Saturday, October 4, 2025
Google search engine

Homeಸ್ಥಳೀಯಎಸ್.ಎಲ್. ಭೈರಪ್ಪರಿಗೆ ಮರಣೋತ್ತರ 'ಕರ್ನಾಟಕ ರತ್ನ' ನೀಡುವಂತೆ ಸಂಸದ ಯದುವೀರ್ ಆಗ್ರಹ

ಎಸ್.ಎಲ್. ಭೈರಪ್ಪರಿಗೆ ಮರಣೋತ್ತರ ‘ಕರ್ನಾಟಕ ರತ್ನ’ ನೀಡುವಂತೆ ಸಂಸದ ಯದುವೀರ್ ಆಗ್ರಹ

ಮೈಸೂರು : ಕನ್ನಡದ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಸಿಎಂ ಸಿದ್ದರಾಮಯ್ಯಗೆ ಸಂಸದ ಯದುವೀರ್ ಒಡೆಯರ್ ಪತ್ರ ಬರೆದಿದ್ದಾರೆ. 

ಈ ಕುರಿತು ಟ್ವೀಟ್ ಮಾಡಿರುವ ಸಂಸದ ಯದುವೀರ್ ಒಡೆಯರ್,ಕನ್ನಡದ ಜನಮನ್ನಣೆಯ ಮೇರು ಸಾಹಿತಿˌ ಮಹಾನ್ ಕಾದಂಬರಿಕಾರರು ಹಾಗೂ ಸರಸ್ವತಿ ಸಮ್ಮಾನ್ˌ ಪದ್ಮಭೂಷಣ ಡಾ. ಶ್ರೀ ಎಸ್. ಎಲ್. ಭೈರಪ್ಪ ಅವರ ಅಗಿಲಿಕೆಯು ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಅವರನ್ನು ಗೌರವಿಸಲು, ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡುವಂತೆ ಮತ್ತು ಮೈಸೂರು ನಗರ ಕೇಂದ್ರ ಗ್ರಂಥಾಲಯವನ್ನು ಅವರ ಸ್ಮರಣಾರ್ಥ ಮರುನಾಮಕರಣ ಮಾಡಬೇಕೆಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular