಳನ್ನು ಬೇಗ ಇತ್ಯರ್ಥಗೊಳಿಸುವಂತೆ ಸಭೆಯಲ್ಲಿದ್ದ ಎಲ್ಲಾ ರೈತ ಮುಖಂಡರು ವಕ್ಕರಿನಿಂದ ಒತ್ತಾಯ ಮಾಡಿದರು.

ಯಾವುದೇ ಸಹಕಾರ ಸಂಸ್ಥೆಗಳು ಸುಗಮವಾಗಿ ಆಡಳಿತ ನಡೆಸಲು ಆಡಳಿತ ಮಂಡಳಿ ಇರಬೇಕಾಗಿರುತ್ತದೆ ಆದರೆ ನಮ್ಮ ವ್ಯವಸಾಯೋತ್ಪನ್ನ ಸಹಕಾರ ಸಂಘದಲ್ಲಿ ಆಡಳಿತಾಧಿಕಾರಿ ನೇಮಕಗೊಂಡು ಆರು ತಿಂಗಳು ಕಳೆದರೂ ಚುನಾವಣೆ ನಡೆಸುತ್ತಿಲ್ಲ ಏಕೆ ಶೀಘ್ರ ಸಹಕಾರ ಸಂಘಕ್ಕೆ ಚುನಾವಣೆಯನ್ನು ನಡೆಸುವ ಮೂಲಕ ಆಡಳಿತ ಮಂಡಳಿ ಚುನಾವಣೆ ನಡೆಸಲು ಅನುವು ಮಾಡಿಕೊಡಬೇಕು ಈ ಬಗ್ಗೆ ಈ ಕೂಡಲೇ ಸಹಕಾರ ಇಲಾಖೆ ಮತ್ತು ಮೇಲಾಧಿಕಾರಿಗಳಿಗೆ ಲಿಖಿತವಾಗಿ ಮನವಿ ಮಾಡಬೇಕೆಂದು ಒತ್ತಾಯಿಸಿದರು.

ಎಲ್ಲಾ ರೈತರ ಹೇಳಿಕೆಗಳನ್ನು ಸ್ವೀಕರಿಸಿದ ಸಹಕಾರ ಸಂಘದ ವಿಶೇಷ ಅಧಿಕಾರಿ ಎಸ್ ರವಿ ನಿಮ್ಮ ಬೇಡಿಕೆಯಂತೆ ಈಗಾಗಲೇ ಎಲ್ಲಾ ಮಾಹಿತಿಯನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಶೀಘ್ರವಾಗಿ ಚುನಾವಣೆಯನ್ನು ನಡೆಸುವಂತೆ ತಿಳಿಸಲಾಗಿದೆ ಇಲಾಖೆಯ ಮೇಲಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ ಮತ್ತು ನಮ್ಮ ಸಹಕಾರ ಸಂಘಕ್ಕೆ ಸಿಬ್ಬಂದಿಗಳು ಸೇರಿದಂತೆ ಇತರರು ನೀಡಬೇಕಾದ ಹಣವನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಅವರಿಗೆ ಕಾನೂನಿನ ಮೂಲಕ ತಿಳಿಸುವ ಜೊತೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಅಲ್ಲದೇ 2024 -25 ನೇ ಸಾಲಿನಲ್ಲಿ ಸಂಘವು 13.52.230 ರೂಗಳ ನಿವ್ವಳ ಲಾಭಗೊಳಿಸಿದ್ದು ಮುಂದಿನ ವರ್ಷಕ್ಕೆ ಇನ್ನು ಹೆಚ್ಚು ಲಾಭಗೊಳಿಸುವ ನಿರೀಕ್ಷೆಯಿದ್ದು ನಮ್ಮ ಈ ಸಹಕಾರ ಸಂಘವು ಸಹಕಾರ ತತ್ವಗಳಡಿ 1959ರಲ್ಲಿ ಪ್ರಾರಂಭವಾಗಿದ್ದು 31.03.2025ಕ್ಕೆ ಎಲ್ಲಾ ವರ್ಗದ ಸದಸ್ಯರಿಂದ 44.01.635 ಸೇರು ಬಂಡವಾಳ ಸಂಗ್ರಹವಾಗಿದ್ದು ಸಂಘವು ಅಭಿವೃದ್ಧಿಯ ಪತದತ್ತ ಸಾಗುತ್ತಿದೆ ಎಂದು ತಿಳಿಸಿದರು ಈ ರೀತಿಯಾಗಿ ಸಂಘವು ಮುಂದುವರಿಯಲು ಎಲ್ಲಾ ರೈತ ಸಹಕಾರ ಬಂಧುಗಳ ಸಹಕಾರ ಮುಖ್ಯವಾಗಿದ್ದು ಅವರೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಕಾರ್ಯಕ್ರಮದ ಆಯವ್ಯವನ್ನು ಮತ್ತು ಹಿಂದಿನ ಆಡಳಿತ ಮಂಡಳಿಯ ನಡವಳಿಯನ್ನು ಸರ್ವ ಸದಸ್ಯರ ಸಭೆಯಲ್ಲಿ ಸಂಘದ ಪ್ರಭಾರ ಕಾರ್ಯದರ್ಶಿ ಆರ್ ರವಿ ಮಂಡಿಸುವ ಮೂಲಕ ಎಲ್ಲ ಸದಸ್ಯರ ಒಪ್ಪಿಗೆಯನ್ನು ಪಡೆದರು ಸರ್ವ ಸದಸ್ಯರ ಸಭೆಯಲ್ಲಿ ಸಂಘದ ಮಾಜಿ ಕಾರ್ಯದರ್ಶಿ ಚಂದ್ರೇಗೌಡ ಸಂಘದ ಮಾಜಿ ಅಧ್ಯಕ್ಷ ಎಸ್ ಸಿದ್ದೇಗೌಡ ಪುರಸಭಾ ಸದಸ್ಯರಾದ ಕೋಳಿ ಪ್ರಕಾಶ್ ಒಕ್ಕಲಿಗ ಸಂಘದ ನಿರ್ದೇಶಕರಾದ ರಾಧಾಕೃಷ್ಣ ಸಂಪತ್ ಕುಮಾರ್ ರೈತ ಸೇರುದಾರರಾದ ಅಂಕನಹಳ್ಳಿ ಗೋಪಾಲ್ ಲೋಕನಾಥ್ ಕೃಷ್ಣೆಗೌಡ ಸಿದ್ದಾಪುರದ ಕಳಯ್ಯ ಸೀತಾರಾಮ್ ತೊಂಟ್ಟಪ್ಪ ನಾಯಕ ಮಂಜುನಾಥ್ ಸಂಘದ ಸಿಬ್ಬಂದಿಗಳಾದ ಎಚ್ಎಸ್ ನಟರಾಜ್ ಹೇಮಂತ್ ಕುಮಾರ್ ಸೇರಿದಂತೆ ರೈತರು ಸಿಬ್ಬಂದಿಗಳು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular