ಜಮಖಂಡಿ: ಗೃಹಲಕ್ಷ್ಮಿ ಯೋಜನೆಯ ನೋಂದಣಿಗೆ ಕರ್ನಾಟಕ ಒನ್ ಸಿಬ್ಬಂದಿ 130 ರೂ. ವಸೂಲಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜಮಖಂಡಿ ನಗರದ ಕರ್ನಾಟಕ ಒನ್ ಕೇಂದ್ರದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಉಚಿತ ನೋಂದಣಿ ಇದ್ದರು 130 ರೂಪಾಯಿ ಹಣ ಪೀಕುತ್ತಿದ್ದಾರೆ.
ನೋಂದಣಿಗೆ 100 ರೂ, ಲ್ಯಾಮಿನೇಷನ್ ಮಾಡಿಕೊಡಲು 30 ರೂ.ವಸೂಲಿ ಮಾಡುತ್ತಿದ್ದಾರೆ.
ಹಣ ವಸೂಲಿ ಮಾಡಿದರೆ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದರೂ ಕೂಡ ಸಿಬ್ಬಂದಿಗಳು ರಾಜಾರೋಷವಾಗಿ ಹಗಲು ದರೋಡೆ ಮಾಡುತ್ತಿರುವುದು ಕಂಡುಬಂದಿದೆ.